Advertisement

ಐಎಎಸ್‌ ಸಾಧಕಿಗೆ ಸನ್ಮಾನ

06:18 AM Feb 18, 2019 | |

ಕೆಂಗೇರಿ: ಛಲ, ದೃಢ ಸಂಕಲ್ಪವಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ಅಭಿಪ್ರಾಯಪಟ್ಟರು.

Advertisement

ಸಮೀಪದ ತಾವರೆಕೆರೆ ಗ್ರಾಮದ ಟಿ.ಜೆ.ನಜಿಯಾ, ಮೊದಲ ಪ್ರಯತ್ನದಲ್ಲೇ ಐಎಎಸ್‌ ಪರೀಕ್ಷೆ ಉತ್ತೀರ್ಣರಾದ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಹಳ್ಳಿಯಲ್ಲಿ ಜನಿಸಿದ ನಜಿಯಾ, ಹೆತ್ತವರ ಪ್ರೋತ್ಸಾಹ ಮತ್ತು ಆಪ್ತರ ಮಾರ್ಗದರ್ಶನದಿಂದ ತನ್ನ ಮೊದಲ ಪ್ರಯತ್ನದಲ್ಲೇ ಐಎಎಸ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ 12ನೇ ರ್‍ಯಾಂಕ್‌, ದೇಶಕ್ಕೆ 163ನೇ ರ್‍ಯಾಂಕ್‌ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಜಿಯಾ, “ಅಪ್ಪನ ಆಸೆಯಂತೆ ಉನ್ನತ ಅಧಿಕಾರಿಯಾಗಲು 8ನೇ ತರಗತಿಯಲ್ಲೇ ಐಎಎಸ್‌ ತೆಗೆದುಕೊಳ್ಳಲು ನಿರ್ದರಿಸಿದೆ. ವಿಜಯನಗರದ ಕಾಲೇಜಿನಲ್ಲಿ ಬಿ.ಕಾಂ ಓದುವಾಗ ವಿದ್ಯಾಸಂಸ್ಥೆ ನಿರ್ದೇಶಕರಾದ ಎಂ.ಕೆ.ರಾಮಸ್ವಾಮಿ ಹಾಗೂ ಉಪನ್ಯಾಸಕಿ ಜಯಲಕ್ಷ್ಮೀ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂದಪಟ್ಟ ಪುಸ್ತಕಗಳನ್ನು ಒದಗಿಸಿ ಸಾಧನೆಗೆ ಸಹಕರಿಸಿದರು.

ಚಾಲಕ ವೃತ್ತಿಯಲ್ಲಿರುವ ತಂದೆಯ ಶ್ರಮ, ತಾಯಿಯ ಪ್ರೋತ್ಸಾಹವನ್ನು ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂದರು. ಈ ಸಂದರ್ಭದಲ್ಲಿ ವಿಎನ್‌ಎಸ್‌ಎಸ್‌ ಅಧ್ಯಕ್ಷ  ಕೆಂಪೆಗೌಡ, ಪಂಚಾಯಿತಿ ಸದಸ್ಯ ನರಸಿಂಹ ಮೂರ್ತಿ, ಮಂಜುನಾಥ್‌, ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next