Advertisement

Daily Horoscope: ಆರೋಗ್ಯದ ಬಗ್ಗೆ ಗಮನವಿರಲಿ, ಅತಿಯಾದ ಕಾರ್ಯಒತ್ತಡ ಎದುರಾದೀತು

07:32 AM Jul 04, 2023 | Team Udayavani |

ಮೇಷ: ವಾಹನ ಭೂಮಿ ಇತ್ಯಾದಿ ಆಸ್ತಿ ವಿಚಾರದಲ್ಲಿಯೂ, ಉದ್ಯೋಗ, ಸರಕರೀ ವ್ಯವಹಾರಗಳಲ್ಲಿ ಕೂಡಿದ ಚಟುವಟಿಕೆ. ಕಾರ್ಯಗಳಲ್ಲಿ ಮುನ್ನಡೆ ಸಾಧಿಸಿದ ತೃಪ್ತಿ. ಧನಾರ್ಜನೆಗೆ ಕೊರತೆ ಆಗದು. ಸಂತೋಷದಿಂದ ಸಮಯ ಕಳೆಯುವ ಅವಕಾಶ ಲಭ್ಯ.

Advertisement

ವೃಷಭ: ಜವಾಬ್ದಾರಿಯುತ ಕಾರ್ಯವೈಖರಿ ಯಿಂದ ಸ್ಥಾನ ಗೌರವಾದಿ ಸುಖ. ಪ್ರಶಂಸೆ ಆರೋಗ್ಯ ವೃದ್ಧಿ. ಗೃಹೋಪ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಸಾಂಸಾರಿಕ ಸುಖದಲ್ಲಿ ವೃದ್ಧಿ. ಪಾಲುದಾರಕಾ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ.

ಮಿಥುನ: ಆರೋಗ್ಯದ ಬಗ್ಗೆ ಗಮನವಿರಲಿ. ಅತಿಯಾದ ಕಾರ್ಯಒತ್ತಡ ಎದುರಾದೀತು. ಮಾನಸಿಕವಾಗಿ ಸುದೃಢರಾಗಿದ್ದರೂ ದೈಹಿಕ ಶ್ರಮ ಅಧಿಕವೆನಿಸೀತು. ಮಾತಿನಲ್ಲಿ ಸಹನೆ, ಎಚ್ಚರವಿರಲಿ. ಹಣಕಾಸಿನ ಬಗ್ಗೆ ದಾಕ್ಷಿಣ್ಯಕ್ಕೆ ಒಳಗಾಗದಿರಿ.

ಕರ್ಕ: ದೀರ್ಘ‌ ಪ್ರಯಾಣಕ್ಕೆ ಅವಕಾಶ. ಉದ್ಯàಗ ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಶ್ರಮ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಹೆಚ್ಚಿದ ಅವಕಾಶ ತೋರಿತು. ಗುರು ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ.

ಸಿಂಹ: ದೇಹಾರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಯೋಜಿತ ಗುರಿ ಸಾಧಿಸಿದ ತೃಪ್ತಿ. ಪತ್ರ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿದರಿಂದಲೂ ದೃಢ ನಿರ್ಧಾರದಿಂದ ಕಾರ್ಯ ಸಫ‌ಲತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.

Advertisement

ಕನ್ಯಾ: ಆರೋಗ್ಯ ವೃದ್ಧಿ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಧನವ್ಯಯ. ಬೇರೆಯವರ ವಿಚಾರದಲ್ಲಿ ಜವಾಬ್ದಾರಿ ವಹಿಸುವಾಗ ಎಚ್ಚರಿಕೆಯ ನಡೆ ಅಗತ್ಯ. ಗುರು ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸ್ಥಾನ ಪ್ರಾಪ್ತಿ.

ತುಲಾ: ದೀರ್ಘ‌ ಪ್ರಯಾಣ ಸಂಭವ. ನಷ್ಟ ದ್ರವ್ಯಗಳಿಗೆ ಪ್ರಯತ್ನಿಸಿದರೆ ಸಿಗುವ ಸಂಭವ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವ ಕಾಲ. ದಾಂಪತ್ಯ ಸುಖ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನಾಗಮನ. ಅಭಿವೃದ್ಧಿ.

