Advertisement

ಕೋವಿಡ್ ತಡೆಗೆ ಬಿಟ್ಟಿದ್ದ ದೈವದ ಕುದುರೆಯೇ ಸಾವು!

06:55 PM May 24, 2021 | Team Udayavani |

ಗೋಕಾಕ: ತಾಲೂಕಿನ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಮರಡಿಮಠ(ಕೊಣ್ಣೂರ)ದಲ್ಲಿ ದೈವದ ಕುದುರೆಯನ್ನು ಸಾಂಕ್ರಾಮಿಕ ರೋಗದಿಂದ ಪಾರಾಗಲು ಗ್ರಾಮದಲ್ಲಿ ತಿರುಗಾಡಿಸುವ ಪ್ರತೀತಿ ಇದ್ದು, ಕೋವಿಡ್‌ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಿರುಗಾಡಿದ ಕುದುರೆ ನಾಲ್ಕೇ ದಿನದಲ್ಲಿ ರವಿವಾರ ಸಾವಿಗೀಡಾಗಿ ಅಚ್ಚರಿ ಮೂಡಿಸಿದೆ.

Advertisement

ಇಲ್ಲಿಯ ಭಕ್ತರ ಬೇಡಿಕೆಯಂತೆ ಮರಡಿಮಠದ ಶ್ರೀ ಪವಾಡೇಶ್ವರ ಸ್ವಾಮೀಜಿ ಮಾರ್ಗದರ್ಶನದದಲ್ಲಿ ಗ್ರಾಮದ ಜನತೆ ಕಾಡಸಿದ್ಧೇಶ್ವರ ಸ್ವಾಮಿ ಅವರ ಶೌರ್ಯ ನಾಮದ ಕುದುರೆಯನ್ನು ಬುಧವಾರ ಮಧ್ಯರಾತ್ರಿ 12 ಗಂಟೆಯಿಂದ ಗುರುವಾರ ಬೆಳಗ್ಗೆ 4 ಗಂಟೆಯವರೆಗೆ ಗ್ರಾಮದಲ್ಲಿ ಸಂಚರಿಸಲು ಬಿಡಲಾಗಿತ್ತು. ಆದರೆ ಕುದುರೆ ಗ್ರಾಮದಲ್ಲಿ ಸಂಚರಿಸಿದ ಕೆಲವೇ ದಿನಗಳಲ್ಲಿ ಮೃತಪಟ್ಟಿದೆ. ಇದು ಅಚ್ಚರಿ ಅಲ್ಲದೇ ಗ್ರಾಮಸ್ಥರು ಚಿಂತೆಗೂ ಕಾರಣವಾಗಿದೆ.

ಕುದುರೆ ಸಾವಿನ ಸುದ್ದಿ ತಿಳಿದ ಭಕ್ತರಿಗೆ ದೊಡ್ಡ ಆಘಾತವಾಗಿದ್ದು, ಗ್ರಾಮದ ಸುತ್ತಲಿನ ಸಾವಿರಾರು ಮಂದಿ ಕುದುರೆಯ ಕಳೆಬರ ನೋಡಲು ಆಗಮಿಸಿದ್ದರು. ಅಂತ್ಯಸಂಸ್ಕಾರಕ್ಕೆ ಸಾವಿರಾರು ಜನ ಜಮಾಯಿಸಿ ಕೋವಿಡ್‌ ಸಮಯದಲ್ಲೂ ದೈವ ಕುದುರೆಯ ದರ್ಶನ ಪಡೆದರು. ಕುದುರೆಯು ನಮ್ಮ ಊರಿಗೆ ಬಂದ ಕಂಟಕವನ್ನು ತನ್ನ ಮೈಮೇಲೆ ಹಾಕಿಕೊಂಡು ಇಹಲೋಕವನ್ನು ತ್ಯಜಿಸಿದೆ ಎಂದು ಭಕ್ತರು ಕಣ್ಣೀರು ಸುರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next