Advertisement

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

07:22 AM Apr 25, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ಸ್ಥೈರ್ಯ ಹಾಗೂ ಸಮಾಧಾನ, ವ್ಯವಹಾರ ಕೌಶಲದಿಂದ ಕಾರ್ಯಸಿದ್ಧಿ. ವ್ಯಾಪ್ತಿ ವಿಸ್ತರಣೆಯಿಂದ ಉದ್ಯಮಕ್ಕೆ ಲಾಭ. ದವಸ ಧಾನ್ಯ ವ್ಯಾಪಾರಿಗಳಿಗೆ ಕ್ಷೇಮ. ವಸ್ತ್ರ, ಆಭರಣ ಖರೀದಿಗೆ ಧನವ್ಯಯ.

Advertisement

ವೃಷಭ: ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಕೆಲವರಿಗೆ ಅಯಾಚಿತ ಆರ್ಥಿಕ ನೆರವು ಲಭ್ಯ. ಧಾರ್ಮಿಕ ಸೇವಾ ಕ್ಷೇತ್ರಕ್ಕೆ ಸಂದರ್ಶನ. ಪ್ರಾಪ್ತವಯಸ್ಕ ಹುಡುಗರಿಗೆ ವಿವಾಹ ಯೋಗ.

ಮಿಥುನ: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ. ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಶುಭದಿನ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ಗೃಹೋಪಯೋಗಿ ಸಾಮಗ್ರಿ ಖರೀದಿ.

ಕರ್ಕಾಟಕ: ಉದ್ಯೋಗ ಬದಲಾವಣೆ ಯತ್ನ ವಿಫಲ. ಹಿರಿಯರ ಆರೋಗ್ಯ ಸುಧಾರಣೆ. ಆಪ್ತರಿಂದ ನಿರೀಕ್ಷಿತ ಸಹಾಯ ಲಭ್ಯ. ವ್ಯವಹಾರ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚು ಪರಿಶ್ರಮಕ್ಕೆ ಒತ್ತು.

ಸಿಂಹ:ಸಹನೆ, ವಿವೇಕಗಳೊಂದಿಗೆ ಕಾಲೋಚಿತ ವರ್ತನೆ. ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ. ತೀವ್ರ ಪ್ರಾರ್ಥನೆಯಿಂದ ದೇವತಾನುಗ್ರಹ ಪ್ರಾಪ್ತಿ. ಹಿರಿಯರ ಆರೋಗ್ಯ ಸುಧಾರಣೆ. ವಿದ್ಯಾ ರ್ಥಿಗಳಿಗೆ ಅನು ಕೂಲ ವಾತಾವರಣ.

Advertisement

ಕನ್ಯಾ: ಕೆಲವರಿಗೆ ಉದ್ಯೋಗದಲ್ಲಿ ಸುಯೋಗ. ಅವಿವಾಹಿತ ಹುಡುಗರಿಗೆ ಶೀಘ್ರ ವಿವಾಹ ಯೋಗ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ವಿದ್ಯಾರ್ಥಿಗಳಿಗೆ ಏಕಾಗ್ರತೆ ವೃದ್ಧಿ. ಗೃಹಿ ಣಿಯರ ಸೊÌàದ್ಯೋಗ ಯೋಜನೆ ಪ್ರಗತಿ.

ತುಲಾ: ಉದ್ಯೋಗ ಸ್ಥಾನದಲ್ಲಿ ಕಾರ್ಯ ನಿರ್ವಹಣೆ ನಿರ್ವಿಘ್ನ. ಉದ್ಯಮದ ಉತ್ಪನ್ನಗಳ ಗುಣ ಮಟ್ಟ ಸುಧಾರಣೆಗೆ ಗಮನ. ಕ್ರೀಡೆ, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.

ವೃಶ್ಚಿಕ: ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರ. ತಾಳ್ಮೆಯ ನಡೆನುಡಿಯಿಂದ ಹಿರಿ ಯರ ಒಲವು ಲಭ್ಯ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಸುಧಾರಣೆ. ವ್ಯವಹಾರದ ಸಂಬಂಧ ಪ್ರಯಾಣ ಸಂಭವ.

ಧನು: ವ್ಯವಹಾರ ವೃದ್ಧಿಗೆ ಅನಿರೀಕ್ಷಿತ ಸಹಾಯ ಪ್ರಾಪ್ತಿ. ಕೌಟುಂಬಿಕ ಸಮಸ್ಯೆ ಪರಿಹಾರ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆರಂಭಿಸಲು ಕೆಲವರಿಗೆ ಆಸಕ್ತಿ.

ಮಕರ: ಸಹೋದ್ಯೋಗಿಗಳಿಂದ ಸಹ ಕಾರ. ಕುಟುಂಬದ ಸದಸ್ಯರೊಂದಿಗೆ ಪ್ರೀತಿ, ವಾತ್ಸಲ್ಯದ ಸಂಬಂಧ ವೃದ್ಧಿ. ಸಣ್ಣ ಉದ್ಯಮಿಗಳ ಆದಾಯ ವೃದ್ಧಿ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.

ಕುಂಭ: ಸಂಚಿತ ಧನ ಸದುದ್ದೇಶಕ್ಕೆ ವಿನಿಯೋಗ. ಕಿರಿಯ ಸಹೋದ್ಯೋಗಿ ಗಳಿಗೆ ಮಾರ್ಗದರ್ಶನ. ಸೇವೆ, ಪ್ರಾಮಾ ಣಿಕತೆಯಿಂದ ಸಮಾಜದಲ್ಲಿ ಗೌರವ. ಅಪರೂಪದ ಬಂಧುಗಳ ಭೇಟಿ.

ಮೀನ: ಉದ್ಯೋಗದಲ್ಲಿ ವಿಶೇಷ ಸಾಧನೆ, ವ್ಯವಹಾರದಲ್ಲಿ ಅಪರಿಮಿತ ಮುನ್ನಡೆ. ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ನೂತನ ವಾಹನ, ನಿವೇಶನ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಮಕ್ಕಳಿಂದ ಹಿರಿಯರಿಗೆ ಆನಂದ.

Advertisement

Udayavani is now on Telegram. Click here to join our channel and stay updated with the latest news.

Next