ತಾಲೂಕುಗಳಿಂದ ಆಗಮಿಸಿದ್ದ ಪ್ರಶಸ್ತಿಗೆ ಆಯ್ಕೆಗೊಂಡಿದ್ದ ಶಿಕ್ಷಕರಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು. ತರಾತುರಿಯಲ್ಲಿ ಬಂದು ಭಾಷಣ ಮಾಡಿ ಹೊರಟ ಜನಪ್ರತಿನಿಧಿಗಳ ಕಾರ್ಯವೈಖರಿ ಶಿಕ್ಷಕರ ಕಣ್ಣು ಕೆಂಪಾಗಿಸಿದರೆ, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಗೈರಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
Advertisement
ಹೌದು ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಕ್ರಾಸ್‌ನಲ್ಲಿರುವ ನಂಜುಂಡೇಶ್ವರ ಕನ್ವೆಂಷನ್ ಹಾಲ್‌ನಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲು ಗಣ್ಯರ ಬರ ಎದುರಾಗಿದ್ದು, ಪ್ರಶಸ್ತಿಸ್ವೀಕರಿಸಲು ಬಂದಿದ್ದ ಉತ್ತಮ ಶಿಕ್ಷಕರಲ್ಲಿ ಉತ್ಸಾಹ ಕುಗ್ಗುವಂತೆ ಮಾಡಿತು.
Related Articles
Advertisement
ಶಿಕ್ಷಣ ದಿನಾಚರಣೆಯಿಂದ ದೂರ ಉಳಿದ ಡೀಸಿ, ಸಿಇಒ: ಒಂದಡೆ ಕಾಟಾಚಾರವೆಂಬಂತೆ ಜುನಾಯಿತ ಜನಪ್ರತಿನಿಧಿಗಳು ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಒಂದಿಷ್ಟು ಮಾತನಾಡಿ ಕಾರ್ಯಕ್ರಮಗಳ ಒತ್ತಡವಿದೆ ಎಂಬ ನೆಪದಲ್ಲಿ ಕಾರ್ಯಕ್ರಮದಿಂದ ನಿರ್ಗಮಿಸಿ ಶಿಕ್ಷಕರಲ್ಲಿ ಬೇಸರ ಮೂಡಿಸಿದರೆ, ಮತ್ತೂಂದಡೆ ಜಿಲ್ಲಾಡಳಿತದ ಚುಕ್ಕಾಣಿ ಹಿಡಿದಿರುವ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದು ಗಮನ ಸೆಳೆದರು. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರಿಗೆ ಶುಭ ಕೋರಿ ಶಿಕ್ಷಕರಿಗೆ ಒಂದಿಷ್ಟು ಹಿತವಚನ ನೀಡಬೇಕಿದ್ದ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಕಾರ್ಯಕ್ರಮಕ್ಕೆ ಬಾರದೇ ಇದಿದ್ದು ಶಿಕ್ಷಕರ ನಡುವೆ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.
ಕೊನೆಯಲ್ಲಿ ಬಂದ ಕೇಶವರೆಡ್ಡಿ: ತಮ್ಮ ಜಿಪಂ ಕ್ಷೇತ್ರದಲ್ಲಿಯೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆದರೂ ಮಾಜಿ ಜಿಪಂ ಅಧ್ಯಕ್ಷರು ಆಗಿರುವ ಹಾಲಿ ಸದಸ್ಯ ಪಿ.ಎನ್.ಕೇಶವರೆಡ್ಡಿ ಕಾರ್ಯಕ್ರಮ ಮುಗಿಯುವ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದರು.
ಕಾಗತಿ ನಾಗರಾಜಪ್ಪ