Advertisement
ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪೋರ್ಟ್ ಫೋಲಿಯೊವನ್ನು ವಿಸ್ತರಿಸುತ್ತಿರುವ ಆನರ್ 200 ಪ್ರೊ 5ಜಿ ಮತ್ತು ಆನರ್ 200 5ಜಿ ಮಾಡೆಲ್ಗಳನ್ನು ಹೊರತಂದಿದೆ. ಆನರ್ ಗ್ರಾಹಕರಿಗೆ ಈ ಕೆಳಗಿನ ಸೇವಾ ಕೊಡುಗೆಗಳನ್ನು ಸಹ ಒದಗಿಸುತ್ತಿದೆ.
Related Articles
Advertisement
– 18 ತಿಂಗಳವರೆಗೆ ಮನೆ ಬಾಗಿಲಿನಿಂದ ಪಿಕಪ್ ಮಾಡುವ ಮೂಲಕ ಉಚಿತ ಸರ್ವೀಸ್ ಸೌಲಭ್ಯ.
– ಉದ್ಯಮದಲ್ಲಿ ಮೊದಲ ಬಾರಿಗೆ 3 ತಿಂಗಳ ಸೈಬರ್ ಭದ್ರತಾ ರಕ್ಷಣೆ (50,000 ವರೆಗೆ)
ಆನರ್ 200 ಸರಣಿಯು ಟ್ರಿಪಲ್-ಕ್ಯಾಮೆರಾ ವ್ಯವಸ್ಥೆಯೊಂದಿಗೆ ಛಾಯಾಗ್ರಹಣದಲ್ಲಿ ಉತ್ತಮವಾಗಿದೆ: 50MP ಪೋರ್ಟ್ರೇಟ್ ಮುಖ್ಯ ಕ್ಯಾಮೆರಾ, 50 MP ಪೋರ್ಟ್ರೇಟ್ ಟೆಲಿಫೋಟೋ ಕ್ಯಾಮೆರಾ, 12 MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 50 MP ಪೋರ್ಟ್ರೇಟ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಎರಡೂ ಸಾಧನಗಳು ಎಐ-ಚಾಲಿತ ಕಣ್ಣಿನ ಕಂಫರ್ಟ್ ಮತ್ತು ಅಮೋಲೆಡ್ ಕ್ವಾಡ್ ಕರ್ವ್ಡ್ ಪರದೆ ಹೊಂದಿವೆ. ಆನರ್ 200 ಪ್ರೊನಲ್ಲಿ ಸ್ನ್ಯಾಪ್ ಡ್ರ್ಯಾಗನ್ 8 ಎಸ್ Gen 3 ಮತ್ತು ಆನರ್ 200 ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 7 Gen 3 ಪ್ರೊಸೆಸರ್ ಹೊಂದಿದೆ.
ಆನರ್ 200 ಸರಣಿಯು ಮಿಂಚಿನ ವೇಗದ 100W ವೈರ್ಡ್ ಸೂಪರ್ ಚಾರ್ಜ್ ಹೊಂದಿದೆ, ಕೇವಲ 41 ನಿಮಿಷಗಳಲ್ಲಿ ಆನರ್ 200 ಪ್ರೊ ಅನ್ನು ಚಾರ್ಜ್ ಮಾಡುತ್ತದೆ. ಪ್ರೊ ರೂಪಾಂತರವು 66W ವೈರ್ ಲೆಸ್ ಚಾರ್ಜ್ ಬೆಂಬಲಿಸುತ್ತದೆ. 5200 ಎಂಎಎಚ್ನ , ಸೆಕೆಂಡ್ ಜನರೇಷನ್ನ ಸಿಲಿಕಾನ್ ಕಾರ್ಬನ್ ಬ್ಯಾಟರಿ ಹೊಂದಿದೆ.
ಆನರ್ 200 ಪ್ರೊ 5ಜಿ ಬೆಲೆ 12 ಜಿಬಿ, 512 ಜಿಬಿಗೆ 57,999 ರೂ. ಇದ್ದು, ಅಮೆಜಾನ್.ಇನ್ ನಲ್ಲಿ 10 ಸಾವಿರ ರೂ. ಕೂಪನ್ ಡಿಸ್ಕೌಂಟ್ ಹಾಗೂ 3 ಸಾವಿರ ರೂ. ಕ್ರೆಡಿಟ್ ಕಾರ್ಡ್ ಡಿಸ್ಕೌಂಟ್ ಇದೆ. ಅಂತಿಮವಾಗಿ 45 ಸಾವಿರ ರೂ.ಗೆ ದೊರಕುತ್ತದೆ.
ಆನರ್ 200 5ಜಿ, 12 GB + 512 GB ಬೆಲೆ 39,999 ರೂ ಇದ್ದು, ಇದಕ್ಕೆ 3 ಸಾವಿರ ರೂ. ಕೂಪನ್ ರಿಯಾಯಿತಿ,ಹಾಗೂ 2000 ರೂ. ಕ್ರೆಡಿಟ್ ಕಾರ್ಡ್ ರಿಯಾಯಿತಿ ಸೇರಿ 35 ಸಾವಿರ ರೂ. ಗೆ ದೊರಕುತ್ತದೆ. ಆನರ್ 200 5ಜಿ 8 ಜಿಬಿ, 256 ಜಿಬಿ ಬೆಲೆ 34,999 ರೂ. ಇದ್ದು, ಇದಕ್ಕೆ ಕೂಪನ್ ಹಾಗೂ ಕ್ರೆಡಿಟ್ ಕಾರ್ಡ್ನಿಂದ 4 ಸಾವಿರ ರೂ. ರಿಯಾಯಿತಿ ಇದ್ದು, 31 ಸಾವಿರ ರೂ.ಗೆ ದೊರಕಲಿದೆ.
ಇದನ್ನೂ ಓದಿ: Nityananda Rai: ಕಾಶ್ಮೀರದ ಉಗ್ರರು ಜೈಲಿಗೆ ಇಲ್ಲವೇ ನರಕಕ್ಕೆ: ಸಚಿವ ನಿತ್ಯಾನಂದ ರಾಯ್