Advertisement

ಗೈರಾದ ಅಧಿಕಾರಿಗಳಿಗೆ ನೋಟಿಸ್‌ ಕೊಡಿ

04:47 PM Feb 02, 2022 | Team Udayavani |

ಹೊನ್ನಾಳಿ: ತಿಂಗಳಿಗೊಂದು ಬಾರಿ ಪ್ರಗತಿಪರಿಶಿಲನಾ ಸಭೆ ಹಾಗೂ ವಾರಕ್ಕೊಂದು ಬಾರಿತಾಲೂಕು ಬಗರ್‌ಹುಕುಂ ಸಮಿತಿ ಸಭೆಯನ್ನುತಪ್ಪದೇ ನಡೆಸಬೇಕು ಎಂದು ಸಿಎಂ ರಾಜಕೀಯಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯಹೇಳಿದರು.ನ್ಯಾಮತಿ ಪಟ್ಟಣದ ಬಾಲಕಿಯರ ಸರ್ಕಾರಿಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ನಾಡಹಬ್ಬ, ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಇತರಕಾರ್ಯಕ್ರಮಗಳಿಗೆ ಹಾಗೂ ತಾಲೂಕು ಮಟ್ಟದಸಭೆಗಳಿಗೆ ತಾಲೂಕು ಮಟ್ಟದ ಅಧಿ ಕಾರಿಗಳುಹಾಜರಾಗದೆ ತಮ್ಮ ಕೆಳಗಿನ ನೌಕರರನ್ನು ಸಭೆಗಳಿಗೆಕಳಿಸಿಕೊಡುವ ಪರಿಪಾಠವನ್ನು ಕೆಲ ಅ ಧಿಕಾರಿಗಳುಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದನ್ನುನಾನು ಸಹಿಸುವುದಿಲ್ಲ. ಸಭೆಗಳಿಗೆ ಗೈರಾಗುವಅ ಧಿಕಾರಿಗಳಿಗೆ ನೋಟಿಸ್‌ ನೀಡುವಂತೆತಹಶೀಲ್ದಾರ್‌ಗೆ ಸೂಚನೆ ನೀಡಿದರು.

ನೂತನ ತಾಲೂಕು ನ್ಯಾಮತಿಗೆ ಎಲ್ಲಾ ಕಚೇರಿಗಳುಹಾಗೂ ಅಧಿ ಕಾರಿಗಳ ನಿಯುಕ್ತಿಯಾಗಿಲ್ಲ. ಹಾಗಾಗಿಹೊನ್ನಾಳಿ ತಾಲೂಕಿನ ಎಲ್ಲಾ ತಾಲೂಕು ಮಟ್ಟದಅಧಿ ಕಾರಿಗಳು ನ್ಯಾಮತಿ ತಾಲೂಕು ಕೇಂದ್ರದಲ್ಲಿನಡೆಯುವ ಎಲ್ಲಾ ಸಭೆಗಳಿಗೆ ಹಾಜರಾಗಿ ಸಭೆಗೆಮಾಹಿತಿ ನೀಡಬೇಕು. ಹೊನ್ನಾಳಿ ಪುರಸಭೆಗೆ 10ಕೋಟಿ ಹಾಗೂ ನ್ಯಾಮತಿ ಪಪಂಗೆ 5 ಕೋಟಿರೂ. ಅನುದಾನವನ್ನು ವಿವಿಧ ಮೂಲಭೂತಸೌಲಭ್ಯಗಳಿಗೆ ಸರ್ಕಾರ ಬಿಡುಗಡೆ ಮಾಡಿದೆ.

ತಕ್ಷಣಕಾಮಗಾರಿಗಳನ್ನು ಕೈಗೊಳ್ಳಬೇಕೆಂದರು.ನ್ಯಾಮತಿ ಪಟ್ಟಣದಲ್ಲಿ ನೀರು ಸರಬರಾಜು,ಸ್ವತ್ಛತೆ ಸೇರಿದಂತೆ ಇತರ ಎಲ್ಲಾ ಕೆಲಸಗಳುಕುಂಠಿತವಾಗಿವೆ ಎಂಬ ದೂರುಗಳುವ್ಯಾಪಕವಾಗಿ ಕೇಳಿ ಬಂದಿವೆ. ಇದರ ಬಗ್ಗೆಅ ಧಿಕಾರಿಗಳು ನಿರ್ಲಕ್ಷé ಧೋರಣೆ ತಾಳಿದ್ದಾರೆಎನ್ನುವ ಅಂಶ ನನ್ನ ಗಮನಕ್ಕೆ ಬಂದಿದೆ. ಪಪಂಮುಖ್ಯಾಧಿ ಕಾರಿ ಸರಿಯಾಗಿ ಕೆಲಸ ಮಾಡಿಕೊಂಡುಹೋಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next