ವೃಶ್ಚಿಕ: ದೇವತಾನುಗ್ರಹದಿಂದ ಕೂಡಿದ ದಿನ. ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಲಭಿಸುವುದು. ಆರೋಗ್ಯ, ಸಾಂಸಾರಿಕ ಸುಖ, ಮಕ್ಕಳ ವಿಚಾರದಲ್ಲಿ, ಸಂತಸದ ಸಮಯ. ಉದ್ಯೋಗ ವ್ಯವಹಾರಾದಿಗಳಲ್ಲಿ ಉನ್ನತ ಅಭಿವೃದ್ಧಿ. ಇತ್ಯಾದಿ ಶುಭ ಫ‌ಲ.

ಧನು: ಆರೋಗ್ಯದಲ್ಲಿ ಅಭಿವೃದ್ಧಿ. ಗೃಹೋಪಕರಣ ವಸ್ತು ಸಂಗ್ರಹ. ಭೂಮಿ ವಾಹನಾದಿ ವ್ಯವಹಾರಗಳಲ್ಲಿ ನಿರೀಕ್ಷಿತ ಸಫ‌ಲತೆ. ನಿರಂತರ ಧನಾರ್ಜನೆ. ಕೌಟುಂಬಿಕ ಸಹಕಾರ. ಧಾರ್ಮಿಕ ವಿಚಾರಗಳಲ್ಲಿ ಸಕ್ರಿಯತೆ. ವಿದ್ಯಾರ್ಥಿಗಳಿಗೆ ಅವಕಾಶ.

ಮಕರ: ಆರೋಗ್ಯ ಸ್ಥಿರ. ದಾಂಪತ್ಯದಲ್ಲಿ ಪರಸ್ಪರರ ಸಹಕಾರ ಪ್ರೋತ್ಸಾಹ. ಪಾಲು ದಾರಿಕಾ ಕ್ಷೇತ್ರದಲ್ಲಿ ವ್ಯವಹಾರಗಳಲ್ಲಿ ಗೌರವದಿಂದ ಕೂಡಿದ ಸ್ಥಾನ ಪ್ರಾಪ್ತಿ. ಗುರು ಹಿರಿಯರಿಂದ ಮಾರ್ಗದರ್ಶನ ಸಹಕಾರ. ಧನಾರ್ಜನೆಗೆ ಸರಿಯಾದ ಖರ್ಚು.

ಕುಂಭ: ದೈಹಿಕ ಆರೋಗ್ಯ ಮಧ್ಯಮ. ಮಾನಸಿಕವಾಗಿ ಬಲಿಷ್ಠತೆಯಿಂದ ಸುದೃಢ. ಉದ್ಯೋಗ ವ್ಯವಹಾರಸ್ಥರಿಗೆ ಪ್ರಯಾಣ ಸಂಭವ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ಅವಿವಾಹಿತರಿಗೆ ಸರಿಯಾದ ಸಂಬಂಧ ಒದಗುವ ಕಾಲ. ವಿಧ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫ‌ಲ.

ಮೀನ: ಉತ್ತಮ ದೈಹಿಕ ಮಾನಸಿಕ ಕ್ಷಮತೆ. ಕೆಲಸ ಕಾರ್ಯಗಳಲ್ಲಿ ತತ್ಪರತೆ. ಹೆಚ್ಚಿನ ಪರಿಶ್ರಮದಿಂದ ಆರ್ಥಿಕ ಸುಧಾರಣೆ. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ದಾಂಪತ್ಯ ಸುಖ ತೃಪ್ತಿದಾಯಕ. ಗುರು ಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಸರಿಯಾದ ಫ‌ಲ. ವಿಫ‌ುಲ ಅವಕಾಶ.

Advertisement

Udayavani is now on Telegram. Click here to join our channel and stay updated with the latest news.

Next