Advertisement
ಮಿತವ್ಯಯದ ದರದಲ್ಲಿ ಮೊಬೈಲ್ ಫೋನ್ ನೀಡಿದರೂ ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದ ಕಂಪನಿಗಳಲ್ಲಿ ಹುವಾವೇಯ ಆನರ್ ಪ್ರಮುಖ ಸಾಲಿನಲ್ಲಿದೆ. ಅದರ ಎಕ್ಸ್ ಸರಣಿಯ ಮೊಬೈಲ್ ಫೋನ್‌ಗಳು ಕಡಿಮೆ ದರದಲ್ಲಿ ಉತ್ತಮ ತಾಂತ್ರಿಕ ಅಂಶಗಳನ್ನು ಒಳಗೊಂಡಿರುತ್ತವೆ.
Related Articles
• 6.5 ಇಂಚಿನ ಎಫ್ಎಚ್‌ಡಿ ಪ್ಲಸ್ ಡಿಸ್‌ಪ್ಲೇ, (1080*2340) 19.5:9 ಅನುಪಾತ
• 20 + 2 (ಡೆಪ್ತ್ ಸೆನ್ಸರ್) ಮೆಗಾಪಿಕ್ಸಲ್ ಯುಗಳ ಲೆನ್ಸಿನ ಹಿಂಬದಿಯ ಕ್ಯಾಮೆರಾ
• 16 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ
• ಹುವಾವೇನವರ ಕಿರಿನ್ 710 ಚಿಪ್‌ಸೆಟ್ (12ಎನ್‌ಎಂ)
• 8 ಕೋರ್ ಸಿಪಿಯು. 4 ಕೋರ್‌ಗಳು 2.2 ಗಿಗಾಹಟ್ಜ್jì, ಇನ್ನು 4 ಕೋರ್‌ಗಳು 1.7 ಗಿ.ಹ. ಜಿಪಿಯು ಮಾಲಿ ಜಿ. 51.
• 4 ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ (15 ಸಾವಿರ ರೂ.) 6 ಜಿಬಿ ರ್ಯಾಮ್ 64 ಜಿಬಿ ಆಂತರಿಕ ಸಂಗ್ರಹ, (17 ಸಾವಿರ ರೂ.) 6 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ (19 ಸಾವಿರ ರೂ.) ಹೀಗೆ ಮೂರು ವರ್ಶನ್‌ಗಳು.
• 3750 ಎಂಎಎಚ್ ಬ್ಯಾಟರಿ. 5ವಿ 2ಎ 10 ವ್ಯಾಟ್ಸ್ ಚಾರ್ಜರ್. ಮೈಕ್ರೋ ಯುಎಸ್‌ಬಿ.
• ಕೆಂಪು, ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯ.
Advertisement
ಆನರ್ 8 ಎಕ್ಸ್ ಭಾರತದಲ್ಲಿ ಕಿರಿನ್ 710 ಪ್ರೊಸೆಸರ್ ಉಳ್ಳ ಮೊದಲ ಆನರ್ ಫೋನ್. ಹುವಾವೇ ನೋವಾ 3ಐಗೂ ಇದೇ ಪ್ರೊಸೆಸರ್ ಹಾಕಲಾಗಿದೆ. ಇದು ಮಧ್ಯಮ ದರ್ಜೆಯ ಶಕ್ತಿಶಾಲಿ ಪ್ರೊಸೆಸರ್.
