Advertisement

Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ

07:26 AM Jan 09, 2025 | Team Udayavani |

ಮೇಷ: ನೆಮ್ಮದಿಯ ಅನುಭವಗಳು. ಉದ್ಯೋಗದಲ್ಲಿ ಅಪೂರ್ವ ಸಾಧನೆ ಮಾಡಿದ ಕೀರ್ತಿ ನಿಮ್ಮದಾಗಲಿದೆ. ಉದ್ಯೋಗ ಬದಲಾವಣೆಯ ಯೋಚನೆ ಬೇಡ. ಉದ್ಯಮದಲ್ಲಿ ನೌಕರರ ಸಮಸ್ಯೆ ನಿವಾರಣೆ. ಹಿರಿಯರಿಗೆ ಆರೋಗ್ಯ.

Advertisement

ವೃಷಭ: ಚೆನ್ನಾಗಿ ಯೋಚಿಸಿ ಮುನ್ನಡೆಯಿರಿ. ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸಿಯೇ ಇನ್ನೊಂದಕ್ಕೆ ಕೈಹಾಕಿ. ವಿತ್ತಸಂಸ್ಥೆ ಯಿಂದ ಧನಸಹಾಯ ಸಕಾಲಕ್ಕೆ ಲಭ್ಯ. ವ್ಯವಹಾರ ನಿಮಿತ್ತ ಸಣ್ಣ ಪ್ರವಾಸದ ಸಾಧ್ಯತೆ.

ಮಿಥುನ: ಉದ್ಯೋಗದಲ್ಲಿ ಸಾಮಾನ್ಯ ಸ್ಥಿತಿ. ಸೇವಾ ಹಿರಿತನಕ್ಕೆ ಮಾನ್ಯತೆ. ಸ್ವಂತ ಉದ್ಯಮ ಆರ್ಥಿಕ ಮುಗ್ಗಟ್ಟು ಪರಿಹಾರಕ್ಕೆ ವಿತ್ತಸಂಸ್ಥೆ ನೆರವು. ಮಹಿಳೆಯರ ಸ್ವಾವಲಂಬನೆ ಸಾಧನೆ ಪ್ರಗತಿಯಲ್ಲಿ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ.

ಕರ್ಕಾಟಕ: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಕೃಷ್ಯುತ್ಪನ್ನ ಮಾರಾಟದಿಂದ ಲಾಭ. ಉದ್ಯೋಗ ಅರಸುತ್ತಿರುವವರ ಪ್ರಯತ್ನ ಸಫ‌ಲ. ಹಿರಿಯರು, ಗೃಹಿಣಿಯರ ಆರೋಗ್ಯ ಉತ್ತಮ.

ಸಿಂಹ: ಸರಕಾರಿ ಅಧಿಕಾರಿಗಳಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಪರದೇಶದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಗೃಹೋತ್ಪನ್ನ ಖಾದ್ಯಪದಾರ್ಥಗಳ ಮಾರಾಟದಿಂದ ಲಾಭ.

Advertisement

ಕನ್ಯಾ: ಆಯಕಟ್ಟಿನ ಸ್ಥಾನದಲ್ಲಿ ಕರ್ತವ್ಯ. ವಿದ್ಯುತ್‌ ಮತ್ತು ಎಲೆಕ್ಟ್ರಾನಿಕ್ಸ್‌ ಉಪಕರಣ ವ್ಯಾಪಾರಿಗಳಿಗೆ ಉತ್ತಮ ಆದಾಯ. ವಿವಾಹಾಸಕ್ತ ರಿಗೆ ಒಳ್ಳೆಯ ಸಂಬಂಧ ಕೂಡಿ ಬರುವ ಸಾಧ್ಯತೆ. ದೇವತಾ ಕಾರ್ಯಗಳಲ್ಲಿ ಪಾಲುಗೊಳ್ಳುವ ಆಸಕ್ತಿ.

