Advertisement

Daily Horoscope: ಕ್ಷುಲ್ಲಕರ ಹಾವಳಿಗೆ ಅಂಜದಿರಿ, ಉದ್ಯೋಗ ಸ್ಥಾನದಲ್ಲಿ ಭರವಸೆಯ ಸನ್ನಿವೇಶ

07:30 AM Apr 05, 2024 | Team Udayavani |

ಮೇಷ: ಲಘು ವ್ಯಾಯಾಮದಿಂದ ದೇಹಾರೋಗ್ಯ. ಉದ್ಯೋಗಸ್ಥರ ಪ್ರತಿಭೆಗೆ ಗೌರವ. ಉದ್ಯಮಗಳ ಬೆಳವಣಿಗೆಗೆ ಪೈಪೋಟಿಯ ಬಾಧೆ. ಆಪ್ತವರ್ಗದಿಂದ ಸಕಾಲಿಕ ನೆರವು ಲಭ್ಯ. ತಾಯಿಯ ಆರೋಗ್ಯದ ಕಡೆಗೆ ಲಕ್ಷ ಇರಲಿ.

Advertisement

ವೃಷಭ: ಉದ್ಯೋಗದಲ್ಲಿ ಪದೋನ್ನತಿಗೆ ಪ್ರಯತ್ನ. ಸರಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಖಾಸಗಿ ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಷೇರು ವ್ಯವಹಾರದಲ್ಲಿ ಮಧ್ಯಮ ಲಾಭ. ದೇವತಾ ಸಾನ್ನಿಧ್ಯಕ್ಕೆ ಭೇಟಿ.

ಮಿಥುನ: ಕ್ಷುಲ್ಲಕರ ಹಾವಳಿಗೆ ಅಂಜದಿರಿ. ಉದ್ಯೋಗ ಸ್ಥಾನದಲ್ಲಿ ಭರವಸೆಯ ಸನ್ನಿವೇಶ. ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ. ವ್ಯವಹಾರ ನಿಮಿತ್ತ ಉತ್ತರಕ್ಕೆ ಪ್ರಯಾಣ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಕೆಲವೊಮ್ಮೆ ಕಿರಿಕಿರಿ, ಕೆಲವೊಮ್ಮೆ ನೆಮ್ಮದಿ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಪಾಲನೆಗೆ ಪ್ರಾಶಸ್ತ್ಯ. ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ.

ಸಿಂಹ: ನಿಧಾನವಾದರೂ ಸ್ಥಿರವಾದ ಪ್ರಗತಿ. ಉದ್ಯೋಗಸ್ಥರಿಗೆ ಹೆಚ್ಚು ದುಡಿಮೆಗೆ ಪ್ರೋತ್ಸಾಹ. ಬಾಯ್ದೆರೆ ಪ್ರಚಾರದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿಗಳ ವೇಗ ವರ್ಧನೆ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ.

Advertisement

ಕನ್ಯಾ: ಬಹುಪಾಲು ನೆಮ್ಮದಿಯ ದಿನ. ಉದ್ಯಮದಲ್ಲಿ ಶೀಘ್ರ ಪ್ರಗತಿ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ. ಕುಟುಂಬಸ್ಥರ ಮನೆಯಲ್ಲಿ ಶುಭಕಾರ್ಯ. ಉದ್ಯೋಗಾಸಕ್ತರನ್ನು ಅರಸಿ ಬರುವ ಅವಕಾಶಗಳು.

ತುಲಾ: ಉದ್ಯೋಗದಲ್ಲಿ ಯೋಗ್ಯತೆ ಸರಿ ಯಾದ ಗೌರವ.ಅಕಸ್ಮಾತ್‌ ಧನಪ್ರಾಪ್ತಿ. ಕೀರ್ತನೆ, ಭಜನೆ, ಸತ್ಸಂಗಗಳಲ್ಲಿ ಆಸಕ್ತಿ. ವಿತ್ತ ಸಂಸ್ಥೆಯ ನೆರವಿನಿಂದ ವ್ಯವಹಾರ ವಿಸ್ತರಣೆ. ಅವಿವಾಹಿತರಿಗೆ ವಿವಾಹ ಯೋಗ.

ವೃಶ್ಚಿಕ:ಉದ್ಯೋಗಸ್ಥರಿಗೆ ಸ್ವಯಂ ಯೋಗ್ಯತೆಯಿಂದ ಗೌರವ. ಉದ್ಯಮ ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸರ್ವತ್ರ ಶ್ಲಾಘನೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಗೃಹೋ ದ್ಯಮ ಉತ್ಪನ್ನಗಳ ಜನಪ್ರಿಯತೆ.

ಧನು: ಸ್ವಲ್ಪ ಏರುಪೇರಾದ ವಾತಾವರಣ. ಆತ್ಮೀಯರಿಂದ ಸಕಾಲದಲ್ಲಿ ಸಹಾಯ. ಉದ್ಯೋಗ ಸ್ಥಾನದಲ್ಲಿ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯಕ್ಕೆ ಅವಕಾಶ.

ಮಕರ: ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.

ಕುಂಭ: ಹಲವು ಮೂಲಗಳಿಂದ ಆದಾಯ ವೃದ್ಧಿ. ಸರಕಾರಿ ನೌಕರರಿಗೆ ಕೆಲಸದ ಹೊರೆ. ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.ಆರೋಗ್ಯ ಉತ್ತಮ.

ಮೀನ: ಗುರುಕೃಪೆಯಿಂದ ಕಡಿಮೆಯಾದ ಶನಿಮಹಾತ್ಮನ ಕಾಟ. ಉದ್ಯೋಗ ಸ್ಥಾನದಲ್ಲಿ ಅನುಕೂಲ. ಸರಕಾರಿ ಅಧಿಕಾರಿಗಳಿಗೆ ಜನಗೌರವ. ಬಂಧುವರ್ಗದಲ್ಲಿ ಶುಭಕಾರ್ಯ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next