ಮೊಬೈಲ್‌ನ ಹಿಂಬದಿಯಲ್ಲಿ ಶಕ್ತಿಶಾಲಿಯಾದ ಗಾಜಿನ ಬಾಡಿಯನ್ನು ಜನಪ್ರಿಯಗೊಳಿಸಿದ್ದು ಆನರ್. ಅದರಲ್ಲೂ ಅದು ಪರಿಚಯಿಸಿದ ನೀಲಿ ಬಣ್ಣದ ಎರಡು ಶೇಡ್‌ಗಳುಳ್ಳ ವಿನ್ಯಾಸವನ್ನು ಇಂದು ಎಲ್ಲ ಕಂಪನಿಗಳೂ ಕಾಪಿ ಮಾಡುತ್ತಿವೆ. ಆನರ್ 8 ಎಕ್ಸ್ ಕೂಡ ಅದೇ ರೀತಿಯ ಎರಡು ಬಣ್ಣದ ಶೇಡ್ ಬರುವ, 15 ಪದರಗಳುಳ್ಳ ಗಾಜಿನ ದೇಹ ಹೊಂದಿದೆ. ಇದರ ಡಿಸ್‌ಪ್ಲೇ ಶೇ.91ರಷ್ಟಿದ್ದು, ಇನ್ನು ಶೇ.9ರಷ್ಟು ಮಾತ್ರ ಅಂಚುಗಳಿವೆ. ಹೆಚ್ಚು ಕಡಿಮೆ ಬಾರ್ಡರ್ ಲೆಸ್ ಡಿಸ್‌ಪ್ಲೇಎಂದು ಕಂಪನಿ ಹೇಳಿದೆ. 3750 ಎಂಎಎಚ್ ಬ್ಯಾಟರಿ ಇರುವುದರಿಂದ ಒಂದೂವರೆ ದಿನ ಹೆವಿ ಯೂಸೇಜ್ ಮಾಡಿದರೂ ಬ್ಯಾಟರಿ ಸಾಕಾಗುತ್ತದೆ.
ಇನ್ನೊಂದು ಪ್ರಮುಖಾಂಶವೆಂದರೆ 2 ಸಿಮ್‌ಗಳನ್ನು ಹಾಕಿಕೊಂಡರೂ, ಇನ್ನೊಂದು ಸ್ಲಾಟ್ ಅನ್ನು ಹೆಚ್ಚುವರಿಯಾಗಿ ನೀಡಿದ್ದು, ಅದರಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳಬಹುದು. ಆದರೆ, ಮೊಬೈಲ್‌ನ ಆಂತರಿಕ ಸಾಮರ್ಥ್ಯ 64 ಜಿಬಿ ಮತ್ತು 128 ಜಿಬಿ ಇರುವುದರಿಂದ ಅಡಿಷನಲ್ ಆಗಿ ಮೆಮೊರಿಕಾರ್ಡ್ ಹಾಕುವ ಅವಶ್ಯಕತೆ ಬರುವುದಿಲ್ಲ. (ಸಾಧ್ಯವಾದಷ್ಟೂ ನಿಮ್ಮ ಮೊಬೈಲ್ ಫೋನ್‌ಗಳಿಗೆ ಮೆಮೊರಿ ಕಾರ್ಡ್ ಹಾಕದಿರುವುದು ಒಳ್ಳೆಯದು. ಇದರಿಂದ ಮೊಬೈಲ್‌ಗಳ ವೇಗ ಕಡಿಮೆಯಾಗುತ್ತದೆ. ವೈರಸ್‌ಗಳು ಉಂಟಾಗುತ್ತವೆ. ಎಷ್ಟೋ ಮೆಮೊರಿ ಕಾರ್ಡ್‌ಗಳಲ್ಲಿ ಫೋಟೋಗಳು ಇದ್ದಕ್ಕಿದ್ದಂತೆ ಮಾಯವಾಗಿಬಿಡುತ್ತವೆ!)
ಅಮೆಜಾನ್‌ನಲ್ಲಿ ಅ.24ರಿಂದ ಮಾರಾಟ. ಅಂದಿನಿಂದ ಮತ್ತೆ ಐದು ದಿನಗಳ ಕಾಲ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನೀಡಿದೆ! ಐಸಿಐಸಿಐ ಕಾರ್ಡ್‌ಗೆ ಹಾಗೂ ಸಿಟಿಕ್ರೆಡಿಟ್ ಕಾರ್ಡ್‌ಗೆ ಶೇ.10ರಷ್ಟು ಕ್ಯಾಶ್‌ಬ್ಯಾಕ್ ದೊರಕಲಿದೆ. ಆನರ್ 8ಎಕ್ಸ್ ಅದರ ದರಕ್ಕಿಂತ ಒಂದೂವರೆ ಸಾವಿರ ಕಡಿಮೆಗೆ ದೊರಕುವ ನಿರೀಕ್ಷೆ ಇದೆ.
ಕೆ.ಎಸ್. ಬನಶಂಕರ ಆರಾಧ್ಯ