Advertisement
ಈ ಟೆಕ್ ಪಾರ್ಕ್ ನಲ್ಲಿ ಬೆಳೆ ತಳಿಗಳಿಂದ ಹಿಡಿದು ಬಿತ್ತನೆಯ ವಿಧಾನ, ರೈತರು ಹೇಗೆಲ್ಲಾ ಮಾರುಕಟ್ಟೆ ಮಾಡಬೇಕೆಂಬ ಸಮಗ್ರ ಮಾಹಿತಿಲಭಿಸಲಿದೆ. ರೈತರಿಗೆ ತರಬೇತಿ ಜೊತೆಗೆ ಮಳೆ ನೀರು ಸಂರಕ್ಷಣೆ, ಬೆಳೆಯ ಪೋಷಣೆಯ ಮಾಹಿತಿಯನ್ನೂ ಒಳಗೊಂಡಿರಲಿದೆ.ಜಿಲ್ಲೆಯ ಕನಕಗಿರಿ ತಾಲೂಕಿನ ಸಿರವಾರಗ್ರಾಮ ವ್ಯಾಪ್ತಿಯಲ್ಲಿ ತೋಟಗಾರಿಕೆಟೆಕ್ ಪಾರ್ಕ್ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಹಿಂದೆಯೇ ಕನಕಗಿರಿ ಶಾಸಕ ಬಸವರಾಜದಢೇಸುಗೂರು ಅವರು ಕ್ಷೇತ್ರಕ್ಕೆತೋಟಗಾರಿಕೆ ಪಾರ್ಕ್ ಘೋಷಣೆ ಮಾಡುವಂತೆಯೂ ಸಿಎಂ ಅವರಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಜಿಲ್ಲಾ ತೋಟಗಾರಿಕೆ ಇಲಾಖೆ ಪಾರ್ಕ್ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು.
Related Articles
Advertisement
ಮಳೆ ನೀರು ಸಂರಕ್ಷಣೆ, ಬೆಳೆ ಪೋಷಣೆ:ಕಡಿಮೆ ನೀರಿನಲ್ಲಿ ತೋಟಗಾರಿಕೆ ಬೆಳೆಗಳನ್ನುಹೇಗೆ ಸಂರಕ್ಷಣೆ ಮಾಡಿಕೊಳ್ಳಬಹುದು.ಕಡಿಮೆ ನೀರಿನಲ್ಲೇ ಉತ್ತಮ ಲಾಭಪಡೆಯುವಂತ ಬೆಳೆಗಳನ್ನು ಬೆಳೆಯುವ ವಿಧಾನ, ತಾಂತ್ರಿಕತೆ, ಪ್ರಾತ್ಯಕ್ಷಿತೆಯನ್ನುಒಳಗೊಂಡ ಸಮಗ್ರ ಮಾಹಿತಿಯು ಟೆಕ್ ಮೂಲಕ ನೀಡಲಾಗುವುದು. ಪ್ರಸ್ತುತ ಮಳೆಯ ಕೊರತೆಯಲ್ಲಿ ಮಳೆ ನೀರನ್ನು ಸಂಗ್ರಹಿಸುವುದು, ಇಸ್ರೇಲ್ ಮಾದರಿಯ ಜೊತೆಗೆ ದೇಶಿ ಮಾದರಿಯಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತ ಮಾಹಿತಿಯೂ ತೋಟಗಾರಿಕೆ ಪಾರ್ಕ್‌ನಲ್ಲಿ ಒಳಗೊಂಡಿರಲಿದೆ.
