Advertisement

ಕೋವಿಡ್ ವಾರಿಯರ್ಸ್‌ಗಳಿಗೆ ಸನ್ಮಾನ

03:23 PM Aug 21, 2020 | Suhan S |

ಲೋಕಾಪುರ: ತಮ್ಮ ಜೀವದ ಹಂಗು ತೊರೆದು ಸಮಾಜದ ಹಿತ ದೃಷ್ಟಿಯಿಂದ ದುಡಿಯುತ್ತಿರುವ ಆರೋಗ್ಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಉದಪುಡಿ ಹೇಳಿದರು.

Advertisement

ಪಟ್ಟಣದ ತೊರಗಲ್‌ ವಿವಿಧೋದ್ದೇಶಗಳ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಕೋವಿಡ್  ವಾರಿಯರ್ಸ್‌ಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು. ಕೋವಿಡ್ ಸೋಂಕು ನಿಯಂತ್ರಣ ಕಾರ್ಯದಲ್ಲಿ ನಿರತರಾಗಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಸೇವೆ ಅನನ್ಯವಾಗಿದ್ದು, ಈ ನಿಟ್ಟಿನಲ್ಲಿ ಇವರ ಸೇವೆ ಗುರುತಿಸಿ ಸನ್ಮಾನಿಸಿದ ತೊರಗಲ್‌ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು. ತಾಪಂ ಸದಸ್ಯ ರಫೀಕ್‌ ಭೈರಕದಾರ ಮಾತನಾಡಿ, ಪಟ್ಟಣದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಎಲ್ಲರೂ ಗುಣಮುಖರಾಗಿ ಮರಳಿದ್ದಾರೆ. ಇದರಲ್ಲಿ ಕೋವಿಡ್ ವಾರಿಯರ್ಸ್‌ಗಳ ಪಾತ್ರ ಬಹಳ ಮುಖ್ಯ ಎಂದರು.

ಈ ವೇಳೆ ಅಂಜುಮನ್‌ ಅಧ್ಯಕ್ಷ ಅಲ್ಲಾಸಾಬ ಯಾದವಾಡ, ಪಿಕೆಪಿಎಸ್‌ ಅಧ್ಯಕ್ಷ ಆನಂದ ಹಿರೇಮಠ, ಗ್ರಾಪಂ ಮಾಜಿ ಅಧ್ಯಕ್ಷ ಬೀರಪ್ಪ ಮಾಯಣ್ಣವರ, ರಹೆಮಾನ ತೊರಗಲ್‌, ಹುಸೇನ್‌ ತೊರಗಲ್‌, ಶಫೀಕ್‌ ತೊರಗಲ್‌, ರಜಾಕ್‌ ತೊರಗಲ್‌, ಸುಲ್ತಾನ ಕಲಾದಗಿ, ಜಾವೇದ ಮುಧೋಳ, ಶಬ್ಬೀರ, ಡಾ| ವಿನಯ ಕುಲಕರ್ಣಿ, ಹಮೀದ್‌ ಮುದಕವಿ, ಜೆ.ಪಿ. ಜಲಗೇರಿ, ಎಂ.ಎಲ್‌. ಮೇಲಿನಮನಿ, ಫರೀದಾ ತೊರಗಲ್‌, ಇಮಾಂಬು ಮಹಾಲಿಂಗಪುರ ಇತರದ್ದರು.

Advertisement

Udayavani is now on Telegram. Click here to join our channel and stay updated with the latest news.

Next