Advertisement

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

07:32 AM Jan 10, 2025 | Team Udayavani |

ಮೇಷ: ಗುರು ದೇವತಾನುಗ್ರಹದಿಂದ ಕಾರ್ಯಸಿದ್ಧಿ. ಹಿರಿಯರ ಆರೋಗ್ಯ ಉತ್ತಮ. ಪಾಲುದಾರಿಕೆ ವ್ಯವಹಾರ ಸುಗಮ. ದೂರದ ಬಂಧುಗಳ ಆಗಮನ. ವಿದ್ಯಾರ್ಥಿಗಳು ಏಕಾಗ್ರತೆಗೆ ಪ್ರಯತ್ನಿಸಲು ಸಕಾಲ.

Advertisement

ವೃಷಭ: ಉದ್ಯೋಗ, ವ್ಯವಹಾರಗಳಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ. ಮಿತ್ರ ರೊಡನೆ ಮನಸ್ತಾಪಕ್ಕೆ ಎಡೆಗೊಡದಿರಿ. ವೃತ್ತಿ ಸಂಬಂಧ ಸಣ್ಣ ಪ್ರವಾಸ ಸಂಭವ. ಮನೆಯಲ್ಲಿ ಅನುಕೂಲದ ವಾತಾವರಣ. ಮಕ್ಕಳ ವ್ಯಾಸಂಗದಲ್ಲಿ ಪ್ರಗತಿ.

ಮಿಥುನ: ಆರೋಗ್ಯದ ಕಡೆಗೆ ಗಮನವಿರಲಿ. ಕಾರ್ಯ ಮುಗಿಸಲು ಆತುರ ಬೇಡ. ಕಿರಿಯರ ಭವಿಷ್ಯ ಚಿಂತನೆ. ಸಣ್ಣ ಉದ್ಯಮಿಗಳಿಗೆ ಪೂರಕ ವಾತಾವರಣ. ಅವಿವಾಹಿತರಿಗೆ ವಿವಾಹ ಯೋಗ ಸನ್ನಿಹಿತ.

ಕರ್ಕಾಟಕ: ವೃತ್ತಿಪರ ಕಲಾವಿದರಿಗೆ ಸಿಹಿ ಸುದ್ದಿ. ಉದ್ಯೋಗ, ವ್ಯವಹಾರ ರಂಗದಲ್ಲಿ ಹೊಸ ಸಾಧ್ಯತೆ. ಗೃಹಿಣಿಯರಿಗೆ ಮನೋಲ್ಲಾಸ. ಆರೋಗ್ಯದ ಕಡೆ ಗಮನಹರಿಸಿ. ಶುಭ ಕಾರ್ಯದ ನಿಮಿತ್ತ ಪ್ರಯಾಣ.

ಸಿಂಹ: ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ. ನಿರಂತರ ಶ್ರಮದಿಂದ ಆಯಾಸ. ಕೃಷಿ ಕ್ಷೇತ್ರದಲ್ಲಿ ಆಸಕ್ತರಿಗೆ ಶುಭ ಸಮಾಚಾರ. ಗೃಹಿಣಿಯರ ಆರೋಗ್ಯ ಗಮನಿಸಿ. ಅಧ್ಯಾಪನ ವೃತ್ತಿಯವರಿಗೆ ಕಠಿನ ಶ್ರಮ. ಹಣಕಾಸಿನ ಬಗ್ಗೆ ಜಾಗ್ರತೆಯಿಂದಿರಿ.

Advertisement

ಕನ್ಯಾ: ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಸ್ಥಿರ ವಾತಾವರಣ. ವಿಳಂಬಿತ ಕಾರ್ಯ ಪೂರ್ಣಗೊಳ್ಳುವ ಸಮಯ. ಧಾನ್ಯ ವ್ಯಾಪಾರಿಗಳಿಗೆ ಲಾಭ. ಮನೆಯಲ್ಲಿ ಲವಲವಿಕೆಯ ವಾತಾವರಣ. ಶುಭ ಸುದ್ದಿ ಬರುವ ಸೂಚನೆ ಲಭಿಸಲಿದೆ.