ತೋಟಗಾರಿಕೆ ಟೆಕ್‌ನಲ್ಲಿ ಏನೆಲ್ಲಾ ಇರುತ್ತೆ?:
ತೋಟಗಾರಿಕೆ ಪಾರ್ಕ್‌ನಿಂದ ರೈತರಿಗೆ ಉತ್ತಮ ಗುಣಮಟ್ಟದ ತರಬೇತಿ, ಆಧುನಿಕಆವಿಷ್ಕಾರಗಳ ಮೂಲಕ ರೈತ ಆರ್ಥಿಕವಾಗಿ ಸಮೃದ್ಧಿಗೆ ಸಹಕಾರಿಯಾಗಲಿದೆ. ಆಧುನಿಕತಂತ್ರಜ್ಞಾನ ಉತ್ಪಾದನೆ, ಪಾತ್ಯಕ್ಷತೆ
ಕೈಗೊಳ್ಳುವ ಜೊತೆಗೆ ವಿವಿಧ ಬೆಳೆಗಳ ಸಂಪೂರ್ಣ ಉತ್ಪಾದನೆ, ಮೌಲ್ಯವರ್ಧನೆ ಸರಪಳಿ ಅಳವಡಿಸಿಕೊಂಡು ರೈತರ ಉತ್ಪಾದನೆಗಳಿಗೆ ಅಧಿಕ ಬೆಲೆ
ಒದಗಿಸುವುದು. ಸಮಗ್ರ ಮಳೆಯಾಶ್ರಿತ, ಒಣ ಬೇಸಾಯ ತೋಟಗಾರಿಕೆ ಪ್ರಾತ್ಯಕ್ಷಿತೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿ ಪರಿಹಾರ ಒದಗಿಸುವುದು.ಕೊಯ್ಲೋತ್ತರ ತಂತ್ರಜ್ಞಾನ, ಮೌಲ್ಯವರ್ಧನೆ ಮತ್ತು ಸಂಸ್ಕರಣೆ ತಾಂತ್ರಿಕತೆಗಳನ್ನು ನೀಡುವ ಮೂಲಕ ಫಾರ್ವರ್ಡ್,ಬ್ಯಾಕ್ವರ್ಡ್ ಲಿಂಕೇಜ್‌ಗಳ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಖಾತ್ರಿ ಪಡಿಸುವುದು.
ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ, ಹೂವು, ಔಷ ಧಿ ಸಸ್ಯಗಳು, ಸುಗಂಧಿತ ಸಸ್ಯಗಳ ಸಂರಕ್ಷಣೆಯಜೊತೆಗೆ ಮಾರುಕಟ್ಟೆ ವ್ಯವಸ್ಥೆಯ ವಿಧಾನತಿಳಿಸಿಕೊಡುವ ಮೂಲಕ ಸ್ವಾವಲಂಬಿದಾರಿ ಮಾಡಿಕೊಟ್ಟು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದು. ರೈತರಿಗೆ ಬಿತ್ತನೆಯಿಂದ ಹಿಡಿದು ಮಾರುಕಟ್ಟೆಯವರೆಗೂ ಸಮಗ್ರತೆಯನ್ನು ಒದಗಿಸುವುದು, ಮಾರುಕಟ್ಟೆ ವ್ಯವಸ್ಥೆಯನ್ನು ತಿಳಿಸುವುದು.
ಜಿಲ್ಲೆಯಲ್ಲಿ ತೋಟಗಾರಿಕೆ ಪಾರ್ಕ್ ನಿರ್ಮಿಸುವ ಕುರಿತಂತೆ ಸರ್ಕಾರಕ್ಕೆ ನಾವು ಪ್ರಸ್ತಾವನೆ ಸಲ್ಲಿಸಿದ್ದೇವು. ಸರ್ಕಾರವು ಕನಕಗಿರಿಯ ಸಿರಾವರ ಬಳಿ ಪಾರ್ಕ್ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಪಾರ್ಕ್ ನಿರ್ಮಾಣದಿಂದ ಜಿಲ್ಲೆ ಸೇರಿದಂತೆ ರಾಜ್ಯದ ರೈತರಿಗೂ ವರದಾನವಾಗಿದೆ. ಕಡಿಮೆ ನೀರಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ವಿಧಾನ, ನೀರಿನ ಸಂರಕ್ಷಣೆ, ಬೆಳೆ ತಳಿಗಳ ಅವಿಷ್ಕಾರ, ಯಂತ್ರೋಪಕರಣದಬಳಕೆ ಸೇರಿದಂತೆ ರೈತರಿಗೆ ತರಬೇತಿ ಸೇರಿ ಸಮಗ್ರ ತೋಟಗಾರಿಕೆ ಬೆಳೆಯ ಕುರಿತಂತೆ ಪಾರ್ಕ್‌ನಿಂದ ರೈತರಿಗೆ ಮಾಹಿತಿ ದೊರೆಯಲಿದೆ. – ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ದತ್ತು ಕಮ್ಮಾರ