Advertisement

ಹಾಪ್‌ಕಾಮ್ಸ್‌ “ಹಾರ್ಟಿಬಜಾರ್‌’ಗೆ ಚಾಲನೆ 

11:17 AM Jun 30, 2017 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಹಾಪ್‌ಕಾಮ್ಸ್‌ “ಹಾರ್ಟಿ ಬಜಾರ್‌’ ಲಾಲ್‌ಬಾಗ್‌ ಬಳಿ ಪ್ರಾರಂಭಗೊಂಡಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ “ಸಂಡೇ ಬಜಾರ್‌’ ಮೇಳ ನಡೆಯಲಿದೆ. ಹಾರ್ಟಿ ಬಜಾರ್‌ನಲ್ಲಿ ಒಂದೇ ಸೂರಿನಡಿ ತರಕಾರಿ, ಹಣ್ಣುಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಜತೆಗೆ ಸಂಡೇ ಬಜಾರ್‌ ಮೇಳದಂದು ವಿಶೇಷ ರಿಯಾಯಿತಿ ಸಹ ಸಿಗಲಿದೆ.

Advertisement

ಬಾಳೆ ಹಣ್ಣಿನ ಮೇಲೆ ಶೇ.5ರಷ್ಟು, ಈರುಳ್ಳಿ, ಆಲೂಗಡ್ಡೆ, ತೆಂಗಿನ ಕಾಯಿ, ಟೊಮೇಟೊ ಮೇಲೆ ಶೇ.10ರಿಂದ 15ರಷ್ಟು ರಿಯಾಯಿತಿ ದೊರೆಯಲಿದೆ. ಸಿರಿಧಾನ್ಯದಿಂದ ತಯಾರಿಸಲಾದ ತಿಂಡಿಗಳನ್ನು ರೆಫ್ರೆಷ್‌ಮೆಂಟ್‌ನಲ್ಲಿ ಖರೀದಿಸಿ ಸವಿಯಬಹುದಾಗಿದೆ. 

ಗುರುವಾರ ಹಾರ್ಟಿಬಜಾರ್‌ ಹಾಗೂ ಕೈ ತೋಟ ಸಲಕರಣೆ ಮಳಿಗೆ  ಉದ್ಘಾಟಿಸಿದ ಎಸ್‌ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಫಾರೂಕ್‌ ಶಹಾಬ್‌, ಒಂದೇ ಸೂರಿನಡಿಯಲ್ಲಿ ಎಲ್ಲಾ ರೀತಿಯ ಹಣ್ಣು, ತರಕಾರಿ ಸೇರಿದಂತೆ ವಿವಿಧ ಕಂಪನಿಗಳ ಉತ್ಪನ್ನಗಳು ಸಿಗುವಂತೆ ಹಾಪ್‌ಕಾಮ್ಸ್‌ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ರೈತರಿಗೆ ಅನುಕೂಲವಾಗುವಂತೆ ಹಾಪ್‌ಕಾಮ್ಸ್‌ಗೆ 10 ಲಕ್ಷ ರೂ.ದೇಣಿಗೆ ನೀಡಿದ್ದು, ಮುಂದಿನ ದಿನಗಳಲ್ಲೂ ಕೂಡ ಸಾಧ್ಯವಾದಷ್ಟು ನೆರವು ಒದಗಿಸಲಾಗುವುದು ಎಂದು ತಿಳಿಸಿದರು. ಗ್ರಾಹಕರಿಗೆ ಅನುಕೂಲವಾಗುವಂತೆ ಸ್ವೆ„ಪಿಂಗ್‌ ಯಂತ್ರಗಳನ್ನು ನೀಡಲಾಗಿದೆ. ಜತೆಗೆ ಸುಲಭವಾಗಿ ಹಣ ಸಿಗುವಂತೆ ಹಾರ್ಟಿ ಬಜಾರ್‌ ಸಮೀಪದಲ್ಲಿಯೇ ಎಸ್‌ಬಿಐ ಎಟಿಎಂ ತೆರೆದಿದ್ದು ಇದರ ಉಪಯೋಗ ಪಡೆಯಬಹುದು ಎಂದು ಹೇಳಿದರು. 

