Advertisement
ವಿಜಯನಗರ ಜಿಲ್ಲಾ ಉದ್ಘಾಟನೆನಿಮಿತ್ತ ಅ.2 ಮತ್ತು 3ರಂದು ವಿಜಯನಗರ ಉತ್ಸವನಡೆಯಲಿದೆ. ಇದಕ್ಕಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿಭವ್ಯ ವೇದಿಕೆ ನಿರ್ಮಾಣ ಸಜ್ಜುಗೊಳಿಸಲಾಗುತ್ತಿದೆ.
Related Articles
Advertisement
ಪ್ರವೇಶ ದ್ವಾರದಲ್ಲಿ ಭುವನೇಶ್ವರಿ ಪ್ರತಿಮೆ: ವೇದಿಕೆ ಪ್ರವೇಶದ್ವಾರದಲ್ಲೇ ತಾಯಿ ಭುವನೇಶ್ವರಿ ಮೂರ್ತಿ ಪ್ರತಿಷ್ಠಾಪನೆಮಾಡಲಾಗುತ್ತಿದ್ದು, ಸುತ್ತಲು ಕನ್ನಡ ನಾಡನ್ನುಪ್ರತಿಬಿಂಬಿಸುವ ಚಿತ್ರಗಳು ಅನಾವರಣಗೊಳ್ಳಲಿವೆ.ಅನತಿದೂರದಲ್ಲೇ ಅಗ್ನಿಕುಂಡ ನಿರ್ಮಿಸಲಾಗುತ್ತಿದ್ದು,ಹಂಪಿಯಿಂದ ಜ್ಯೋತಿ ತರಲಾಗುತ್ತದೆ. ಜತೆಗೆ ಎಲ್ಲತಾಲೂಕಿನಿಂದ ಆಗಮಿಸುವ ಜ್ಯೋತಿಯನ್ನು ಈಕುಂಡದಲ್ಲಿ ಬೆಳಗಿಸಲಾಗುತ್ತದೆ. ಈಗಾಗಲೇ 250 ಕಲಾವಿದರು ವೇದಿಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಂಪಿ ಉತ್ಸವದಲ್ಲಿ ವೇದಿಕೆನಿರ್ಮಾಣದ ಅನುಭವ ಹೊಂದಿರುವ ಕಲಾವಿದರೇವೇದಿಕೆ ನಿರ್ಮಿಸುತ್ತಿದ್ದಾರೆ.
ಪುಸ್ತಕ ಮಳಿಗೆ: ವೇದಿಕೆ ಸುತ್ತ 30 ಸ್ಟಾಲ್‌ಗಳನ್ನುನಿರ್ಮಿಸಲಾಗುತ್ತಿದೆ. ಈ ಸ್ಟಾಲ್‌ಗಳಲ್ಲಿ ಅರಣ್ಯ,ಪರಿಸರ, ಪ್ರವಾಸೋದ್ಯಮ ಸೇರಿದಂತೆ ವಿವಿಧಇಲಾಖೆಗಳ ಕುರಿತು ಮಾಹಿತಿ ನೀಡುವ ಕಾರ್ಯಮಾಡಲಾಗುತ್ತದೆ.ಸಿಎಂ ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ವಿಜಯನಗರ ಜಿಲ್ಲೆಉದ್ಘಾಟಿಸಲಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಸಚಿವಆನಂದ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದು, ಹಲವುಸಚಿವರು ಭಾಗವಹಿಸಲಿದ್ದಾರೆ.
ಖ್ಯಾತ ಗಾಯಕರು: ಗಾಯಕಿ ಎಂ.ಡಿ. ಪಲ್ಲವಿ,ಅನನ್ಯ ಭಟ್ ಅವರು ಮೊದಲ ದಿನ ಹಾಡುಗಳನ್ನುಹಾಡಲಿದ್ದಾರೆ. ಖ್ಯಾತ ಡ್ರಮ್ ವಾದಕ ಶಿವಮಣಿ,ಪ್ರವೀಣ್ ಗೋಡಿRಂಡಿ ಆಗಮಿಸಲಿದ್ದಾರೆ. ನಿರುಪಮಾರಾಜೇಂದ್ರ ಅವರು ವಿಜಯನಗರ ನೃತ್ಯರೂಪಕಪ್ರದರ್ಶಿಸಲಿದ್ದಾರೆ. ಇನ್ನೂ ವೇದಿಕೆಯಲ್ಲಿ ಐತಿಹಾಸಿಕವಿಜಯನಗರ ಕಿರುಚಿತ್ರ ಮೂಡಿ ಬರಲಿದೆ. ಅ.3ರಂದುವಿಜಯಪ್ರಕಾಶ ಮತ್ತು ತಂಡ, ಲಕ್ಷ್ಮೀ ದುಬೆ, ಸತ್ಯವತಿಮಂಗ್ಲಿಬಾಯಿ ಆಗಮಿಸಲಿದ್ದಾರೆ.
ಪರಿಶೀಲನೆ: ನಗರದ ಜಿಲ್ಲಾ ಕ್ರೀಡಾಂಗಣಕ್ಕೆಸಚಿವ ಆನಂದ ಸಿಂಗ್ ಅವರು ಭೇಟಿ ನೀಡಿ,ನಿರ್ಮಾಣಗೊಳ್ಳುತ್ತಿರುವ ಭವ್ಯ ವೇದಿಕೆ ಸಿದ್ಧತೆ ಕಾರ್ಯವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿಸಂಸದ ವೈ.ದೇವೇಂದ್ರಪ್ಪ, ಮುಖಂಡ ನೇಮಿರಾಜುನಾಯ್ಕ, ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಇನ್ನಿತರರಿದ್ದರು.
ಪಿ.ಸತ್ಯನಾರಾಯಣ