Advertisement

Daily Horoscope: ಉದ್ಯೋಗದಲ್ಲಿ ಹೊಸ ಜವಾಬ್ದಾರಿ, ಹೊಸ ವಿದ್ಯೆ ಕಲಿಯುವ ಆಸಕ್ತಿ

07:27 AM Apr 04, 2024 | Team Udayavani |

ಮೇಷ: ಸಮಸ್ಯೆಗಳಿಂದ ಸುಲಭದಲ್ಲಿ ಬಿಡುಗಡೆ. ಉದ್ಯಮ ವೈವಿಧ್ಯೀಕರಣ ಲಾಭದಾಯಕ. ಹೊಸ ಪಾಲುದಾರರ ಉತ್ಸಾಹ ವೃದ್ಧಿ. ಒಂದೇ ಲಕ್ಷ್ಯವನ್ನು ಸಾಧಿಸುವ ಪ್ರಯತ್ನದಲ್ಲಿ ಜಯ. ಲೇವಾದೇವಿ ವ್ಯವಹಾರದಿಂದ ದೂರವಿರಿ.

Advertisement

ವೃಷಭ: ಕಾರ್ಯ ಮುಗಿಸಲು ಅವಸರ ಬೇಡ. ಹಿತಶತ್ರುಗಳ ಬಾಧೆಯಿಂದ ಪಾರಾಗುವ ಮಾರ್ಗವನ್ನು ಹುಡುಕಿ. ಉದ್ಯೋಗ ಸ್ಥಾನದಲ್ಲಿ ಗೌರವದ ಸ್ಥಾನ.ಉತ್ಪನ್ನಗಳ ಸುಧಾರಣೆಗೆ ನೌಕರರ ಸಹಕಾರ.

ಮಿಥುನ: ಸಂಬಂಧಗಳ ನಡುವೆ ಸಮತೋಲನ ಪಾಲನೆ. ಉದ್ಯೋಗ ಸ್ಥಾನದಲ್ಲಿ ಅನುಕೂಲ. ಆರ್ಥಿಕ ವ್ಯವಹಾರ ಸುಧಾರಣೆ. ಪಾಲುದಾರಿಕೆ ಉದ್ಯಮ ಅನುಕೂಲಕರ. ಉದ್ಯಮ ವ್ಯವಹಾರದ ಸಂಬಂಧ ಸಣ್ಣ ಪ್ರವಾಸ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಅಧಿಕ ಜವಾಬ್ದಾರಿ. ಶ್ರದ್ಧೆ, ನಿಷ್ಠೆಗೆ ಮನ್ನಣೆ. ಹೊಸ ಉದ್ಯಮ ಆರಂಭಕ್ಕೆ ಚಿಂತನೆ. ಸಂಸಾರದಲ್ಲಿ ಸಾಮರಸ್ಯ. ದೇವತಾ ಕಾರ್ಯದಲ್ಲಿ ಭಾಗಿ.ವ್ಯವಹಾರ ಸಂಬಂಧ ಪೂರ್ವದಿಕ್ಕಿಗೆ ಪ್ರಯಾಣ.

ಸಿಂಹ: ಕಾರ್ಯಪದ್ಧತಿ ಬದಲಾಯಿಸಲು ಚಿಂತನೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ನೌಕರ ವೃಂದಕ್ಕೆ ಸಂತೃಪ್ತಿ. ಹೊಸ ವಿದ್ಯೆಯನ್ನು ಕಲಿಯುವ ಆಸಕ್ತಿ. ಕುಟುಂಬದಲ್ಲಿ ಪ್ರೀತಿಯ ವಾತಾವರಣ.

Advertisement

ಕನ್ಯಾ: ಬದುಕಿನ ಜಂಜಾಟಗಳ ನಡುವೆ ಆನಂದವನ್ನು ಅರಸುವ ಪ್ರಯತ್ನ. ಹೊಸ ವ್ಯಕ್ತಿಗಳ ಪರಿಚಯ. ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ನೆರವು. ಸಂಸಾರದ ನೆಮ್ಮದಿ ಕೆಡಿಸಲು ಹಿತಶತ್ರುಗಳ ಪ್ರಯತ್ನ.