ಹಾಪ್‌ಕಾಮ್ಸ್‌ ಅಧ್ಯಕ್ಷ ಜಿ.ಶ್ರೀನಿವಾಸ್‌ ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ಈಗಾಗಲೇ ಸಂಸ್ಥೆಯಿಂದ ಕಸ್ತೂರಿನಗರ, ಸದಾಶಿವ ನಗರದಲ್ಲಿ ಹಾರ್ಟಿ ಬಜಾರ್‌ ಆರಂಭಿಸಲಾಗಿದೆ. ಪ್ರಸ್ತುತ ಹಾಪ್‌ಕಾಮ್ಸ್‌ ಪ್ರಧಾನ ಕಚೇರಿಯಲ್ಲಿ ಸೂಪರ್‌ಮಾರ್ಕೆಟ್‌ ಮಾದರಿಯಲ್ಲಿ ಹಾರ್ಟಿ ಬಜಾರ್‌ ಪ್ರಾರಂಭಿಸಲಾಗಿದೆ.

Advertisement

ಅಗತ್ಯ ಸಂದರ್ಭಗಳಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹಣ್ಣು, ತರಕಾರಿ ಮಾರಾಟವನ್ನೂ ಕೂಡ ಮಾಡಲಾಗುವುದು. ಖಾಸಗಿಯವರು ಜಾಗ ನೀಡಲು ಮುಂದೆ ಬಂದರೆ, ವಿವಿಧ ಬಡಾವಣೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಹಾರ್ಟಿ ಬಜಾರ್‌ ತೆರೆಯಲಾಗುವುದು ಎಂದು ತಿಳಿಸಿದರು. 

ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ಮಾತನಾಡಿ, “ಪ್ರತಿದಿನದ ಹಣ್ಣು, ತರಕಾರಿಗಳ ಬೆಲೆಯನ್ನು ಗ್ರಾಹಕರು ಸುಲಭವಾಗಿ ಗ್ರಹಿಸಲು ಅನುಕೂಲವಾಗುವಂತೆ ಡಿಜಿಟಲ್‌ ಸಾðಲಿಂಗ್‌ ಯಂತ್ರ ಅಳವಡಿಸಲಾಗಿದೆ.

ಜತೆಗೆ ಆನ್‌ಲೈನ್‌ ಬಿಲ್ಲಿಂಗ್‌ ವ್ಯವಸ್ಥೆ ಮಾಡಿದ್ದು, ಒಂದು ವಾರದೊಳಗೆ ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದ 300ಕ್ಕೂ ಹೆಚ್ಚು ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಆನ್‌ಲೈನ್‌ ಬಿಲ್ಲಿಂಗ್‌ ವ್ಯವಸ್ಥೆ ಜಾರಿಗೆ ತರಲಾಗುವುದು,’ ಎಂದರು. 

 ಹಾಪ್‌ಕಾಮ್ಸ್‌ ಉಪಾಧ್ಯಕ್ಷ ಮುನೇಗೌಡ, ಆಡಳಿತ ಮಂಡಳಿ ನಿರ್ದೇಶಕರಾದ ಚಂದ್ರೇಗೌಡ, ಜಯಕುಮಾರ್‌, ಗೋಪಾಲಕೃಷ್ಣ, ನಾಗವೇಣಿ, ಪದ್ಮಾವತಿ, ಶ್ರೀನಿವಾಸ್‌, ದೇವರಾಜ್‌, ನಂಜಾರೆಡ್ಡಿ, ಸುಬ್ರಮಣ್ಯ. ಸಂಪಂಗಿ, ನಂಜಪ್ಪ, ಹಾಪ್‌ಕಾಮ್ಸ್‌ ಪ್ರಧಾನ ವ್ಯವಸ್ಥಾಪಕ ಪ್ರಶಾಂತ್‌, ದಯಾನಂದ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next