ತುಲಾ: ಅಧಿಕಾರಿ ವರ್ಗಕ್ಕೆ ಹೆಚ್ಚು ಹೊಣೆಗಾರಿಕೆ. ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ. ಬೆಲೆಬಾಳುವ ವಸ್ತುವೊಂದು ಕೈತಪ್ಪಿ ಹೋಗುವ ಸಂಭವ ಜಾಗ್ರತೆಯಿಂದಿರಿ. ತೃಪ್ತಿ ಯಿಂದ ಕಾಲುಚಾಚಿ ಕೂರುವ ಸಮಯ ಅಲ್ಲ.

ವೃಶ್ಚಿಕ: ಅನ್ಯಾಯಕ್ಕೆ ಪ್ರತಿ ಅನ್ಯಾಯ ಬೇಡ. ತಾಳ್ಮೆಯಿಂದ ಹಿರಿಯರ ಒಲವು, ಪ್ರೋತ್ಸಾಹ ಲಭ್ಯ. ದಕ್ಷಿಣ ದಿಕ್ಕಿನಲ್ಲಿ ಪಯಣ ಸಂಭವ. ಹಿರಿಯರ ಆರೋಗ್ಯ ಉತ್ತಮ. ಆವಶ್ಯಕತೆಗೆ ಸರಿಯಾಗಿ ನೆರೆಯವರ ಸಹಕಾರ.

ಧನು: ಅನಿರೀಕ್ಷಿತ ಧನಾಗಮ. ದಾಂಪತ್ಯ ಜೀವನದಲ್ಲಿ ತೃಪ್ತಿ. ಹಿರಿಯರ ಅಪೇಕ್ಷೆ ಅರಿತು ನಡೆಯುವುದರಿಂದ ಶ್ರೇಯಸ್ಸು. ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಿದರೆ ಉತ್ತಮ.

ಮಕರ: ನೂತನ ವಸ್ತು ಖರೀದಿ ಯೋಜನೆ. ಹೊಸ ಅವಕಾಶಗಳ ಶೋಧನೆ. ಸಹೋದ್ಯೋಗಿಗಳಿಂದ ಸಹಕಾರ. ಸಾಂಸಾರಿಕ ಬಿಕ್ಕಟ್ಟು ದೂರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಸ್ಥಿರ. ವ್ಯವಹಾರ ಸಂಬಂಧ ದಕ್ಷಿಣಕ್ಕೆ ಪ್ರಯಾಣ

. ಕುಂಭ: ಸಂಚಿತ ಧನ ಸದ್ವಿನಿಯೋಗ. ಸಮಾಜದಲ್ಲಿ ಗೌರವ ವೃದ್ಧಿ. ವೃತ್ತಿಪರರಿಗೆ ಸಾಮಾಜಿಕರ ಶ್ಲಾಘನೆ. ಅನಾರೋಗ್ಯದ ನಿಮಿತ್ತ ವೈದ್ಯರ ಭೇಟಿ ಸಂಭವ. ಮಾನಸಿಕ ದುಗುಡ ದೂರ. ದೂರದ ಬಂಧುಗಳ ಆಗಮನ.

ಮೀನ: ಉದ್ಯೋಗ, ವ್ಯವಹಾರದಲ್ಲಿ ತೃಪ್ತಿ. ಹಣಕಾಸು ವ್ಯವಹಾರ ಸ್ಥಿರ. ಹಳೆಯ ಗೆಳೆಯರ ಭೇಟಿ. ಗೃಹೋಪಯೋಗಿ ಸಾಮಗ್ರಿ ಖರೀದಿ. ಹಿತಶತ್ರುಗಳ ಬಗ್ಗೆ ಜಾಗರೂಕರಾಗಿರಿ. ದುರ್ಗೆಯನ್ನು ಆರಾಧಿಸುವುದರಿಂದ ಒಳಿತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next