Advertisement

ಶುಕ್ರವಾರದ ರಾಶಿ ಫಲ; ಧನಾರ್ಜನೆ ಉತ್ತಮವಾಗಿದ್ದರೂ ಅನಗತ್ಯ ಖರ್ಚು ವೆಚ್ಚ ಸಾಧ್ಯತೆ

07:12 AM Nov 11, 2022 | Team Udayavani |

ಮೇಷ: ಆರೋಗ್ಯದ ಬಗ್ಗೆ ಗಮನಿಸಿ. ತಾಳ್ಮೆ ಕಳೆದುಕೊಳ್ಳದೇ ವ್ಯವಹರಿಸಿ. ಅನಗತ್ಯ ಜವಾಬ್ದಾರಿ ಹೊಂದದಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ದೂರದ ಊರಿನ ವ್ಯವಹಾರಗಳಲ್ಲಿ ಕ್ಷೇಮ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ.

Advertisement

ವೃಷಭ: ದೀರ್ಘ‌ ಪ್ರಯಾಣ. ಸಾಂಸಾರಿಕ ಸುಖದಲ್ಲಿ ಅನುರಾಗ ವೃದ್ಧಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ ಹಾಗೂ ಲಾಭ. ನಿರೀಕ್ಷಿಸಿದಂತೆ ಹಣಕಾಸಿನ ಪ್ರಗತಿ. ಸಂದರ್ಭೋಚಿತವಾದ ಬುದ್ಧಿವಂತಿಕೆಯ ನಡೆಯಿಂದ ಯಶಸ್ಸು ಲಭಿಸಲಿದೆ.

ಮಿಥುನ: ದೂರದ ವ್ಯವಹಾರಗಳಲ್ಲಿ ಪ್ರಗತಿ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸಿದ ತೃಪ್ತಿ. ಗೃಹದಲ್ಲಿ ಸಂತೋಷದ ವಾತಾವರಣ. ಧನಾರ್ಜನೆ ಉತ್ತಮವಾಗಿದ್ದರೂ ಅನಗತ್ಯ ಖರ್ಚು ವೆಚ್ಚ ಸಾಧ್ಯತೆ.

ಕರ್ಕ: ಹೆಚ್ಚಿನ ಸ್ಥಾನ ಗೌರವಕ್ಕಾಗಿ ಪರಿಶ್ರಮ. ಅಗತ್ಯ ಮೀರಿದ ಜವಾಬ್ದಾರಿಯಿಂದ ದೈಹಿಕ ಮಾನಸಿಕ ಒತ್ತಡ ಎದುರಾದೀತು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಗುರುಸಮಾನರಿಂದ ಲಾಭ. ಭೂಮ್ಯಾದಿ ವ್ಯವಹಾರ ಗಳಲ್ಲಿ ಅಡೆತಡೆ. ಅನಗತ್ಯ ಖರ್ಚು ವೆಚ್ಚಗಳು.

ಸಿಂಹ: ನಿರೀಕ್ಷೆಗೂ ಮೀರಿದ ಧನಲಾಭ. ಉತ್ತಮ ವಾಕ್‌ಚಾತುರ್ಯದಿಂದ ಕೂಡಿದ ಕಾರ್ಯ ವೈಖರಿ. ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡುವುದರಿಂದ ಗೌರವ ಆದರಗಳು ವೃದ್ಧಿ. ಗುರುಹಿರಿಯರ ಆರೋಗ್ಯ ಗಮನಿಸಿ. ದಾಂಪತ್ಯ ಸುಖ ಮಧ್ಯಮ.

Advertisement

ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ ಯಾದ ಸಂತೋಷ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರ ಅವಲಂಬನೆ ಮಾರ್ಗದರ್ಶನದ ಲಾಭ. ದಾಂಪತ್ಯ ಸುಖ ತೃಪ್ತಿದಾಯಕ. ಮಿತ್ರರ ಸಹಕಾರದಿಂದ ಕೆಲಸಗಳಲ್ಲಿ ಪ್ರಗತಿ. ಗೃಹೋಪ ವಸ್ತುಗಳ ಸಂಗ್ರಹ.

ತುಲಾ: ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ಗುರುಹಿರಿಯರೊಂದಿಗೆ ಬೆರೆತು ಕಾರೊÂàನ್ಮುಖರಾಗಿರಿ. ಉದ್ಯೋಗದಲ್ಲಿ ಹೆಚ್ಚಿದ ಪರಿಶ್ರಮ, ಜವಾಬ್ದಾರಿ. ಏಕಾಗ್ರತೆಯಿಂದ ಪ್ರಯತ್ನಿಸಿದರೆ ಯಶಸ್ಸು ಲಭಿಸಲಿದೆ.

ವೃಶ್ಚಿಕ: ಅಧ್ಯಯನದಲ್ಲಿ ಆಸಕ್ತಿ. ಉತ್ತಮ ಧನಾರ್ಜನೆ ಯಾಗಲಿದೆ. ನಿರೀಕ್ಷಿತ ಸ್ಥಾನ ಗೌರವಾದಿ ಲಭಿಸಿದ ರಿಂದ ಮನಃತೃಪ್ತಿ. ದಂಪತಿಗಳಲ್ಲಿ ಪರಸ್ಪರ ಅನು ರಾಗ ವೃದ್ಧಿ. ಅವಿವಾಹಿತರಿಗೆ ವಿವಾಹ ಯೋಗ್ಯ ಸಮಯ. ಯೋಗ್ಯ ಸಂಬಂಧ ಕೂಡಿಬರುವುದು.

ಧನು: ಭೂಮ್ಯಾದಿ ವಿಚಾರಗಳಲ್ಲಿ, ಆಸ್ತಿ ವಾಹನಾದಿಗಳಲ್ಲಿ ಅಭಿವೃದ್ಧಿ. ಗೃಹೋಪ ವಸ್ತುಗಳ ಖರೀದಿ ಸಂಗ್ರಹ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಸ್ಥಾನ ಗೌರವಾದಿ ಪ್ರಾಪ್ತಿ. ಹಣಕಾಸಿನ ವಿಚಾರದಲ್ಲಿ ಜವಾಬ್ದಾರಿಯುತ ನಡೆ ಅಗತ್ಯ.

ಮಕರ: ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸಫ‌ಲತೆ. ಗೌರವ ಆದರಾದಿ ಸುಖ. ಅಧಿಕ ಧನಾರ್ಜನೆ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಚರ್ಚೆಗೆ ಅವಕಾಶ ನೀಡದಿರಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.

ಕುಂಭ: ಆರೋಗ್ಯ ವೃದ್ಧಿ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ, ಪ್ರೋತ್ಸಾಹ. ದೂರದ ವ್ಯವಹಾರಗಳಿಂದ ಧನ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಸಹಕಾರ. ನಿರೀಕ್ಷಿತ ಗುರಿ ಸಾಧನೆ. ಮನೆಯಲ್ಲಿ ಸಂತಸದ ವಾತಾವರಣ.

ಮೀನ: ಮಕ್ಕಳಿಂದ ಸಂತೋಷ. ಮಾನಸಿಕ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ. ಗೃಹ ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆಯಿಂದ ಶ್ರೇಯಸ್ಸು. ಧನಾರ್ಜನೆಗೆ ಕೊರತೆಯಾಗದು. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಶ್ರಮ. ಗುರುಹಿರಿಯರ ಆರೋಗ್ಯ ತೃಪ್ತಿದಾಯಕ.

Advertisement

Udayavani is now on Telegram. Click here to join our channel and stay updated with the latest news.

Next