Advertisement

Daily Horoscope: ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ, ಉತ್ತಮ ಆರೋಗ್ಯ

09:57 AM Jun 02, 2024 | Team Udayavani |

ಮೇಷ: ಕಾರ್ಯಾಲಯಕ್ಕೆ ಮಾತ್ರ ವಿರಾಮ, ಚಟುವಟಿಕೆಗಳು ಅವಿಶ್ರಾಂತ. ವ್ಯವಹಾರ ಕ್ಷೇತ್ರದಿಂದಲೂ ಬಗೆಬಗೆಯ ಒತ್ತಡಗಳು.ಮನೆ ಯಲ್ಲಿ ಸಂಭ್ರಮದ ವಾತಾವರಣ.ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನೋÇÉಾಸ.

Advertisement

ವೃಷಭ: ವಿರಾಮದ ಸಂದರ್ಭದಲ್ಲಿ ಹೊಸಬರ ಪರಿಚಯ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಅನುಭವ. ಸಂಸ್ಥೆಗೆ ಹೊಸ ನಿವೇಶನ ಖರೀದಿ ಅಂತಿಮ. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ. ಮಕ್ಕಳು, ಹಿರಿಯರು, ಗೃಹಿಣಿಯರಿಗೆ ನೆಮ್ಮದಿ.

ಮಿಥುನ: ಮನೆಯಲ್ಲಿ ವಿರಾಮದ ಭಾವ. ಉದ್ಯೋಗಸ್ಥರಿಗೆ ಬಾಕಿಯುಳಿದಿರುವ ಕೆಲಸ ಗಳನ್ನು ನಾಳೆ ಮುಗಿಸುವ ಚಿಂತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ.

ಕರ್ಕಾಟಕ: ದೇವತಾರಾಧನೆಯಿಂದ ಮನೆಯಲ್ಲಿ ಶಾಂತಿ. ಉದ್ಯೋಗಸ್ಥರಿಗೆ ತಾತ್ಕಾಲಿಕ ನೆಮ್ಮದಿ. ವ್ಯವಹಾರ ಕ್ಷೇತ್ರದ ಮಿತ್ರರೊಂದಿಗೆ ಭೇಟಿ. ಉದ್ಯೋಗ ಅರಸುತ್ತಿರುವ ಶಿಕ್ಷಿತರಿಗೆ ಅವಕಾಶಗಳು ಗೋಚರ. ವ್ಯವಹಾರ ಸಂಬಂಧ ಪ್ರವಾಸದ ಸಾಧ್ಯತೆ.

ಸಿಂಹ: ವ್ಯವಹಾರ ಮತ್ತು ಕಾರ್ಯ ಸುಧಾರಣೆಯ ಚಿಂತೆ. ನೂತನ ಗೃಹ ನಿರ್ಮಾಣ ಪ್ರಗತಿಯಲ್ಲಿ. ವೈದ್ಯರು, ಎಂಜಿನಿಯರರು, ನ್ಯಾಯವಾದಿಗಳು ಮೊದಲಾದ ವೃತ್ತಿಪರರಿಗೆ ಕೆಲಸದ ಒತ್ತಡ. ಗೃಹಿಣಿಯರ ಆದಾಯ ಹೆಚ್ಚಳ.

Advertisement

ಕನ್ಯಾ: ಉದ್ಯೋಗ ಕ್ಷೇತ್ರದ ಮಿತ್ರರೊಂದಿಗೆ ಭೇಟಿ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸು ತ್ತಿರುವವರಿಗೆ ಶುಭ ಸಮಾಚಾರ. ಹೊಸ ರೀತಿಯ ಉದ್ಯಮದ ಕಲ್ಪನೆಗೆ ಮೂರ್ತರೂಪ.

ತುಲಾ: ಹಿರಿಯ ಬಂಧುವಿನಿಂದ ಭರವಸೆಯ ಮಾರ್ಗದರ್ಶನ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಹಣಕಾಸು ವ್ಯವಹಾರದಲ್ಲಿ ಹಿನ್ನಡೆ. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದ ಬಗ್ಗೆ ಎಚ್ಚರ.

ವೃಶ್ಚಿಕ: ಪರಮ ವೈಭವ ಇಲ್ಲವಾದರೂ ನೆಮ್ಮದಿಯ ಜೀವನಕ್ಕೆ ಕೊರತೆಯಾಗದು. ಮಹಿಳೆಯರಿಗೆ ವಸ್ತ್ರಾಭರಣ ಖರೀದಿಯಲ್ಲಿ ಆಸಕ್ತಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಚೇತರಿಕೆ.

ಧನು: ಗೃಹಸಂಬಂಧಿ ಕಾರ್ಯಗಳಲ್ಲಿ ಮಗ್ನರಾಗುವಿರಿ. ಪಾಲುದಾರಿಕೆ ವ್ಯವಹಾರ ಗಳಲ್ಲಿ ಮಂದಗತಿಯ ಪ್ರಗತಿ. ಉದ್ಯಮಿಗಳಿಗೆ ತಾತ್ಕಾಲಿಕ ವಿರಾಮ. ಸಣ್ಣ ಪ್ರವಾಸದ ಸಾಧ್ಯತೆ. ಗೃಹಾ ಲಂಕಾರದ ಕೆಲಸಗಾರರಿಗೆ ಕೈತುಂಬಾ ಸಂಪಾದನೆ.

ಮಕರ: ಸಾವಧಾನದಿಂದ ಮುಂದುವರಿದರೆ ಕಾರ್ಯಸಿದ್ಧಿ. ಸಾಧನೆಯ ಮಾರ್ಗದಲ್ಲಿ ಅಚಲವಾಗಿ ನಿಲ್ಲುವುದರಿಂದ ಇಷ್ಟಾರ್ಥ ಸಿದ್ಧಿ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ತಿಯಾಗಿ ಸಮಾಧಾನ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ.

ಕುಂಭ: ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನ ದಲ್ಲಿ ವಿಶೇಷ ಆಸಕ್ತಿ. ಸೇವಾಕಾರ್ಯಗಳಿಂದ ಗೌರವ ಪ್ರಾಪ್ತಿ. ಹಿರಿಯರಿಗೆ ಸ್ವಾವಲಂಬಿ ಬದುಕು. ಗೃಹಿಣಿಯರಿಗೆ ಸೊÌàದ್ಯೋಗದಲ್ಲಿ ಆಸಕ್ತಿ.

ಮೀನ: ಶುಭಫ‌ಲಗಳ ದಿನ. ಕರ್ಮಕಾರಕನಾದ ಶನಿಯು ಸತ್ಕರ್ಮಗಳಿಗೆ ಪ್ರೇರಣೆ ನೀಡಿ ಸನ್ಮಾರ್ಗದಲ್ಲಿ ಮುನ್ನಡೆಸು ತ್ತಾನೆ. ಗಳಿಕೆಯ ಮಾರ್ಗಗಳು ಸುಲಭದಲ್ಲಿ ಗೋಚರ. ಇಷ್ಟದೇವತಾ ರ್ಚನೆಯಿಂದ ಸಮಸ್ಯೆಗಳು ದೂರ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ. ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next