Advertisement

ನಾಳೆಯಿಂದ ಹೊಸಳ್ಳಿ ಬೂದೀಶ್ವರ ಜಾತ್ರಾ ಮಹೋತ್ಸವ

03:07 PM May 26, 2022 | Team Udayavani |

ಮುಳಗುಂದ: ಶಿವಯೋಗ ಸಿದ್ಧಿಯಿಂದ 775 ವರ್ಷ ಬಾಳಿದ ಮಹಾ ತಪಸ್ವಿ ಜ|ಬೂದೀಶ್ವರ ಶಿವಯೋಗಿಗಳ ಜಾತ್ರೆಯ ಅಂಗವಾಗಿ ಶರಣ ಸಂಸ್ಕೃತಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮೇ 27 ರಿಂದ 30 ರ ವರೆಗೆ ಜ| ಅಭಿನವ ಬೂದೀಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯಲಿದೆ.

Advertisement

ಮೇ 26 ರಂದು ಬೆಳಗ್ಗೆ 8.30ಕ್ಕೆ ಷಟಸ್ಥಲ ಧ್ವಜಾರೋಹಣ ಹಾಗೂ ಮಹಾರಥಕ್ಕೆ ಕಳಸಾರೋಹಣ ನಡೆಯುವುದು. ಮೇ 27 ರಂದು ಬೆಳಗ್ಗೆ 11.30 ಕ್ಕೆ ಶರಣಮ್ಮ ಹಾಗೂ ಮಹಾಲಕ್ಷ್ಮೀ  ಪೂಜೆ, ಲಘು ರಥೋತ್ಸವ, ಚಂದ್ರಶೇಖರಪ್ಪ ಮಡಿವಾಳರ ಅವರಿಂದ ಪ್ರಸಾದ ಸೇವೆ ಜರುಗುವುದು.

ಮೇ 28 ರಂದು ಬೆಳಗ್ಗೆ 7.30ಕ್ಕೆ ಅಯ್ನಾಚಾರ ದೀಕ್ಷಾ ಕಾರ್ಯಕ್ರಮ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳಿಂದ ನೆರವೇರುವುದು. ಮೇ 28 ರಂದು ಬೆಳಗ್ಗೆ 10.30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವನ್ನು ಕಮತಗಿ ಹುಚ್ಚೇಶ್ವರ ಸ್ವಾಮೀಜಿ ವಹಿಸುವರು. ಅತಿಥಿಗಳಾಗಿ ಎಚ್‌.ಕೆ. ಪಾಟೀಲ, ಅಪ್ಪಣ್ಣ ಇನಾಮತಿ, ರಾಜಣ್ಣ ಕೊರವಿ, ವಿಜಯ ಗುಡ್ಡದ, ಪ್ರಭು ದಂಡಾವತಿಮಠ, ಶಿವಯೋಗಿ ಸುರಕೋಡ, ಶೇಖಪ್ಪ ಅಂಗಡಿ, ಅಮರ ಗುಡಿಸಾಗರ, ಈಶ್ವರ ಕಾಳಪ್ಪನವರ ಭಾಗವಹಿಸುವರು.

ಡಾ|ಬಿ.ಆರ್‌. ಅಂಬೇಡ್ಕರ್‌ ಕಲಾ ತಂಡ ಹಾಗೂ ವಿರೂಪಾಕ್ಷಪ್ಪ ಗೂರನವರ ತಂಡದಿಂದ ಜಾನಪದ ಸಂಭ್ರಮ ಜರುಗುವುದು. ಮೇ 28 ರಂದು ಸಾಯಂಕಾಲ 4.30 ಕ್ಕೆ ಜಂಗಮೋತ್ಸವ ಹಾಗೂ ಸಾಯಂಕಾಲ 6.15 ಕ್ಕೆ ಜ|ಬೂದೀಶ್ವರ ಶ್ರೀಗಳ ರಥೋತ್ಸವ, ಸಾಯಂಕಾಲ 6.30 ಕ್ಕೆ ಧರ್ಮ ಚಿಂತನ ಗೋಷ್ಠಿಯ ಸಾನ್ನಿಧ್ಯವನ್ನು ಹಾಲಕೇರಿ ಅನ್ನದಾನೀಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ವಹಿಸುವರು.

