Advertisement

ಬೀಜ-ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಿ : ಸುಜಾತಾ

01:32 PM Jun 17, 2020 | Naveen |

ಹೊಳಲ್ಕೆರೆ: ತಾಲೂಕಿನ ಅಲ್ಲಲ್ಲಿ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮು ಆರಂಭವಾಗಿದೆ. ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ರೈತರಿಗೆ ಒದಗಿಸಲು ಕೃಷಿ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕು. ಮೆಕ್ಕೆಜೋಳ ಬೆಳೆದ 37,000 ರೈತರಿಗೆ ಸರ್ಕಾರದ ಪ್ರೋತ್ಸಾಹಧನ ತಲುಪಿಸಬೇಕೆಂದು ತಾಪಂ ಅಧ್ಯಕ್ಷೆ ಸುಜಾತಾ ಧನಂಜಯ ನಾಯ್ಕ ಸೂಚಿಸಿದರು.

Advertisement

ತಾಲೂಕು ಪಂಚಾಯತ್‌ದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸುಲು ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಮಳೆ ವಾಡಿಕೆಯಲ್ಲಿ 160 ಮಿಮೀ ಅಗುವ ಬದಲು 123 ಮಿಮೀ ಆಗಿದೆ. ಒಟ್ಟು 54 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಇದೆ. ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರ ದೊರೆಯುವಂತೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಮಾತನಾಡಿ, ರಾಣೆಬೆನ್ನೂರು ಬಿಡಿ ಬೀಜಗಳ ಮಾರಾಟದ ದಂಧೆ ತಾಲೂಕಿನಲ್ಲಿ ಜೋರಾಗಿ ನಡೆಯುತ್ತಿದೆ. ರೈತರಿಗೆ ವಂಚಿಸಿ ಬೀಜ ಮಾರುವ ದಂಧೆಕೋರರ ವಿರುದ್ದ ಕಠಿಣ ಕ್ರಮ ಆಗಬೇಕು. ಬೀಜ, ಗೊಬ್ಬರ ಖರೀದಿಸುವ ರೈತರಿಗೆ ಕಡ್ಡಾಯವಾಗಿ ಬಿಲ್‌ ನೀಡುವಂತೆ ಅಂಗಡಿಯವರಿಗೆ ಸೂಚನೆ ನೀಡಬೇಕೆಂದರು.

ತಾಪಂ ಸದಸ್ಯ ಪರಮೇಶ್ವರಪ್ಪ ಮಾತನಾಡಿ, ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಜನರಿಗೆ ಸಿಗುತ್ತಿಲ್ಲ.ವಿದ್ಯಾರ್ಥಿಗಳ ಬಿಸಿಯೂಕ್ಕೆ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಬೇಕಿದ್ದ ಆಹಾರ ಧಾನ್ಯ ವಿತರಿಸಿಲ್ಲ. ಸುಳ್ಳು ಲೆಕ್ಕ ಸೃಷ್ಟಿಕೊಂಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರಿಂದ ಈ ಬಗ್ಗೆ ಸಾಕಷ್ಟು ದೂರು ಬಂದಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ಶಿವಕುಮಾರ್‌, ಜಯಪ್ಪ ತನಿಖೆ ನಡೆಸುವಂತೆ ಆಗ್ರಹಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳಿಗೆ ಪೂರೈಸುವ ಆಹಾರಕ್ಕೆ ಧಾನ್ಯಕ್ಕೆ ಬೇಕಾದ 729.32 ಲಕ್ಷ ರೂ. ಅನುದಾನಕ್ಕೆ ಅನುಮೋದನೆ ನೀಡಲಾಯಿತು.

ತೋಟಗಾರಿಕೆ 80 ಸಾವಿರ, ಕೃಷಿ ಇಲಾಖೆ 70.95 ಲಕ್ಷ, ಶಿಕ್ಷಕರ ವೇತನ 647 ಲಕ್ಷ, ವೇತನೇತರ ಖರ್ಚುಗಳಿಗೆ 45 ಲಕ್ಷ, ತಾಪಂ 15ನೇ ಹಣಕಾಸು ಯೋಜನೆಗೆ 166 ಲಕ್ಷ, ಕಚೇರಿ ಖರ್ಚು 9 ಲಕ್ಷ, ಎಸ್ಸಿಎಸ್ಟಿ ವಿದ್ಯಾರ್ಥಿ ವೇತನಕ್ಕೆ 189 ಲಕ್ಷ, ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್‌ ನಿರ್ವಹಣೆಗೆ 45 ಲಕ್ಷ, ಆರೋಗ್ಯ ಇಲಾಖೆಯ ಕಟ್ಟಡಗಳ ದುರಸ್ತಿಗೆ 7.90 ಲಕ್ಷ, ಎಸ್ಟಿ ವಿದ್ಯಾರ್ಥಿಗಳ ವಸತಿ ನಿಲಯಗಳ ನಿರ್ವಹಣೆಗೆ 150 ಲಕ್ಷ, ಮೆಟ್ರಿಕ್‌ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಗಳ ನಿರ್ವಹಣೆಗೆ 104 ಲಕ್ಷ ಅನುದಾನಗಳ ಕ್ರಿಯಾ ಯೋಜನೆಗಳಿಗೆ ಹಣಕಾಸು ಸ್ಥಾಯಿ ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next