Advertisement
ತನ್ನಲ್ಲಿ ಹಲವಾರು ವಿಶೇಷ ಸೌಲಭ್ಯಗಳನ್ನು ಒಳಗೊಂಡು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಈ ಸ್ಮಾರ್ಟ್ ಪೋನ್, 5G ನೆಟ್ ವರ್ಕ್ ಸಪೋರ್ಟ್ ಆಗುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಬಲಿಷ್ಟ ಡೈಮೆನ್ಸಿಟಿ ಚಿಪ್ ಅನ್ನು ಒಳಗೊಂಡಿದೆ.
Related Articles
Advertisement
ಹೊಸ ಹಾನರ್ V40 5G ಸ್ಮಾರ್ಟ್ ಪೋನ್ ತನ್ನ ಬಲ ಹಾಗೂ ಎಡಭಾರದಲ್ಲಿ ಕರ್ವ್ಡ್ ಜೊತೆಗೆ OLED ಡಿಸ್ ಪ್ಲೇ ಅನ್ನು ಒಳಗೊಂಡಿದೆ. ಅಲ್ಲದೆ ಈ ಮೊಬೈಲ್ ಪೋನ್ ತನ್ನ ಸ್ಕ್ರೀನ್ ನಲ್ಲಿ ಪಂಚ್ ಹೋಲ್ ವಿನ್ಯಾಸವನ್ನು ಹೊಂದಿದ್ದು,ಫುಲ್ ಹೆಚ್. ಡಿ ರೆಸ್ಯೂಲೇಷನ್ ಜೊತೆಗೆ 10.7 ಬಿಟ್ ಕಲರ್ ಡೆಪ್ತ್ ಅನ್ನು ಹೊಂದಿದೆ. ಹಾಗೂ ಡಿಸ್ ಪ್ಲೇ ನಲ್ಲಿಯೇ ಇಂಟಿಗ್ರೇಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಇದರಲ್ಲಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಈವರೆಗೆ 1.38 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಡಾ.ಕೆ.ಸುಧಾಕರ್
ಕ್ಯಾಮರಾ
ಈ ಸ್ಮಾರ್ಟ್ ಪೋನ್ ತನ್ನಲ್ಲಿ 50 MP ಪ್ರಾಥಮಿಕ ಕ್ಯಾಮರಾವನ್ನು ಹೊಂದಿದ್ದು, ಇದರ ಜೊತೆಗೆ 8 MP ಅಲ್ಟ್ರಾ ವೈಡ್ ಕ್ಯಾಮರಾ ಹಾಗೂ 2 MP ಮೈಕ್ರೋ ಲೆನ್ಸ್ ಕ್ಯಾಮರಾವನ್ನು ಒಳಗೊಂಡಿದೆ. ಇನ್ನು ಮುಂಭಾಗದಲ್ಲಿ 16 MP ಕ್ಯಾಮರಾ ಇದ್ದು, ಈ ಕ್ಯಾಮರಾಗಳ ಸಹಾಯದಿಂದ ಸೂಪರ್ ಸ್ಲೋ ಮೋಷನ್ ವಿಡಿಯೋ ಸೇರಿದಂತೆ 4K HDR ಪೋಟೋಗ್ರಾಫಿಯನ್ನು ಮಾಡಬಹುದಾಗಿದೆ. ಲೇಸರ್ ಅಟೊಫೋಕಸ್ ಹಾಗೂ LED ಫ್ಲ್ಯಾಶ್ ಅನ್ನು ಕೂಡ ಈ ಸ್ಮಾರ್ಟ್ ಫೊನ್ ನಲ್ಲಿ ಕಾಣಬಹುದಾಗಿದೆ.
ಬ್ಯಾಟರಿ ಸಾಮರ್ಥ್ಯ
ಹೋನರ್ V40 5G ಸ್ಮಾರ್ಟ್ ಪೋನ್ ಒಟ್ಟು 4,200 mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೆ ಸೂಪರ್ ಫಾಸ್ಟ್ ವಯರ ಚಾರ್ಜಿಂಗ್ ಜೊತೆಗೆ 50W ಫಾಸ್ಟ್ ವಯರ್ ಲೆಸ್ ಚಾರ್ಜಿಂಗ್ ವ್ಯವಸ್ಥೆಯನ್ನು ಇದು ಹೊಂದಿದೆ.
ಇದನ್ನೂ ಓದಿ:‘ಯುಪಿಎಸ್ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ
ಬಣ್ಣಗಳ ಲಭ್ಯತೆ
ಈ ಸ್ಮಾರ್ಟ್ ಪೋನ್ ಮ್ಯಾಜಿಕ್ ನೈಟ್ ಬ್ಲ್ಯಾಕ್, ಟೈಟಾನಿಯಂ ಸಿಲ್ವರ್, ಹಾಗೂ ರೋಸ್ ಗೋಲ್ಡ್ ಬಣ್ಣಗಳಲ್ಲಿ ಬಳಕೆದಾರರನ್ನು ತಲುಪಲಿದೆ.ಬೆಲೆ: ಹೋನರ್ V40 5G ಸ್ಮಾರ್ಟ್ ಪೋನ್ ಒಟ್ಟು ಎರಡು ರೀತಿಯ ಬೆಲೆಯಲ್ಲಿ ಬಳಕೆದಾರರನ್ನು ತಲುಪಲಿದ್ದು, 8GB RAM +128 GB ಸ್ಟೋರೇಜ್ ಗಾಗಿ 3.559 ಯುವಾನ್ ಹಾಗೂ 8GB RAM +256 GB ಸ್ಟೋರೇಜ್ ಗಾಗಿ 3,999 ಯುವಾನ್ ಗೆ ಲಭ್ಯವಿದೆ.