ಉತ್ತರಕನ್ನಡ: ಆಳ ಸಮುದ್ರಕ್ಕೆ ತೆರಳಿದ್ದ ಮೀನುಗಾರಿಕಾ ಬೊಟೊಂದು ಕಡಲಿನಲ್ಲಿ ಮುಳುಗಡೆಯಾಗಿದ್ದು ಮೀನುಗಾರರನ್ನು ರಕ್ಷಿಸಲಾಗಿದೆ.
ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ವೆಂಕಟರಮಣ ಅಂಬಿಗ ಎನ್ನುವವರ ದುರ್ಗಾ ಭೈರವಿ ಎನ್ನುವ ಬೋಟು ಮುಳುಗಡೆಯಾಗಿದೆ.
ಕುಮಟಾ ತಾಲೂಕಿನ ಗೋಕರ್ಣ ತದಡಿ ಬಂದರಿನಿಂದ 15 ಮಂದಿ ಮೀನುಗಾರರು ಎರಡು ದಿನದ ಹಿಂದೆ ಈ ಬೋಟಿನಲ್ಲಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದ ನಡುವೆ ಲಂಗರು ಹಾಕಿ ಬೋಟನ್ನು ನಿಲ್ಲಿಸಿಟ್ಟು, ಇಂದು ಮೀನುಗಾರರೆಲ್ಲ ಮಲಗಿದ್ದ ವೇಳೆ ಏಕಾಏಕಿ ಬೋಟಿನಲ್ಲಿ ನೀರು ತುಂಬಿದೆ.
ಇದನ್ನೂ ಓದಿ: ಕೋಟ ಶ್ರೀನಿವಾಸ ಪೂಜಾರಿ ಕಾರಿಗೆ KSRTC ಬಸ್ ಢಿಕ್ಕಿ: ಅಪಾಯದಿಂದ ಪಾರಾದ ಸಚಿವರು
ಬೋಟಿನಲ್ಲಿದ್ದವರು ರಕ್ಷಣೆಗೆ ಕೂಗಿಕೊಂಡಾಗ ಸಮೀಪದಲ್ಲೇ ಇದ್ದ ಸರ್ವಲಕ್ಷ್ಮಿ ಎಂಬ ಇನ್ನೊಂದು ಬೋಟಿನಲ್ಲಿದ್ದ ಮೀನುಗಾರರು ಮುಳುಗುತ್ತಿದ್ದ ಬೋಟಿನಲ್ಲಿದ್ದ ಎಲ್ಲಾ ಮೀನುಗಾರರನ್ನು ತಮ್ಮ ಬೋಟಿಗೆ ಹತ್ತಿಸಿಕೊಂಡು ತದಡಿ ದಡಕ್ಕೆ ಸುರಕ್ಷೀತವಾಗಿ ಕರೆ ತರುವ ಮೂಲಕ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ.