Advertisement

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:14 AM Apr 06, 2022 | Team Udayavani |

ಮೇಷ:

Advertisement

ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ದೀರ್ಘ‌ ಪ್ರಯಾಣದಿಂದ ಲಾಭ. ಉತ್ತಮ ಧನಾರ್ಜನೆ. ಆರೋಗ್ಯದಲ್ಲಿ ಸಣ್ಣ ಕಿರಿಕಿರಿ. ಆಸ್ತಿ ಸಂಚಯನ. ನೂತನ ಮಿತ್ರರ ಭೇಟಿ. ಮಾತೃ ಸಮಾನರಿಂದ ಸಂತೋಷ ವೃದ್ಧಿ.

ವೃಷಭ:

ಆರೋಗ್ಯ ಮಧ್ಯಮ. ಉತ್ತಮ ಚಟುವಟಿಕೆಗಳಿಂದ ಕೂಡಿದ ದಿನ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಸಾಂಸಾರಿಕವಾಗಿ ಉತ್ತಮ ದಿನ.

ಮಿಥುನ:

Advertisement

ಅವಿವಾಹಿತರಿಗೆ ಕಂಕಣ ಭಾಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಉತ್ತಮ ಬೆಳವಣಿಗೆ. ಅಧಿಕ ಧನಾರ್ಜನೆ. ಗುರುಹಿರಿಯರ ಉತ್ತಮ ಮಾರ್ಗದರ್ಶನ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ.

ಕಟಕ:

ಮಧ್ಯಮ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಅಧಿಕ ಶ್ರಮ. ನಿರೀಕ್ಷಿಸಿದ ಸ್ಥಾನಮಾನ ಸಿಗಲಿಲ್ಲವೆಂದು ಚಿಂತೆ ಕಾಡೀತು. ಗುರುಹಿರಿಯರೊಂದಿಗೆ ಸಂಯಮದಿಂದ ವರ್ತಿಸಿ. ಬೇಸರಕ್ಕೆ ಅವಕಾಶ ನೀಡದಿರಿ.

ಸಿಂಹ:

ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಂತೋಷ ವೃದ್ಧಿ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಸಂಯಮ ವಿರಲಿ. ಮನೆಯಲ್ಲಿ ಸಂತಸದ ವಾತಾವರಣ.

ಕನ್ಯಾ:

ಗೃಹೋಪಕರಣ ವಸ್ತುಗಳ ಸಂಗ್ರಹ. ಅನಿರೀಕ್ಷಿತ ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಬದಲಾವಣೆ. ಬಂಧುಬಳಗದವರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ತೃಪ್ತಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ತುಲಾ:

ಸುಖ ಸಂತೋಷದಿಂದ ಕೂಡಿದ ದಿನ. ಬಂಧುಮಿತ್ರರ ಸಹಕಾರ ಪ್ರೋತ್ಸಾಹ. ವಾಹನ, ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನಿರಂತರ ಧನಾರ್ಜನೆ. ಉತ್ತಮ ವಾಕ್‌ ಚತುರತೆಯಿಂದಲೂ,, ಜವಾಬ್ದಾರಿಯಿಂದಲೂ ಕೂಡಿದ ದಿನ.

ವೃಶ್ಚಿಕ:

ದೂರ ಸಂಚಾರ ಸಂಭವ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡ ಜವಾಬ್ದಾರಿ. ಧನಾರ್ಜನೆಗೆ ಕೊರತೆ ಯಾಗದು. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಗೃಹ ದಲ್ಲಿ ಶಾಂತಿ ಕಾಪಾಡಿ. ಅನಾವಶ್ಯಕ ಚರ್ಚೆಗೆ ಹೋಗದಿರಿ.

ಧನು:

ಕೆಲಸ ಕಾರ್ಯಗಳಲ್ಲಿ ಗೌರವ ಕೀರ್ತಿ ಸಂಪಾದನೆ. ಪ್ರಗತಿ. ಹೆಚ್ಚಿದ ಸ್ಥಾನ ಧನ ಲಾಭ. ಉತ್ತಮ ವಾಕ್‌ಚತುರತೆ. ಗುರುಹಿರಿಯರ ಸಹಕಾರ ಪ್ರೋತ್ಸಾಹ. ಆರೋಗ್ಯ ವೃದ್ಧಿ. ಮಕ್ಕಳಿಂದ ಸರ್ವವಿಧದ ಸೌಲಭ್ಯ ಪ್ರಾಪ್ತಿ.

ಮಕರ:

ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಸಮಯ ಸಂದರ್ಭಕ್ಕೆ ಸರಿಯಾಗಿ ನಿಪುಣತೆ ಪ್ರದರ್ಶನ. ಬಂಧುಮಿತ್ರರ ಸಹಕಾರ ಸಂತೋಷ. ಮಕ್ಕಳ ಸುಖ ಸಂತೋಷ ವೃದ್ಧಿ. ಮನೆಯಲ್ಲಿ ಸಂಭ್ರಮದ ವಾತಾವರಣ.

ಕುಂಭ:

ಸಣ್ಣ ಪ್ರಯಾಣ ಸಂಭವ. ಸಹೋದರ ಸಮಾನರಿಂದ ಸಹಕಾರ  ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಯಶಸ್ಸು ಲಭ್ಯ. ಗೃಹೋಪಕರಣ ವಸ್ತುಗಳಿಗಾಗಿ ಧನ ವ್ಯಯ. ಧಾರ್ಮಿಕ ಕಾರ್ಯಕಮಗಳಲ್ಲಿ ಭಾಗಿಯಾದ ನೆಮ್ಮದಿ.

ಮೀನ:

ಆರೋಗ್ಯ ವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ನೂತನ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಸರಿಯಾದ ನಿರ್ಣಯದಿಂದ ತೃಪ್ತಿ. ಪರರಿಂದ ಬರಬೇಕಾದ ಧನ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಬಂಧು-ಮಿತ್ರರಲ್ಲಿ ಸಂಯಮದಿಂದ ವ್ಯವಹರಿಸಿ. ಗುರುಹಿರಿಯರ ಉತ್ತಮ ಮಾರ್ಗದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next