Advertisement
ವೃಷಭ: ಪ್ರಗತಿ ಕುಂಠಿತವಾಗುವುದಕ್ಕಿಂತ ಮಂದಗತಿ ಮೇಲು. ಉದ್ಯೋಗದಲ್ಲಿ ಹಂತ ಹಂತ ವಾಗಿ ಏರಿಕೆ. ಉದ್ಯಮದ ಬೆಳವಣಿಗೆ ಸ್ಥಿರ. ಇದ್ದಕ್ಕಿದ್ದಂತೆ ಎದುರಾಳಿಗಳ ಪೈಪೋಟಿ. ಗುರುದರ್ಶನ ಪ್ರಾಪ್ತಿ. ದೂರದಲ್ಲಿರುವ ಬಂಧುಗಳ ಆಗಮನ.
Related Articles
Advertisement
ಕನ್ಯಾ: ಎಡ, ಬಲಕ್ಕೆ ತಿರುಗದೆ ಮುಂದುಗಡೆ ದೃಷ್ಟಿ ಹಾಯಿಸುತ್ತಾ ನಡೆದರೆ ಗಮ್ಯಸ್ಥಾನ ಲಭ್ಯ. ಉದ್ಯೋಗದಲ್ಲಿ ಸಮಯಪಾಲನೆಗೆ ಮಹತ್ವ ನೀಡಿರಿ. ಸರಕಾರಿ ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿ. ಸಹಕಾರಿ ರಂಗದ ನೌಕರರಿಗೆ ಸವಾಲಿನ ಅನುಭವ.
ತುಲಾ: ಎಂತಹ ಕೊರಗಿನಿಂದಲೂ ವಿಚಲಿತರಾಗದ ಮನಸ್ಥಿತಿಯಿಂದ ಯಶಸ್ಸು ಸುಲಭ. ಉದ್ಯೋಗ ದಲ್ಲಿ ಮುನ್ನಡೆ. ಜನ್ಮತಃ ಇರುವ ಅಧ್ಯಾಪಕನ ಮನಸ್ಥಿತಿಯ ಪ್ರತ್ಯಕ್ಷ ಪ್ರಯೋಜನ ಲಭ್ಯ. ಅಂತರ್ವಾಣಿಯ ಮಾರ್ಗ ದರ್ಶನಕ್ಕಾಗಿ ಗಣೇಶನ ಪ್ರಾರ್ಥನೆ.
ವೃಶ್ಚಿಕ: ವಯಸ್ಸು ಎಂಬುದು ಕೇವಲ ಸಂಖ್ಯೆ ಎಂಬುದು ಮನಸ್ಸಿನಲ್ಲಿ ಬೇರೂರಿದ್ದರೆ ಪ್ರೌಢಾವಸ್ಥೆ ಯಶಸ್ಸಿಗೆ ಅಡ್ಡಿಯಾಗದು.ಉದ್ಯೋಗದಲ್ಲಿ ಮುನ್ನಡೆ. ಉದ್ಯಮದಲ್ಲಿ ಅಪ್ರತಿಮ ಸಾಧನೆಯಿಂದ ಕೀರ್ತಿ. ಲೇವಾದೇವಿ ವ್ಯವಹಾರ ದೂರವಿಡಿ. ದೀರ್ಘಾ ವಧಿ ಉಳಿತಾಯ ಯೋಜನೆಗಳ ಫಲ ಕೈಸೇರಿದ ಅನುಭವ.
ಧನು: ಅಹೇತುಕ ದಯಾಸಿಂಧು ಎಂದು ಹೆಸರಾಗಿರುವ ಪರಮಾತ್ಮನ ಮೇಲೆ ಅಚಲ ಶ್ರದ್ಧಾಭಕ್ತಿಗಳೇ ಶ್ರೀರಕ್ಷೆ. ಉದ್ಯೋಗದಲ್ಲಿ ಸ್ಥಾನ ಭದ್ರ. ಸ್ವಂತ ವ್ಯಾಪಾರ ಮುಂದುವರಿಸಲು ನಿರ್ಧಾರ. ಹೊಸ ಪಾಲುದಾರಿಕೆ ಉದ್ಯಮ ಆರಂಭ ಮುಂದೂಡಿಕೆ.
ಮಕರ: ಮಾನಸಿಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು. ಉದ್ಯೋಗ ಸ್ಥಾನ ದಲ್ಲಿ ಯಥಾಪ್ರಕಾರ ಒತ್ತಡ ಮುಂದುವರಿಕೆ. ಉದ್ಯಮಿ ಗಳಿಗೆ ವಿಶ್ವಾಸಾರ್ಹತೆ ಕಾಯ್ದುಕೊಳ್ಳುವ ಸವಾಲು. ಸಂಸಾರ ನಿರ್ವಹಣೆಯಲ್ಲಿ ಹಿರಿಯರಿಂದ ಸಹಾಯ.
ಕುಂಭ: ಆನಂದವನ್ನು ಹಂಚಿಕೊಂಡಷ್ಟು ಅದು ಬೆಳೆಯುತ್ತದೆ ಎಂಬುದು ನೆನಪಿನಲ್ಲಿರಲಿ. ಉದ್ಯೋಗದಲ್ಲಿ ಕಿರಿಯ ಸಹೋದ್ಯೋಗಿಗಳಿಗೆ ಪ್ರೋತ್ಸಾಹದ ಮಾತುಗಳಿಂದ ಮಾರ್ಗದರ್ಶನ. ಉದ್ಯಮದ ಉತ್ಪನ್ನಗಳಿಗೆ ಪೂರೈಸಲಾರದಷ್ಟು ಬೇಡಿಕೆ ವೃದ್ಧಿ.
ಮೀನ: ತಾತ್ಕಾಲಿಕ ಹಿನ್ನಡೆಗಳಿಂದ ಅಂಜದೆ ಮುಂದುವರಿಯಿರಿ. ಉದ್ಯೋಗದ ವ್ಯಾಪ್ತಿ ಅನಪೇಕ್ಷಿತವಾಗಿ ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಆರಂಭಿಸುವ ಯೋಜನೆ ಮುನ್ನಡೆ. ಸಾಮಾಜಿಕ ಸಂಘಟನೆಯಲ್ಲಿ ಆಯಕಟ್ಟಿನ ಸ್ಥಾನ ನಿರ್ವಹಣೆಗೆ ಆಹ್ವಾನ. ಗಣೇಶ, ಶಿವ, ದೇವಿಯ ಪ್ರಾರ್ಥನೆ ತಪ್ಪದಿರಲಿ.