ಮೇಷ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಮಾತೃ ಸಮಾನರಿಂದ ಪ್ರೋತ್ಸಾಹ. ಜವಾಬ್ದಾರಿಯುತ ಕಾರ್ಯಪ್ರವೃತ್ತಿಯಿಂದ ಕುಟುಂಬದಲ್ಲಿ ಮನ್ನಣೆ. ನಿರೀಕ್ಷಿಸಿದಷ್ಟು ಧನ ಸಂಪತ್ತು ಲಭಿಸದಿದ್ದರೂ ಮನಃ ತೃಪ್ತಿಗೆ ಕೊರತೆಯಾಗದು.
ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಕೀರ್ತಿ ಸಂಪಾದನೆ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಅಧಿಕ ಧನ ಸಂಚಯನ. ಬಂಧುಗಳಿಂದ ಕುಟುಂಬ ವರ್ಗದವರಿಂದ ಪ್ರೋತ್ಸಾಹ. ಮಕ್ಕಳಿಂದ ಸಂತೋಷ ವೃದ್ಧಿ.
ಮಿಥುನ: ಚುರುಕುತನ, ವಾಕ್‌ಪಟುತ್ವ, ವಿದ್ಯೆ, ವಿನಯ ಸಂಪನ್ನತೆಯಿಂದ ದಿನಚರಿ ಆರಂಭ. ಸಮಾಜದಲ್ಲಿ ಸ್ಥಾನಮಾನ ಗೌರವಾದಿ ವೃದ್ಧಿ. ಕೀರ್ತಿ ಪ್ರಾಪ್ತಿ. ಸ್ಥಿರ ಧನ ಸಂಪತ್ತು ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಕರ್ಕ: ಮಾತಿನಲ್ಲಿ ತಾಳ್ಮೆ ಇರಲಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಮಿತ್ರರಿಂದ ನಿರೀಕ್ಷಿತ ಸಹಾಯ ಲಭ್ಯ. ಗುರುಹಿರಿಯರಲ್ಲಿ ಸಮಾದಾನದಿಂದ ವರ್ತಿಸಿ. ಅವರ ಮಾರ್ಗದರ್ಶನ ಸದುಪಯೋಗಿಸಿಕೊಳ್ಳುವುದರಿಂದ ಶ್ರೇಯಸ್ಸು ಲಭ್ಯ.
Related Articles
ಸಿಂಹ: ಆರೋಗ್ಯ ಗಮನಿಸಿ. ಸ್ಥಿರ ಬುದ್ಧಿಯಿಂದ ಕಾರ್ಯ ಪ್ರವೃತ್ತಿ. ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾದೀತು. ಸಾಲ ಮಾಡುವಾಗ ಎಚ್ಚರ ವಹಿಸಿ. ಅಧಿಕ ಪರಿಶ್ರಮದಿಂದ ಕೆಲಸ ಕಾರ್ಯಗಳಲ್ಲಿ ಸಫಲತೆ ಕಂಡೀತು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಯಶಸ್ಸು.
ಕನ್ಯಾ: ದೂರ ಪ್ರಯಾಣ. ಬಂಧುಮಿತ್ರರ ಮಿಲನ ಸಂತೋಷ ವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಗೃಹದಲ್ಲಿ ಮನೋರಂಜನೆಯ ವಾತಾವರಣ. ಮಕ್ಕಳಿಂದ ಸುಖ ಸಂತೋಷ ವಾರ್ತೆ. ಆರ್ಥಿಕ ಸುದೃಢತೆ ಇತ್ಯಾದಿ ಶುಭ ಫಲ. ದೇವತಾ ಕಾರ್ಯದಿಂದ ಮನಃ ಸಂತೋಷ.
ತುಲಾ: ಹಠಮಾರಿತನ ಸಲ್ಲದು. ನಿಮ್ಮಲ್ಲಿರುವ ವಿದ್ಯೆ ವಿನಯದಿಂದ ಹೆಚ್ಚಿನ ಯಶಸ್ಸು ಸಂಭವ. ಉತ್ತಮ ಧನಾರ್ಜನೆ. ಗೃಹೋಪಕರಣ ವಸ್ತುಗಳ ಸಂಗ್ರಹಕ್ಕಾಗಿ ಧನವ್ಯಯ. ದಾಂಪತ್ಯದಲ್ಲಿ ಪರಸ್ಪರ ಪ್ರೋತ್ಸಾಹ ಅಗತ್ಯ.
ವೃಶ್ಚಿಕ: ಗುರುಹಿರಿಯರ ಮಾರ್ಗದರ್ಶನದಿಂದ ಕೂಡಿದ ಕಾರ್ಯ ವೈಖರಿ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿ. ದೂರದ ವ್ಯವಹಾರಗಳಿಂದ ಧನಾರ್ಜನೆ. ವಿದ್ಯಾರ್ಥಿಗಳಿಗೆ ವಿದೇಶೀ ನೆಲದಲ್ಲಿ ಅಭ್ಯಸಿಸುವವರಿಗೆ ಹೆಚ್ಚಿದ ಪ್ರಗತಿ.
ಧನು: ನಿರೀಕ್ಷಿತ ಸ್ಥಾನ ಗೌರವ ವೃದ್ಧಿ. ಆರೋಗ್ಯ ಉತ್ತಮ. ಹಿರಿಯರಿಂದಲೂ ಮೇಲಧಿಕಾರಿಗಳಿಂದಲೂ ಉತ್ತಮ ಸಹಕಾರ ಪ್ರೋತ್ಸಾಹ ಲಭ್ಯ. ದಾಂಪತ್ಯದಲ್ಲಿ ಅನುರಾಗ ಪ್ರೋತ್ಸಾಹ ವೃದ್ಧಿ. ಮಕ್ಕಳಿಂದ ಹೆಚ್ಚಿದ ಸುಖ.
ಮಕರ: ಆಸ್ತಿ ವಾಹನಾದಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಬಂಧುಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ. ಆರೋಗ್ಯ ಗಮನಿಸಿ. ಮಕ್ಕಳಿಂದ ಹೆಚ್ಚಿದ ಸಂತೋಷ. ದಾಂಪತ್ಯ ತೃಪ್ತಿದಾಯಕ.
ಕುಂಭ: ಸಹೋದ್ಯೋಗಿಗಳಿಂದಲೂ ಸಹೋದರ ಸಮಾನರಿಂದಲೂ ಸಂದಭೋì ಚಿತ ಸಹಕಾರ ಲಭ್ಯ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಸಂಪತ್ತು. ದೀರ್ಘ ಪ್ರಯಾಣದಿಂದ ವ್ಯವಹಾರದಲ್ಲಿ ಧನಲಾಭ. ಉತ್ತಮ ವಾಕ್‌ಪಟುತ್ವ ವೃದ್ಧಿ.
ಮೀನ: ಆರೋಗ್ಯ ಗಮನಿಸಿ. ಉದಾಸೀನತೆ ತೋರದಿರಿ. ಸರಿಯಾದ ನಿಯಮ, ಆಹಾರ, ವ್ಯಾಯಾಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಉತ್ತಮ ಧನಾರ್ಜನೆ. ಗುರುಹಿರಿಯರ ಮಾರ್ಗದರ್ಶನದಿಂದ ಶ್ರೇಯಸ್ಸು ಲಭ್ಯ.