Advertisement

ಅಶೋಕ್‌ ಶೆಟ್ಟಿ ಬೇಲಾಡಿಗೆ ಗೌರವ ಡಾಕ್ಟರೇಟ್‌

04:30 PM Nov 27, 2018 | Team Udayavani |

ಮುಂಬಯಿ: ನಗರದ ಕ್ಯಾಟರಿಂಗ್‌ ವ್ಯವಸಾಯ ಉದ್ಯಮ ಮೆರಿಟ್‌ ಹಾಸ್ಪಿಟಾಲಿಟಿಯ ಅಶೋಕ್‌ ಎಸ್‌. ಶೆಟ್ಟಿ ಇವರಿಗೆ ಇಂಟರ್‌ನ್ಯಾಶ ನಲ್‌ ಪೀಸ್‌ ಯುನಿವರ್ಸಿಟಿಯಿಂದ  ಗೌರವ ಡಾಕ್ಟರೇಟ್‌ ಲಭಿಸಿದೆ.

Advertisement

ಜರ್ಮನಿಯ ಗ್ಲೋಬಲ್‌ ಎಕ್ರಿಡಿಯೇಶನ್‌ ಕೌನ್ಸಿಲ್‌ ಅಧಿಕಾರ ಹೊಂದಿರುವ ಇಂಟರ್‌ನ್ಯಾಶನಲ್‌ ಪೀಸ್‌ ಯುನಿವರ್ಸಿಟಿಯ ಘಟಿ ಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ನ. 22ರಂದು ಸಂಜೆ ಯುಎಇ ಬುರ್‌ ದುಬಾೖಯಲ್ಲಿರುವ ಗ್ರಾÂಂಡ್‌ ಎಕ್ಸಲ್ಸಿಯರ್‌ ಹೊಟೇಲ್‌ ಬಾಲ್‌ರೂಮ್‌ನಲ್ಲಿ ಜರಗಿದ ಸಂದರ್ಭದಲ್ಲಿ ಮುಂಬಯಿಯ ಕ್ಯಾಟರಿಂಗ್‌ ವ್ಯವಸಾಯ ಉದ್ಯಮಕ್ಕೆ ಹೆಸರಾದ ಸಂಸ್ಥೆ ಮೆರಿಟ್‌ ಹಾಸ್ಪಿಟಾಲಿಟಿ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ ಇದರ ನಿರ್ದೇಶಕ ಅಶೋಕ್‌ ಎಸ್‌. ಶೆಟ್ಟಿ ಬೇಲಾಡಿ ಅವರನ್ನು ಅಧ್ಯಕ್ಷತೆ ವಹಿಸಿದ್ದ ಗ್ಲೋಬಲ್‌ ಎಕ್ಸಿಡಿಯೇಶನ್‌ ಕೌನ್ಸಿಲ್‌ನ ನಿರ್ದೇಶಕ ಡಾ| ಕ್ರಿಶ್ಚಿಯನ್‌ ಬ್ರಿಲ್ಲಿಂಗರ್‌ ಅವರು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದರು.

ಪದವಿ ಪ್ರದಾನ ಸಮಾರಂಭದಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನ ಗ್ಯಾರಿ ಡೇಲಾ ಪೊಮೇರೈ, ಸಿಬಿಐ, ಸಿಎಫ್‌ಎಸ್‌ಎಸ್‌ ಇಂಡಿಯಾ ಮಾಜಿ ನಿರ್ದೇಶಕ, ವಿಶೇಷ ಫೊರೆನ್ಸಿಕ್‌ ತಜ್ಞ ಡಾ| ವಿ. ಎನ್‌. ಸೆಹಗಲ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

ಆದರಾತಿಥ್ಯ ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಅಶೋಕ್‌ ಎಸ್‌. ಶೆಟ್ಟಿ ಬೇಲಾಡಿ ಅವರು ಅಂದು ಗೌ|ಡಾ| ಪಡೆದವರಲ್ಲಿ ಪ್ರಮುಖರು.

Advertisement

Udayavani is now on Telegram. Click here to join our channel and stay updated with the latest news.

Next