ತುಲಾ: ಉದ್ಯೋಗದಲ್ಲಿ ಪ್ರತಿಭೆ, ಅನುಭವಕ್ಕೆ ಗೌರವ. ಹೊಸ ಸಹೋದ್ಯೋಗಿಗಳ ಸೇರ್ಪಡೆ. ಸರಕಾರಿ ನೌಕರರಿಗೆ ಅಧಿಕ ಕೆಲಸ. ಗೃಹೋಪಯೋಗಿ ಸಾಧನಗಳ ಖರೀದಿ. ಇಷ್ಟಾರ್ಥ ಸಿದ್ಧಿಗಾಗಿ ದೇವತಾರ್ಚನೆ.

ವೃಶ್ಚಿಕ: ಅರಸದೆ ಬಂದ ಸುಖದಿಂದ ಆನಂದ. ಉದ್ಯೋಗದಲ್ಲಿ ವೇತನ ವೃದ್ಧಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ಸಾಮಗ್ರಿಗಳ ವಿತರಕರಿಗೆ ಲಾಭ. ಕೃಷಿ ಕ್ಷೇತ್ರದಲ್ಲಿ ಹೊಸಬರಿಗೆ ಮಾರ್ಗದರ್ಶನ.

ಧನು:ಕಷ್ಟಗಳ ನಡುವೆ ಸುಖದ ಅರಸುವಿಕೆ. ಉದ್ಯೋಗಿಗಳಿಗೆ ಸಮಾಧಾನ. ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಲಾಭ ಮಧ್ಯಮ. ಬಂಧು ಕಲಹದ ಪರಿಹಾರಕ್ಕೆ ಮಧ್ಯಸ್ಥಿಕೆ. ಗೃಹಿಣಿಯರ ಉದ್ಯಮಕ್ಕೆ ಅಭೂತಪೂರ್ವ ಕೀರ್ತಿ.

ಮಕರ: ಮನೆಯಲ್ಲಿ ಸಮಾಧಾನದ ವಾತಾ ವರಣ. ಉದ್ಯೋಗ ನಿರ್ವಹಣ ಸಾಮರ್ಥ್ಯಕ್ಕೆ ಮೇಲಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮ ವಿಸ್ತರಣೆಗೆ ಕಾನೂನಿನ ತೊಡಕು ನಿವಾರಣೆ. ದೀರ್ಘಾವಧಿ ಉಳಿ ತಾಯ ಯೋಜನೆಯಲ್ಲಿ ಹಣ ಹೂಡಿಕೆ.

ಕುಂಭ:ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ಬೆಳವಣಿಗೆ ಸುಗಮ. ಉತ್ಪನ್ನಗಳಿಗೆ ಹೊಸ ರೂಪ ಕೊಡಲು ಚಿಂತನೆ. ಮಕ್ಕಳಿಗೆ ಅನೇಕ ವಿಷಯಗಳ ಕಲಿಕೆಯಲ್ಲಿ ಆಸಕ್ತಿ‌ ಪ್ರಗತಿ. ಪ್ರಾಚೀನ ವಿದ್ಯೆಗಳನ್ನು ಕಲಿಯಲು ಆಸಕ್ತಿ.

ಮೀನ: ಉದ್ಯೋಗ ಸ್ಥಾನದಲ್ಲಿ ಜಯ ಹಾಗೂ ಕೀರ್ತಿ ಎರಡೂ ಲಭ್ಯ. ಸರಕಾರಿ ಕಾರ್ಯಾಲಯಗಳಲ್ಲಿ ಕೊಂಚ ವಿಳಂಬ. ಆಸ್ತಿ ವಿಸ್ತರಣೆ ಪ್ರಯತ್ನದಲ್ಲಿ ಮುನ್ನಡೆ. ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಮಧ್ಯಮ ಲಾಭ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಕುಟುಂಬದಲ್ಲಿ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳುವಿಕೆ.

Advertisement

Udayavani is now on Telegram. Click here to join our channel and stay updated with the latest news.

Next