Advertisement

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

07:17 AM Apr 16, 2024 | Team Udayavani |

16-04-2024

Advertisement

ಮೇಷ: ವ್ಯವಹಾರ ಜ್ಞಾನದ ಸದುಪಯೋಗಕ್ಕೆ ಅನುಕೂಲದ ಸನ್ನಿವೇಶ. ಉದ್ಯೋಗದಲ್ಲಿ ವಿಭಾಗ ಬದಲಾವಣೆ. ಸರಕಾರಿ ಉದ್ಯೋಗಸ್ಥರ ಸ್ಥಿತಿ ಗತಿಗಳಲ್ಲಿ ವ್ಯತ್ಯಾಸ ಇಲ್ಲ. ಸಣ್ಣ ಉದ್ಯಮಿಗಳಿಗೆ ಹೊಸ ಸಮಸ್ಯೆಗಳು. ಮಹಿಳಾ ಉದ್ಯಮಿಗಳಿಗೆ ಯಶಸ್ಸು.

ವೃಷಭ: ಯೋಜನೆಗಳ ಅನುಷ್ಠಾನಕ್ಕೆ ಸಕ್ರಿಯ ಸಹಕಾರ. ಉದ್ಯೋಗಸ್ಥರೆದುರು ವಿಶಿಷ್ಟ ಅವಕಾಶಗಳು. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ವೃತ್ತಿಪರಿಣತರಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ.

ಮಿಥುನ: ಬಾಕಿ ಉಳಿದಿರುವ ಹಳೆಯ ಯೋಜನೆಗಳನ್ನು ಕಾರ್ಯಗತಗೊಳಿಸುವ ಪ್ರಯತ್ನ. ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ. ಅನವಶ್ಯ ವೈಮನಸ್ಯಕ್ಕೆ ಎಡೆಗೊಡದಿರಿ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ.

ಕರ್ಕಾಟಕ: ಉದ್ಯೋಗಸ್ಥರಿಗೆ ವೇತನ ಏರಿಕೆಯಲ್ಲಿ ವಿಳಂಬ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಕೈಸೇರಲು ಮಧ್ಯವರ್ತಿಗಳ ಅಡ್ಡಿ. ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಪ್ರಯತ್ನ ಮುಂದುವರಿಕೆ.

Advertisement

ಸಿಂಹ: ಕಾರ್ಯರಂಗದಲ್ಲಿ ತಡೆಯಿಲ್ಲದೆ ಸಾಗುವ ಪ್ರಯತ್ನ. ಏಕಕಾಲದಲ್ಲಿ ಹಲವು ವ್ಯವಹಾರಗಳತ್ತ ಗಮನ ಹರಿಸಲು ಒತ್ತಡ. ಉದ್ಯೋಗಸ್ಥರಿಗೆ ಲಾಭ ನೀಡದ ಪದೋನ್ನತಿ. ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಆರಂಭ.

ಕನ್ಯಾ: ಉದ್ಯೋಗಸ್ಥರಿಗೆ ಕಾರ್ಯ ನಿರ್ವಹಣೆಗೆ ಅನುಕೂಲದ ವಾತಾವರಣ. ಸಂಸ್ಥೆಯ ಪ್ರಮುಖರಿಂದ ನೌಕರರಿಗೆ ಪುರಸ್ಕಾರ. ಹಿರಿಯರ ಆಸ್ತಿಯಲ್ಲಿ ಕೃಷಿ ಪ್ರಯೋಗ ಯಶಸ್ಸಿನತ್ತ. ಶಾಶ್ವತ ನೀರಾವರಿ ಒದಗಿಸುವ ಪ್ರಯತ್ನ ಸಫ‌ಲ.

ತುಲಾ: ಶರೀರಕ್ಕಾದ ಬಾಧೆಯಿಂದ ಚೇತರಿಕೆ. ಉದ್ಯೋಗಸ್ಥರ ಪಾಲಿಗೆ ನಿಲ್ಲದ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ಉದ್ಯೋಗ ಅರಸುವವರಿಗೆ ಆಶಾದಾಯಕ ವಾತಾವರಣ.

ವೃಶ್ಚಿಕ: ಸದ್ಯೋಭವಿಷ್ಯದಲ್ಲಿ ಯಾವುದೇ ಹಾನಿಯಾಗದು. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಂಸಾರದಲ್ಲಿ ವಿರಸ ಬೆಳೆಸುವ ಪ್ರಯತ್ನ ವಿಫ‌ಲ.

ಧನು: ಸಾಹಸಪೂರ್ಣ ವ್ಯಕ್ತಿತ್ವದ ಮುನ್ನಡೆಗೆ ತೊಂದರೆಯಾಗದು. ಪಟ್ಟು ಬಿಡದ ಪ್ರಯತ್ನದಿಂದ ಘಟಕದ ಕಾರ್ಯ ಸುಧಾರಣೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಎಲ್ಲರಿಗೂ ಉತ್ತಮ ಆರೋಗ್ಯ

ಮಕರ: ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ ಉದ್ಯೋಗಸ್ಥರ ಕಾರ್ಯಸಾಮರ್ಥ್ಯಕ್ಕೆ ಹೊಸ ಸವಾಲುಗಳು. ಉದ್ಯಮಿಗಳಿಗೆ ಹಠಾತ್‌ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ದೊಡ್ಡ ಮೊತ್ತದ ಲಾಭ.

ಕುಂಭ: ಸಪ್ತಾಹ ಮುಂದುವರಿಯುತ್ತಿದ್ದಂತೆ ಸರಾಗವಾಗಿ ಸಾಗುವ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಸಂಗೀತ, ನೃತ್ಯಾದಿ ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ. ಕೃಷ್ಯುತ್ಪಾದನೆ ವೃದ್ಧಿಯಲ್ಲಿ ಯಶಸ್ಸು

ಮೀನ: ಅಷ್ಟೊಂದು ಪ್ರೋತ್ಸಾಹಕ ವಾತಾವರಣ ಇಲ್ಲವಾದರೂ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಯಶಸ್ವಿ. ನಿಲ್ಲಿಸಿದ್ದ ಉದ್ಯಮ ಮತ್ತೆ ಪ್ರಾರಂಭ. ಪರಿಸರ ಸುಧಾರಣೆಯ ಸಾಮೂಹಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.

ಜಯತೀರ್ಥ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next