Advertisement

Hosanagara ಹದಗೆಟ್ಟ ರಸ್ತೆಯನ್ನು ತಾವೇ ಸರಿ ಮಾಡಿಕೊಂಡ ಗ್ರಾಮಸ್ಥರು

10:32 PM Jul 29, 2024 | Shreeram Nayak |

ಹೊಸನಗರ: ತಾಲೂಕಿನ ನಿಟ್ಟೂರು ಸಮೀಪದ ಹೆಬ್ಬಿಗೆ, ಬರುವೆ ಸಂಪರ್ಕಿಸುವ ಕಲ್ಯಾಣಿಚೌಕ ರಸ್ತೆ ನಿರಂತರ ಮಳೆಯಿಂದ ಕೆಸರು ಗದ್ದೆಯಾಗಿದ್ದು, ಗ್ರಾಮಾಡಳಿತ ಈ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಕಲ್ಯಾಣಿ ಚೌಕ ಗ್ರಾಮಸ್ಥರೇ ರಸ್ತೆಗೆ ಕಲ್ಲು ತಂದು ಹಾಕಿ ರಿಪೇರಿ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

Advertisement

ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರತಿದಿನ ಕನಿಷ್ಠ 300 ರಿಂದ 400 ಜನರು ಓಡಾಡುವ ಕಲ್ಯಾಣಿ ಚೌಕ ರಸ್ತೆಯ 3.5 ಕಿಮಿ ಇದ್ದು, ಕಳೆದ 4 ವರ್ಷಗಳ ಹಿಂದೆ 1.5 ಕಿಮಿ ಮಾತ್ರ ಸರ್ವ ಋತು ರಸ್ತೆ ಮಾಡಲಾಗಿದೆ. ಉಳಿದ 1.5 ಕಿಮಿ ಕಚ್ಚಾ ರಸ್ತೆಯಾಗಿದ್ದು ಓಡಾಡಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.

ಮಳೆಗಾಲದಲ್ಲಂತೂ ಅಕ್ಷರಶಃ ಕೆಸರು ಗದ್ದೆಯಾಗಿ ಓಡಾಟ ನಡೆಸುವವರು ಇನ್ನಿಲ್ಲದ ಸಂಕಷ್ಟ ಅನುಭವಿಸುವಂತಾಗಿದೆ. ಶಾಸಕರಿಗೆ ಮತ್ತು ಗ್ರಾಮಪಂಚಾಯಿತಿಗೆ ಸಾಕಷ್ಟು ಭಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ವಾಗದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ತಾವೇ ಸೇರಿ ವಾಹನದಲ್ಲಿ ಕಲ್ಲನ್ನು ತಂದು ಕೆಸರಾದ ಜಾಗಕ್ಕೆ ಹಾಕಿ ಸರಿಪಡಿಸಿಕೊಂಡಿದ್ದಾರೆ.

ಜನ ಓಡಾಟ ನಡೆಸಲು ಸಾಧ್ಯವಾಗದೇ ಪರದಾಡುತ್ತಿದ್ದರೂ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೌನವಾಗಿರುವ ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಸರ್ಗದಾಮ ಮಂಜುನಾಥ, ಶಾಸ್ತ್ರಿ, ಕೃಷ್ಣ ಕಲ್ಯಾಣಿಚೌಕ, ಸುದೀಂಧ್ರ ಕಲ್ಯಾಣಿ ಚೌಕ, ನಾಗರಾಜ ಕಲ್ಯಾಣಿ ಚೌಕ, ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next