ತುಲಾ: ಮುಂದೇನಾಗುವುದೆಂಬ ಅಂಜಿಕೆ ಬೇಡ. ಉದ್ಯೋಗ, ವ್ಯವಹಾರದಲ್ಲಿ ಒಳ್ಳೆಯ ಹೆಸರು. ನೌಕರ ವರ್ಗದ ಉತ್ತಮ ಸಹಕಾರ. ದೈವಾನುಗ್ರಹ ಪ್ರಾಪ್ತಿಗೆ ಸಾಧನೆ ಮುಂದುವರಿಕೆ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ.

ವೃಶ್ಚಿಕ: ಉದ್ಯೋಗದಲ್ಲಿ ಕ್ರಮಾಗತ ಪ್ರಗತಿ. ಸಣ್ಣ ಪ್ರಮಾಣದ ಸ್ವಂತ ಉದ್ಯಮದ ತೃಪ್ತಿಕರ ಬೆಳವಣಿಗೆ. ಪರಿಸರ ನೈರ್ಮಲ್ಯ ರಕ್ಷಣೆಯಲ್ಲಿ ಭಾಗಿ. ದೇವಾಲಯಕ್ಕೆ ಭೇಟಿ. ಮಕ್ಕಳಿಗೆ ಉಲ್ಲಾಸದ ವಾತಾವರಣ.

ಧನು: ಹಿತಶತ್ರುಗಳ ಬಾಧೆಯಿಂದ ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ ಪರಿಶ್ರಮಕ್ಕೆ ಗೌರವ. ಸ್ವಂತ ಉದ್ಯಮ ಕ್ರಮವಾಗಿ ಅಭಿವೃದ್ಧಿ. ದೇವತಾರ್ಚನೆಯಿಂದ ನೆಮ್ಮದಿ ಪ್ರಾಪ್ತಿ. ಕೃಷಿ ಕ್ಷೇತ್ರಕ್ಕೆ ಹೊಸ ನೀರಿನ ಆಸರೆ.

ಮಕರ: ಸಮಸ್ಯೆಗಳಿಗೆ ತಾತ್ಕಾಲಿಕ ವಿರಾಮ. ಉದ್ಯೋಗ ಕ್ಷೇತ್ರದ ಒತ್ತಡ ಕ್ರಮವಾಗಿ ನಿವಾರಣೆ. ಹೊಸ ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಮಕ್ಕಳ ವಿದ್ಯಾಭ್ಯಾಸದತ್ತ ಗಮನ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ.

ಕುಂಭ: ಎಂದಿನಂತೆ ಸೇವಾ ಕಾರ್ಯಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಶ್ಲಾಘನಾರ್ಹ ಸಾಧನೆ. ಮನೆಯಲ್ಲಿ ಸಂಭ್ರಮದ ವಾತಾವರಣ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರುವ ಭಾಗ್ಯ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಪ್ರಗತಿ.

ಮೀನ: ಶನಿಮಹಾತ್ಮನ ಅನುಗ್ರಹದಿಂದ ಸ್ಥಗಿತಗೊಂಡ ಕಾರ್ಯಗಳ ಮುಂದುವರಿಕೆ. ಉದ್ಯೋಗದಲ್ಲಿ ಯಶಸ್ಸು. ಸರಕಾರಿ ಅಧಿಕಾರಿಗಳು ಮತ್ತಷ್ಟು ನೌಕರರಿಂದ ಉತ್ತಮ ಸ್ಪಂದನ. ಸೇವಾರೂಪದ ವೃತ್ತಿಯಲ್ಲಿ ಮುನ್ನಡೆ. ಮಾತೃವರ್ಗದ ಸದಾಶಯದಿಂದ ಕಾರ್ಯಗಳಲ್ಲಿ ಜಯ.

Advertisement

Udayavani is now on Telegram. Click here to join our channel and stay updated with the latest news.

Next