Advertisement

ಸೀರೆಯಲ್ಲಿ ರಾಮಾಯಣ

06:10 AM Nov 24, 2017 | Team Udayavani |

ಕೃಷ್ಣಾನಗರ (ಪಶ್ಚಿಮ ಬಂಗಾಲ): ಸುಮಾರು 20 ವರ್ಷಗಳ ಹಿಂದೆ ರಾಮಾಯಣದ ಏಳು ಪ್ರಮುಖ ಪ್ರಸಂಗಗಳನ್ನು 9 ಗಜ ಸೀರೆಯ ಮೇಲೆ ಮುದ್ರಿಸುವಲ್ಲಿ ಯಶಸ್ವಿಯಾಗಿದ್ದ ಇಲ್ಲಿನ ನಾಡಿಯಾ ಜಿಲ್ಲೆಯ ಬಿರೇನ್‌ ಕುಮಾರ್‌ ಬಾಸಕ್‌ ಎಂಬ ನೇಕಾರನಿಗೆ ಲಂಡನ್‌ನ ವಿಶ್ವವಿದ್ಯಾಲಯ ವೊಂದು ಗೌರವ ಡಾಕ್ಟರೇಟ್‌ ನೀಡಿದೆ. ಹೊಸದಿಲ್ಲಿ ಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿರೇನ್‌ಗೆ ಯುಕೆಯ ವರ್ಲ್x ರೆಕಾರ್ಡ್‌ ವಿಶ್ವವಿದ್ಯಾಲಯ ಈ ಗೌರವ ನೀಡಿ ಸನ್ಮಾನಿಸಿದೆ. 

Advertisement

ಸೀರೆ ತಯಾರಿಕೆಯ ಸ್ವರ್ಗ ನಾಡಿಯಾ ಜಿಲ್ಲೆಯ ಫ‌ುಲಿಯಾ ಹಳ್ಳಿಯ ಬಾಸಕ್‌ ಅವರಿಗೆ, 23 ವರ್ಷಗಳ ಹಿಂದೆ ಇಂಥದ್ದೊಂದು ಸೀರೆ ತಯಾರಿಸುವ ಪರಿಕಲ್ಪನೆ ಬಂದಿತ್ತಂತೆ. ಒಂದು ವರ್ಷದ ಯೋಜನೆ, 2 ವರ್ಷಗಳ ನೇಯ್ಗೆಯ ಅನಂತರ 1996ರಲ್ಲಿ ಸೀರೆ ಸಿದ್ಧವಾಗಿತ್ತು. ಆಗಲೇ, ರಾಷ್ಟ್ರವ್ಯಾಪಿ ಮೆಚ್ಚುಗೆಗೆ ಪಾತ್ರವಾಗಿದ್ದ ಬಾಸಕ್‌, ಈ ಕೆಲಸಕ್ಕಾಗಿ ರಾಷ್ಟ್ರ ಪ್ರಶಸ್ತಿ, ರಾಷ್ಟ್ರೀಯ ಮೆರಿಟ್‌ ಸರ್ಟಿಫಿಕೇಟ್‌, ಸಂತ ಕಬೀರ ಪ್ರಶಸ್ತಿಗಳನ್ನು ಪಡೆದಿದ್ದರು. ಈ ಕೆಲಸ ಲಿಮ್ಕಾ ಬುಕ್‌ ಆಫ್ ರೆಕಾರ್ಡ್ಸ್, ಇಂಡಿಯನ್‌ ಬುಕ್‌ ಆಫ್ ರೆಕಾರ್ಡ್ಸ್, ವರ್ಲ್ಡ್ ಯೂನಿಕ್‌ ರೆಕಾರ್ಡ್ಸ್‌ಗೂ ಸೇರ್ಪಡೆ ಗೊಂಡಿತ್ತು. ಇದೀಗ, 20 ವರ್ಷಗಳ ನಂತರ ಗೌರವ ಡಾಕ್ಟರೇಟ್‌ ಅನ್ನೂ ತಂದುಕೊಟ್ಟಿದೆ. ವರ್ಲ್ಡ್ ರೆಕಾರ್ಡ್ಸ್‌ ವಿವಿ ಈ ಸೀರೆ ಬಗ್ಗೆ ಮಹಾ ಪ್ರಬಂಧವನ್ನೂ ರಚಿಸಿದೆ. ತಮ್ಮ ಈ ಪ್ರಯೋಗಶೀಲತೆಯನ್ನು ಹಣಕ್ಕೆ ಮಾರಿಕೊಳ್ಳ ಲೊಲ್ಲದ ಬಾಸಕ್‌, ಈ ಹಿಂದೆ ಮುಂಬಯಿನ ಕಂಪೆ‌ನಿಯೊಂದು ಈ ಸೀರೆಗೆ ನೀಡಿದ್ದ 8 ಲಕ್ಷ ರೂ.ಗಳ ಆಫ‌ರ್‌ ಅನ್ನೂ ತಿರಸ್ಕರಿಸಿದ್ದರಂತೆ!
 

Advertisement

Udayavani is now on Telegram. Click here to join our channel and stay updated with the latest news.

Next