ಮುನವಳ್ಳಿ ಸೋಮಶೇಖರ ಮಠದ ಮುರುಘರಾಜೇದ್ರ ಸ್ವಾಮೀಜಿ, ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು, ಬಳಗಾನೂರಿನ ಶಿವಶಾಂತವೀರ ಶರಣರು ಗ್ರಂಥ ಬಿಡುಗಡೆ ಮಾಡುವರು. ಶಂಕರಗೌಡ ಬಿರಾದಾರ ಪುಸ್ತಕ ಪರಿಚಯ ಮಾಡುವರು. ಅತಿಥಿಗಳಾಗಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಡಿ.ಆರ್‌. ಪಾಟೀಲ ಭಾಗವಹಿಸುವರು.

Advertisement

ಕಾರ್ಯಕ್ರಮದಲ್ಲಿ ಶಿವಯ್ಯ ರೊಟ್ಟಿಮಠ,ನೀಲಮ್ಮ ರೊಟ್ಟಿಮಠ, ಸುಮಾ ರೊಟ್ಟಿಮಠ, ಅಣ್ಣಾಸಾಹೇಬ ಬಾಗಿ ಅವರನ್ನು ಸನ್ಮಾನಿಸಲಾಗುವುದು. ಶ್ರೀಕಾಂತ ಬಾಕಳೆ ಅವರಿಂದ ಸಂಗೀತ ಕಾರ್ಯಕ್ರಮ ಜರುಗುವುದು. ಶೇಖಪ್ಪ ರೋಣದ ಅವರಿಂದ ತುಲಾಭಾರ ಸೇವೆ ಜರುಗುವುದು. ಉಳುವಪ್ಪ ಅಂಗಡಿ ಅವರಿಂದ ಪ್ರಸಾದ ಸೇವೆ, ರಾತ್ರಿ 10.30ಕ್ಕೆ ಕಾಲು ಕೆದರಿದ ಹುಲಿ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

 

ಮೇ 29 ರಂದು ಸಾಯಂಕಾಲ 5.30ಕ್ಕೆ ಅಭಿನವ ಬೂದೀಶ್ವರ ಶ್ರೀಗಳಿಂದ ಕಡುಬಿನ ಕಾಳಗ, ನಂತರ ನಡೆಯುವ ಧರ್ಮ ಚಿಂತನ ಗೋಷ್ಠಿಯ ಸಾನ್ನಿಧ್ಯವನ್ನು ಕುಂದರಗಿಯ ಅಮರ ಶಿದ್ಧೇಶ್ವರ ಸ್ವಾಮೀಜಿ, ಅಣ್ಣಿಗೇರಿಯ ಶಿವಕುಮಾರ ಸ್ವಾಮೀಜಿ, ನರಗುಂದದ ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ವಹಿಸುವರು.

ಅನಿತಾ ವಿಜಯಕುಮಾರ ಗಡ್ಡಿ, ರಾಜು ಕೆಂಚನಗೌಡ್ರ, ರಾಜು ಮಟ್ಟಿ ಅವರ ಸನ್ಮಾನ ಜರುಗುವುದು. ಸಂಗಪ್ಪ ಬ್ಯಾಹಟ್ಟಿ ಅವರಿಂದ ಪ್ರಸಾದ ಸೇವೆ ಜರುಗುವುದು.

ಮೇ 29 ರಂದು ಸಂಜೆ 7 ಗಂಟೆಗೆ ಸಾಂಸ್ಕೃತಿ ಕ ಕಾರ್ಯಕ್ರಮ, ಮೇ 30 ರಂದು ಸಾಯಂಕಾಲ 7ಕ್ಕೆ ಅಮಾವಾಸ್ಯೆ ಜಾತ್ರಾ ಮಂಗಲೋತ್ಸವ ಹಾಗೂ ಜ| ಬೂದೀಶ್ವರ ವಿದ್ಯಾಪೀಠದ ಮಕ್ಕಳು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್‌ ವಿವಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next