Advertisement

ಅದ್ಧೂರಿ ಹನುಮ ಜಯಂತಿ

03:34 PM Jul 08, 2018 | Team Udayavani |

ನಂಜನಗೂಡು: ನಂಜನಗೂಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಹನುಮ ಜಯಂತಿ ಮಹೋತ್ಸವ ವರುಣನ ಸಿಂಚನದ ಮಧ್ಯೆಯೂ ವಿಜೃಂಭಣೆಯಿಂದ ನೆರವೇರಿತು. ಹನುಮ ಭಕ್ತರು ವೀರಾಂಜನೇಯ ಧರ್ಮ ಜಾಗೃತಿ ಬಳಗ ಸ್ಥಾಪಿಸಿಕೊಂಡು ಅದರ ನೇತೃತ್ವದಲ್ಲಿ ಅದ್ಧೂರಿ  ಹನುಮನ ಮೆರವಣಿಗೆ ಆಚರಿಸಿ ನಗರ ಬೀದಿಗಳನ್ನು  ಕೇಸರಿಮಯವಾಗಿಸಿದ್ದರು.

Advertisement

ಶನಿವಾರ ಬೆಳಗ್ಗೆಯಿಂದಲೇ ಇಲ್ಲಿನ ಕಪಿಲಾ ನದಿ ತಟದಲ್ಲಿರುವ ದತ್ತಾತ್ರೇಯ ದೇವಾಲಯದಲ್ಲಿ ಕೃಷ್ಣ ಜೋಯಸ್‌ ನೇತೃತ್ವದಲ್ಲಿ ಹನುಮ ಜಯಂತಿ ವೀರಾಂಜನೆಯ ಬಳಗಧಾರ್ಮಿಕ ಕೈಂಕರ್ಯ ನಡೆಸಲಾಯಿತು. ಶನಿವಾರ ಬೆಳಗಿನಿಂದ ತುಂತುರು ಮಳೆಯಲ್ಲೂ ಸಹಸ್ರಾರು ಭಕ್ತರು ವೀರ ಹನುಮನ ಮೆರವಣಿಗೆ ಕಣ್ತುಂಬಿಕೊಂಡು ಭಕ್ತಿಪರವಶರಾದರು. ರಾಷ್ಟ್ರಪತಿ ರಸ್ತೆ ಹಾಗೂ ಮಹಾತ್ಮ ಗಾಂಧಿ ರಸ್ತೆ ಮೂಲಕ ಮತ್ತೆ ದೇವಾಲಯದತ್ತ ಸಾಗಿ ಮೆರವಣಿಗೆ ಸಾಗಿತು. 

ಶನಿವಾರ ಸಂಜೆ 4.30ಕ್ಕೆ ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಮಲ್ಲನಮೂಲೇ ಪೀಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ಸಾನಿಧ್ಯದಲ್ಲಿ ಡಾ. ಶ್ರೀಕಾಂತ ಕೇಸರಿ ಧ್ವಜವನ್ನು ಹಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಭಕ್ತ ಹುನಮನ ವಿಗ್ರಹದೊಂದಿಗೆ ಆಳೆತ್ತರದ ಆಂಜನೆಯ ಮೂರ್ತಿ ಮರವಣಿಗೆಗೆ ವೀರಭದ್ರ ಕುಣಿತ, ಕಂಸಾಳೆ ಜನಪದ ಕಲಾ ತಂಡಗಳು ಸಾಥ್‌ ನೀಡಿತು. 

Advertisement

Udayavani is now on Telegram. Click here to join our channel and stay updated with the latest news.

Next