Advertisement

DAILY HOROSCOPE: ಉದ್ಯೋಗ ವ್ಯವಹಾರಗಳಲ್ಲಿ ಅಧಿಕಾರ ಗೌರವವಾದಿ ಪ್ರಾಪ್ತಿ

07:17 AM May 04, 2023 | Team Udayavani |

ಮೇಷ: ಉತ್ತಮ ಧನಾರ್ಜನೆ. ವಾಕ್‌ ಚತುರತೆಯಿಂದ ಜನಮನ್ನಣೆ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ. ಮಾನಸಿಕ ಸುಖಕ್ಕೆ ಹೆಚ್ಚಿದ ಪರಿಶ್ರಮ. ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ.

Advertisement

ವೃಷಭ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಸ್ಥಾನ. ಗೃಹ ದಲ್ಲಿ ಸಣ್ಣ ಬದಲಾವಣೆಗಳು ತೋರಿಬಂದಾವು. ಬಂಧು ವರ್ಗದವರಿಂದ ನೆಮ್ಮದಿ ಸಂತೋಷ. ಗುರುಹಿರಿಯರ ಉತ್ತಮ ಮಾರ್ಗದರ್ಶನ.

ಮಿಥುನ: ಮಾನಸಿಕ ನೆಮ್ಮದಿ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕಾರ ಗೌರವವಾದಿ ಪ್ರಾಪ್ತಿ. ದೂರದ ಮಿತ್ರರ ಸಮಾಗಮ. ಪಾಲುದಾರಿಕಾ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ಗೃಹದಲ್ಲಿ ಸಂತಸದ ವಾತಾವರಣ.

ಕರ್ಕ: ಹಲವು ಚಟುವಟಿಕೆಗಳಿಂದ ಕೂಡಿದ ದಿನ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ಸಂತಸದ ವಾತಾವರಣ. ದೂರದ ಉದ್ಯೋಗ ವ್ಯವಹಾರ ಗಳಲ್ಲಿ ಉತ್ತಮ ಪ್ರಗತಿ. ಸಂದರ್ಭಕ್ಕೆ ಸರಿಯಾದ ಆಲೋಚನೆ ನಿರ್ಣಯದಿಂದ ನಿರೀಕ್ಷಿತ ಸ್ಥಾನ ಲಾಭ.

ಸಿಂಹ: ದೈಹಿಕ ಆರೋಗ್ಯ ವೃದ್ಧಿ. ಹಾಗೂ ಮಾನಸಿಕ ಸಂತುಷ್ಟತೆ. ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ಬಂಧುಗಳಿಂದ ಸಹಕಾರ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಉದ್ಯೋಗ, ವ್ಯವಹಾರಗಳಲ್ಲಿ ಮಾತಿನಲ್ಲಿ ತಾಳ್ಮೆ ಎಚ್ಚರಿಕೆಯಿಂದ ಯಶಸ್ಸು.

Advertisement

ಕನ್ಯಾ: ಆರೋಗ್ಯವು ಸುಧಾರಣೆಯ ಹಾದಿಯಲ್ಲಿ ಸರಿಯಾದ ಶಿಸ್ತು ಪಾಲನೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ಮಾನಸಿಕ ನೆಮ್ಮದಿ ವೃದ್ಧಿ. ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ನಿರ್ವಹಿಸುವ ಚಟುವಟಿಕೆಗಳಲ್ಲಿ ಪ್ರಗತಿ.

ತುಲಾ: ಅನಿರೀಕ್ಷಿತ ಸ್ಥಾನ ಗೌರವ ಲಭ್ಯ. ಗುರುಹಿರಿಯರ ಆಶೀರ್ವಾದ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ದೇವತಾ ಸ್ಥಳ ಸಂದರ್ಶನ. ಮಾನಸಿಕ ನೆಮ್ಮದಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಇತ್ಯಾದಿ ಶುಭಫ‌ಲ ಅನುಭವಕ್ಕೆ ಬರುವುದು.

ವೃಶ್ಚಿಕ: ಭೂಮಿ ಆಸ್ತಿ ವಿಚಾರಗಳಲ್ಲಿ ಆಸಕ್ತಿ. ಬಂಧುಮಿತ್ರರ ಭೇಟಿ. ಗೃಹದಲ್ಲಿ ಸಂತಸದ ವಾತಾವರಣ. ಅವಿವಾಹಿತರಿಗೆ ವಿವಾಹ ಭಾಗ್ಯ. ಅಧ್ಯಯನದಲ್ಲಿ ಆಸಕ್ತಿ. ನಿರೀಕ್ಷಿತ ಧನಾಗಮನ. ಆರೋಗ್ಯ ದಲ್ಲಿ ಸುಧಾರಣೆ.

ಧನು: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಅಧಿಕ ಪರಿಶ್ರಮದಿಂದ ದೇಹಾಯಾಸ ಸಂಭವ. ಅನಗತ್ಯ ಜವಾಬ್ದಾರಿ ವಹಿಸಿಕೊಳ್ಳಬೇಡಿ. ಉತ್ತಮ ಧನ ಸಂಪಾದನೆ. ಸ್ಥಾನ ಗೌರವಾದಿ ಲಭ್ಯ. ಗೃಹದಲ್ಲಿ ಸಂತಸದ ವಾತಾವರಣ.

ಮಕರ: ದೂರ ಪ್ರಯಾಣ. ಸ್ಥಾನ ಗೌರವದಲ್ಲಿ ಪ್ರಗತಿ. ಉದ್ಯೋಗ ವ್ಯವಹಾರ ಪರಿಶ್ರಮದಿಂದ ಅಭಿವೃದ್ಧಿ. ಉತ್ತಮ ಆರೋಗ್ಯ. ಗೃಹ ದಲ್ಲಿ ನೆಮ್ಮದಿ. ಅನಿರೀಕ್ಷಿತ ಧನಾಗಮನ. ಸಾಂಸಾರಿಕ ಸುಖ ತೃಪ್ತಿಕರ.

ಕುಂಭ: ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡ ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ ಸಫ‌ಲತೆ ಗಳಿಸಿ. ಮಾನಸಿಕ ನೆಮ್ಮದಿ. ವಿದ್ಯಾರ್ಥಿಗಳಿಗೆ ನಾನಾ ರೀತಿಯ ಸೌಕರ್ಯ ಲಭ್ಯ.

ಮೀನ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸಮಾಧಾನ. ಪ್ರಗತಿ. ನಿರೀಕ್ಷಿತ ಧನ ಸಂಚಯನ. ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ, ವಾಹನಾದಿ ವಿಚಾರಗಳಲ್ಲಿ ಸಂತಸದ ಪರಿಸ್ಥಿತಿ. ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನಹರಿಸಿ. ದೇವತಾ ಸ್ಥಳ ಸಂದರ್ಶನ. ಹಿರಿಯರ ಆರೋಗ್ಯದ ಕಡೆ ಗಮನಹರಿಸಿ.

Advertisement

Udayavani is now on Telegram. Click here to join our channel and stay updated with the latest news.

Next