Advertisement

ಹೊನ್ನಾಳಿ ತಾಲೂಕಿನಾದ್ಯಂತ ಸಂಭ್ರಮದ ಭೂಮಿ ಹುಣ್ಣಿಮೆ

02:57 PM Oct 21, 2021 | Team Udayavani |

ಹೊನ್ನಾಳಿ: ತಾಲೂಕಿನಾದ್ಯಂತ ಭೂತಾಯಿಗೆಪೂಜೆ ಸಲ್ಲಿಸುವ ಮೂಲಕ ಮಣ್ಣಿನ ಮಕ್ಕಳುಬುಧವಾರ ಭೂಮಿಹುಣ್ಣಿಮೆ ಹಬ್ಬವನ್ನುಸಡಗರ-ಸಂಭ್ರಮದಿಂದ ಆಚರಿಸಿದರು.

Advertisement

ಹೊಲದಲ್ಲಿ ಬೆಳೆದು ನಿಂತಿರುವ ಫಸಲಿಗೆಪೂಜೆ ಸಲ್ಲಿಸಿದ ಅನ್ನದಾತರು, ತಮ್ಮ ಬದುಕುಹಸನಾಗಲಿ ಎಂದು ಭೂತಾಯಿಯಲ್ಲಿಪ್ರಾರ್ಥಿಸಿದರು.

ಭೂಮಿಹುಣ್ಣಿಮೆ ಆಚರಣೆಹೊನ್ನಾಳಿ ತಾಲೂಕಿನ ಹಳ್ಳಿಗಳ ಗ್ರಾಮಸ್ಥರಿಗೆವಿಶೇಷ ಹಬ್ಬ. ಅದರಲ್ಲೂ ಗದ್ದೆ, ತೋಟಹೊಂದಿರುವವರಿಗೆ ಈ ದಿನ ಸಡಗರದತರುತ್ತದೆ. ಬೆಳಗಿನ ಜಾವದಿಂದಲೇ ಹಬ್ಬದಸಿದ್ಧತೆ ಆರಂಭವಾಗುತ್ತದೆ.

ಭೂಮಿತಾಯಿಗೆ ವಿವಿಧ ಭಕ್ಷéಭೋಜ್ಯಗಳನ್ನು ಮಹಿಳೆಯರುತಯಾರಿಸಿದರು. ಪುರುಷರು ತಮ್ಮಜಮೀನುಗಳಲ್ಲಿ ಪೂಜೆ ಮಾಡುವಸ್ಥಳಗಳಲ್ಲಿ ಸ್ವತ್ಛತೆ ಮಾಡಿ ಚಪ್ಪರ ಹಾಕಿತಳಿರು ತೋರಣಗಳನ್ನು ಕಟ್ಟಿ ಸಿದ್ಧತೆಮಾಡಿಕೊಂಡರು.ಅನ್ನ ನೀಡುವ ಭೂತಾಯಿಯನ್ನುಪೂಜಿಸಿದರೆ ಒಳ್ಳೆಯದಾಗುತ್ತದೆ ಎಂಬ ಪ್ರತೀತಿ ಇದೆ.

ಈ ಸಂದರ್ಭದಲ್ಲಿ ಗರ್ಭಿಣಿಯಾದಭೂತಾಯಿಯ ಬಯಕೆಯನ್ನುತೀರಿಸಬೆಕೇಂಬುದುದು ಈಭಾಗದ ಜನರ ನಂಬಿಕೆ. ಅದರಂತೆಭೂಮಿಹುಣ್ಣಿಮೆಯ ದಿನ ಹೊಲ-ಗದ್ದೆಗಳಲ್ಲಿವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

Advertisement

ಭತ್ತ,ಮೆಕ್ಕೆಜೋಳ, ಅಡಿಕೆ ತೆಂಗು ಮತ್ತು ಬಾಳೆತೋಟಗಳಿಗೆ ಸೀರೆ, ಕುಪ್ಪಸ ತೊಡಿಸಿ ವಿಶೇಷಅಲಂಕಾರ ಮಾಡಲಾಗಿತ್ತು. ಜೊತೆಗೆಮನೆಯಿಂದ ಸಿದ್ಧಪಡಿಸಿಕೊಂಡು ತಂದಿದ್ದಬಗೆ ಬಗೆಯ ತಿನಿಸುಗಳನ್ನುಟ್ಟು ನೈವೇದ್ಯಮಾಡಿ ಕುಟುಂಬಗಳ ಸದಸ್ಯರೆಲ್ಲರೂ ವಿಶೇಷಪೂಜೆ ಸಲ್ಲಿಸಿದರು.ಭೂತಾಯಿಗೆ ನೈವೇದ್ಯ ಮಾಡಿದ ಒಂದುಎಡೆಯನ್ನು ಭೂಮಿಯೊಳೊಳಗಿಟ್ಟುಮುಚ್ಚಲಾಯಿತು.

ಭೂತಾಯಿ ಈ ಎಡೆಯನ್ನುಸೇವಿಸುತ್ತಾಳೆ ಎಂಬ ನಂಬಿಕೆ ರೈತರದು.ಇನ್ನೊಂದು ಎಡೆಯನ್ನು ಜಮೀನನಲ್ಲಿ ಚರಗಚೆಲ್ಲಿ ಭಕ್ತಿ ಸರ್ಮಪಣೆ ಮಾಡಿದರು. ನಂತರಕುಟಂಬ ಸದಸ್ಯರು ಹಾಗೂ ಆಪೆ¤àಷ್ಟರೊಂದಿಗೆಸಿಹಿ ಭೋಜನ ಸವಿಯುವ ಮೂಲಕಹಬ್ಬವನ್ನು ಸ್ಮರಣೀಯವಾಗಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next