Advertisement

ಅಶ್ವಾರೋಹಿ ಪೇಜಾವರ ಕಿರಿಯ ಯತಿ!

08:08 AM Nov 25, 2017 | Team Udayavani |

ಉಡುಪಿ: ಧರ್ಮಸಂಸದ್‌ ಉದ್ಘಾಟನೆಗೆ ಪೂರ್ವದಲ್ಲಿ ಶ್ರೀಕೃಷ್ಣ ಮಠದಿಂದ ಅಧಿವೇಶನ ಸ್ಥಳದ ವರೆಗೆ ನಡೆದ ವೈಭವದ ಮೆರವಣಿಗೆಯ ಕೊನೆಯಲ್ಲಿ ಅಶ್ವಾರೋಹಿಯಾಗಿದ್ದ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಸಾರ್ವಜನಿಕರ ಗಮನ ಸೆಳೆದರು.

Advertisement

ಶುಕ್ರವಾರ ಚಂಪಾಷಷ್ಠಿಯಾದ್ದರಿಂದ ಆ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಾರ್ಷಿಕ ವಿಶೇಷ ಪೂಜೆ ಇತ್ತು. ಹಿರಿಯ ಶ್ರೀಗಳು ಧರ್ಮಸಂಸದ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೊದಲೇ ತೆರಳಿದ್ದರಿಂದ ಪಲ್ಲಪೂಜೆ, ನೈವೇದ್ಯ ಅರ್ಪಣೆಯನ್ನು ಕಿರಿಯ ಯತಿಗಳು ನಡೆಸಬೇಕಾಗಿತ್ತು. ಪೂಜೆ ಮುಗಿಯುವಾಗ ಮೆರವಣಿಗೆ ಆರಂಭವಾಗಿ ಮುಂದೆ ಸಾಗಿತ್ತು. ಸಕಾಲದಲ್ಲಿ ಸೂಕ್ತ ವಾಹನ ವ್ಯವಸ್ಥೆ ಒದಗದೆ ಇದ್ದಾಗ ಶ್ರೀಗಳ ನೆರವಿಗೆ ಬಂದದ್ದು ಮಠದ ಲಾಯದಲ್ಲಿ ಕಟ್ಟಿ ಹಾಕಿದ್ದ ಅಶ್ವ. ಕುದುರೆಗೆ ಜೀನು ಬಿಗಿದ ಶ್ರೀಗಳು ಅದರ ಬೆನ್ನೇರಿಯೇ ಬಿಟ್ಟರು. ಮೆರವಣಿಗೆ ರೋಯಲ್‌ ಗಾರ್ಡನ್‌ ತಲುಪುವಾಗ ಶ್ರೀಗಳು ಕೂಡ ಅಲ್ಲಿಗೆ ಮುಟ್ಟಿದ್ದರು! ಕುದುರೆ ಸವಾರಿ ಕಲೆ ಎಲ್ಲರಿಗೂ ಗೊತ್ತಿರುವುದಿಲ್ಲ. ಅದಕ್ಕೆ ವಿಶೇಷವಾದ ತರಬೇತಿಯ ಅಗತ್ಯವಿದೆ. ಪೂರ್ವ ತರಬೇತಿ ಇಲ್ಲದವರು ಕುದುರೆ ಏರಿದರೆ ಅಪಾಯ ಎದುರಾಗುವ ಸಂಭವವೂ ಇರುತ್ತದೆ. ಶ್ರೀಗಳು ಕುದುರೆ ಸವಾರಿಯನ್ನೂ ಕರಗತ ಮಾಡಿಕೊಂಡವರಾದ್ದರಿಂದ ಕೊನೆಯ ಕ್ಷಣದಲ್ಲಿ ನೆರವಿಗೆ ಬಂದದ್ದು ಅದೇ ವಿದ್ಯೆ.

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next