ಹೊನ್ನಾವರ: ಒಂಭತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮೂಡ್ಕಣಿ ಶಂಭುಲಿಂಗೇಶ್ವರ ಸಭಾಭವನದಲ್ಲಿ ಮೇ 5ರಂದು ಮುಂಜಾನೆ 8ರಿಂದ ನಡೆಯಲಿದೆ. ಕವಿ, ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ| ಶ್ರೀಪಾದ ಹೆಗಡ ಕಣ್ಣಿ ಸರ್ವಾಧ್ಯಕ್ಷರಾಗಿದ್ದಾರೆ.
ಅಪೂರ್ವ ಸ್ಮರಣೆ, ಕವಿಕಾವ್ಯ ಸಮಯ, ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ, ಹೊನ್ನಾವರ ಪ್ರಕೃತಿ ಸಂಸ್ಕೃತಿ, ಕುರಿತು ಚರ್ಚೆ, ವಿಚಾರ ಸಂಕಿರಣ ನಡೆಯಲಿದೆ. ನಾರಾಯಣ ಯಾಜಿ ಸಾಲೇಬೈಲು ಸಮಾರೋಪದ ನುಡಿಗಳನ್ನು ಆಡುವರು.
ವಿವಿಧ ಕ್ಷೇತ್ರಗಳಲ್ಲಿ ದುಡಿದ ಗಣ್ಯರ ಸನ್ಮಾನ ನಡೆಯಲಿದೆ. ಸ್ವಚ್ಛ ಭಾರತ ರೂಪಕ, ಕರ್ನಾಟಕ ದರ್ಶನ, ಭಾವಗೀತೆ ಗಾಯನ, ಯಕ್ಷಗಾನ ನಡೆಯಲಿದೆ. ವೇದಿಕೆಗೆ ಹಿರಿಯ ತಲೆಮಾರಿನ ಯಕ್ಷಗಾನ ಕಲಾವಿದ ನಾರಾಯಣ ಹೆಗಡೆ, ಸಮ್ಮೇಳನ ಸ್ಥಳಕ್ಕೆ ರಾಣಿ ಚೆನ್ನಭೈರಾದೇವಿ ನಗರ, ಪ್ರಧಾನ ದ್ವಾರಗಳಿಗೆ ಜಲವಳ್ಳಿ ವೆಂಕಟೇಶರಾವ್, ಡಾ| ಪದ್ಮನಾಭಯ್ಯ ಹೈಗುಂದ, ಡಾ| ಕುಸುಮಾ ಸೊರಬ, ಚಂದ್ರಹಾಸ ಹುಡಗೋಡ ಹೆಸರಿಡಲಾಗಿದೆ. ಸ್ಥಳೀಯ ಶಂಭುಲಿಂಗೇಶ್ವರ ಸಾಂಸ್ಕೃತಿಕ ಸಂಘ, ಹಳ್ಳೇರ ಯುವಕ ಸಂಘ, ಧರ್ಮಸ್ಥಳ ಯೋಜನೆ, ದುರ್ಗಾಂಬಾ ಮಹಿಳಾ ಮಂಡಳ ಮೊದಲಾದ ಸಂಘಟನೆಗಳೊಂದಿಗೆ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹೆಗಡೆ, ಶಶಿಧರ ದೇವಾಡಿಗ, ಭವಾನಿಶಂಕರ, ಪ್ರಶಾಂತ ಮೂಡಲಮನೆ, ಶಂಕರ ಗೌಡ ಬಳಗ ಸಮ್ಮೇಲನ ಸಂಘಟಿಸಿದೆ.
Advertisement
ಮುಂಜಾನೆ 8ಕ್ಕೆ ಹಿರಿಯ ಸಾಮಾಜಿಕ ಕಾರ್ಯಕರ್ತ ಪಿ.ಟಿ. ನಾಯ್ಕ ಮೂಡ್ಕಣಿ ರಾಷ್ಟ್ರಧ್ವಜಾರೋಹಣ, ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣ ನಡೆಸುವರು. ನಂತರ ಕಲಾತಂಡದ ಮೆರವಣಿಗೆಗೆ ಟಿ.ಟಿ. ನಾಯ್ಕ ಚಾಲನೆ ನೀಡುವರು. ಮೂಡ್ಕಣಿ ನಾರಾಯಣ ಹೆಗಡೆ ಹೆಸರಿನ ವೇದಿಕೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ| ವಸುಂಧರಾ ಭೂಪತಿ ಉದ್ಘಾಟಿಸುವರು. ನಂತರ 4 ಸಾಹಿತ್ಯ ಕೃತಿಗಳ ಬಿಡುಗಡೆ ನಡೆಯಲಿದೆ. ಪುಸ್ತಕ ಮಳಿಗೆಯನ್ನು ಡಾ| ಶ್ರೀಪಾದ ಶೆಟ್ಟಿ ಉದ್ಘಾಟಿಸುವರು. ಸಾಹಿತ್ಯ ಸರ್ಜಾ ಶಂಕರ, ತಹಶೀಲ್ದಾರ್ ಮಂಜುಳಾ ಭಜಂತ್ರಿ, ತಾಪಂ ಇಒ ಸುರೇಶ ನಾಯ್ಕ ಪಾಲ್ಗೊಳ್ಳುವರು. ಅರವಿಂದ ಕರ್ಕಿಕೋಡಿ ಆಶಯದ ನುಡಿಗಳನ್ನಾಡುವರು.