Advertisement

ಪ್ರಧಾನಿ ಬಗ್ಗೆ ಗೌರವ ಇದೆ: ಬೇಗ್‌

07:25 AM Oct 14, 2017 | Team Udayavani |

ಬೆಂಗಳೂರು: “ಪ್ರಧಾನಿ ಮೋದಿ ಬಗ್ಗೆ ನನಗೆ ಗೌರವ ಇದೆ. ಅವರ ಬಗ್ಗೆ ಯಾವತ್ತೂ ಕೆಟ್ಟ ಪದ ಬಳಕೆ ಮಾಡಲ್ಲ’ ಎಂದು ಸಚಿವ ರೋಶನ್‌ ಬೇಗ್‌ ಹೇಳಿದ್ದಾರೆ.

Advertisement

ಪ್ರಧಾನಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿದ್ದು, ನನಗೆ ಸಂಪೂರ್ಣ ತಮಿಳು ಭಾಷೆ ಬರುವುದಿಲ್ಲ. ಅಲ್ಪ ಸ್ವಲ್ಪ ತಮಿಳು ಭಾಷೆಯಲ್ಲಿ ಮಾತನಾಡಿದ್ದೇನೆ. ಪ್ರಧಾನಿ ಬಗ್ಗೆ ನನಗೆ ಗೌರವ ಇದೆ. ರಾಜ್ಯ ಬಿಜೆಪಿ ನಾಯಕರು ಪ್ರತಿ ದಿನ ಕಾಂಗ್ರೆಸ್‌ ನಾಯಕರ ಬಗ್ಗೆ ನಿರಂತರ ಆರೋಪ ಮಾಡುತ್ತಿದ್ದಾರೆ. ಈಗ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ರೋಶನ್‌ ಬೇಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next