Advertisement

ಕೋವಿಡ್ ಸೋಂಕು ಅವಮಾನವಲ್ಲ: ರೇಣುಕಾಚಾರ್ಯ

04:26 PM Jul 06, 2020 | Naveen |

ಹೊನ್ನಾಳಿ: ಕೋವಿಡ್ ಸೋಂಕು ಅನುಮಾನ ಬಂದಾಗ ವೈದ್ಯರು ಸಹಜವಾಗಿ ಪರೀಕ್ಷೆಗೊಳಪಡಿಸುತ್ತಾರೆ. ಜನತೆ ಅನ್ಯಥಾ ಭಾವಿಸಬಾರದು. ತಾಲೂಕಿನ ಹತ್ತೂರು, ಕ್ಯಾಸಿನಕೆರೆ, ದೊಡ್ಡೇರಿ ಗ್ರಾಮಗಳಲ್ಲಿ ಕೋವಿಡ್ ಪಾಸಿಟಿವ್‌ ಬಂದ ಕಾರಣ ಅವರನ್ನು ದಾವಣಗೆರೆ ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕು ಕಚೇರಿಯಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಮ್ಮಿಕೊಂಡಿದ್ದ ಶಿವ ಶರಣ ಹಡಪದ ಅಪ್ಪಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಲ ಗ್ರಾಮಗಳಲ್ಲಿ ಕೋವಿಡ್ ಬಗ್ಗೆ ಇಲ್ಲಸಲ್ಲದ ಸಂಶಯ ವ್ಯಕ್ತಪಡಿಸುತ್ತಿರುವುದಲ್ಲದೆ ಕೋವಿಡ್ ಸೋಂಕು ಗ್ರಾಮದಲ್ಲಿ ಬಂದಿದ್ದು ತಿಳಿದು ಇತರ ಗ್ರಾಮದವರು ತಮ್ಮ ಗ್ರಾಮಕ್ಕೆ ಬರುತ್ತಿಲ್ಲ ಎಂದು ದೂರುತ್ತಿದ್ದಾರೆ. ಇದು ಸಲ್ಲದು ಎಂದ ಅವರು, ರೋಗ ಬಂದಿದೆ-ನಮಗೆ ಅವಮಾನವಾಗಿದೆ ಎಂದು ಭಾವಿಸಬಾರದು ಎಂದರು.

ಯುವಕರಿಗೆ ಕೋವಿಡ್ ಸೋಂಕು ಇದ್ದರೂ ಕೆಲವೊಮ್ಮೆ ರೋಗ ಲಕ್ಷಣ ಕಾಣಿಸಿಕೊಳ್ಳದೇ ಗುಣಮುಖವಾಗಬಹುದು. ಅದು ದೇಹದ ಇಮ್ಯೂನಿಟಿ ಪ್ರಭಾವ. ಆದರೆ ವಯೋವೃದ್ಧರು ಹಾಗೂ ಚಿಕ್ಕ ಮಕ್ಕಳಿಗೆ ಈ ರೋಗ ಮಹಾಮಾರಿಯಾಗಿ ಕಾಡುತ್ತದೆ. ಅವರು ಗುಣಮುಖರಾಗುವುದು ಕಠಿಣ. ಆದ್ದರಿಂದ ಕುಟುಂಬದಲ್ಲಿ ಎಲ್ಲರೂ ಬಹು ಎಚ್ಚರಿಕೆಯಿಂದ ಇರಬೇಕು ಎಂದರು.

ತಹಶೀಲ್ದಾರ್‌ ತುಷಾರ್‌ ಹೊಸೂರು, ಪ.ಪಂ ಮುಖ್ಯಾಧಿಕಾರಿ ಎಸ್‌.ಆರ್‌.ವೀರಭದ್ರಯ್ಯ, ತಾಲೂಕು ವೈದ್ಯಾಧಿಕಾರಿ ಡಾ| ಕೆಂಚಪ್ಪ, ಪಿಎಸ್‌ಐ ತಿಪ್ಪೇಸ್ವಾಮಿ, ಹಡಪದ ಸಮಾಜದ ತಾಲೂಕು ಉಪಾಧ್ಯಕ್ಷ ವಿರೂಪಾಕ್ಷಪ್ಪ, ಕಾರ್ಯದರ್ಶಿ ಸುರೇಶ್‌, ಸಹ ಕಾರ್ಯದರ್ಶಿ ಚನ್ನಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next