Advertisement

ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

02:51 PM Feb 22, 2022 | Team Udayavani |

ಹೊನ್ನಾಳಿ: ಕಳ್ಳ ಎತ್ತು, ಮುದಿ ಎತ್ತುಎಂದು ಮಾತನಾಡುವ ಶಾಸಕರು,ಇನ್ನು ಮುಂದೆ ನನ್ನ ವಿಚಾರವಾಗಿಮಾತನಾಡುವ ಮುನ್ನ ತಲೆ ಸರಿಇಟ್ಟುಕೊಂಡು ಮಾತಾಡಲಿ ಎಂದುಶಾಸಕ ಎಂ.ಪಿ.ರೇಣುಕಾಚಾರ್ಯಅವರಿಗೆ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಎಚ್ಚರಿದರು.ಸಚಿವ ಕೆ.ಎಸ್‌. ಈಶ್ವರಪ್ಪಅವರ ರಾಜೀನಾಮೆಗೆ ಆಗ್ರಹಿಸಿಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿಮಾತನಾಡಿದ ಅವರು, ತಾಲೂಕಿನಮಾಸಡಿ ಗ್ರಾಮದಲ್ಲಿ ಜಿಲ್ಲಾ ಧಿಕಾರಿಗಳನಡೆ ಗ್ರಾಮಗಳ ಕಡೆ ಸಮಾರಂಭದಲ್ಲಿರೇಣುಕಾಚಾರ್ಯರು ನನಗೆ ಮುದಿಎತ್ತು, ಕಳ್ಳ ಎತ್ತು ಎಂದು ಕರೆದಿದ್ದಾರೆಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ನಾನು ಈ ಹಿಂದೆ ಶಾಸಕರೇಣುಕಾಚಾರ್ಯ ಮತ್ತು ಅವರತಾಲೂಕು ಆಡಳಿತದ ಬಗ್ಗೆ ಭ್ರಷ್ಟಾಚಾರಕುರಿತು ಸಾರ್ವಜನಿಕ ಚರ್ಚೆಗೆಆಹ್ವಾನಿಸಿದ್ದೆ. ಈಗಲೂ ಆಹ್ವಾನಿಸುತ್ತೇನೆ.ಹಿರೇಕಲ್ಮಠಕ್ಕೆ ಬರಲಿ ಎಂದು ಸವಾಲುಹಾಕಿದರು.ಸಚಿವ ಕೆ.ಎಸ್‌. ಈಶ್ವರಪ್ಪ ಒಬ್ಬಹಿರಿಯ ರಾಜಕಾರಣಿ ಅವರುರಾಷ್ಟ್ರಧ್ವಜಕ್ಕೆ ಅವಮಾನ ಮಾಡುವಂತಹಹೇಳಿಕೆ ಕೊಡಬಾರದು. ಕೆಂಪುಕೋಟೆಮೇಲೆ ಕೇಸರಿ ಧ್ವಜ ಹಾರಿಸುತ್ತೇನೆಎನ್ನುವ ಅವರ ಹೇಳಿಕೆ ಸಂವಿಧಾನ,ಕಾನೂನು ಬಾಹಿರ. ನಮ್ಮರಾದನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಕಳೆದ ಐದುದಿನಗಳಿಂದ ಪ್ರತಿಭಟನೆ, ಅಹೋರಾತ್ರಿಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ,ಅವರು ರಾಜೀನಾಮೆ ಕೊಡುವವರೆಗೂಸದನದ ಹೊರಗೂ ಒಳಗೂ ಹೋರಾಟಮಾಡುವುದಾಗಿ ಹೇಳಿದ್ದಾರೆ.

ನಾವುಕೂಡಾ ಹೋರಾಟಕ್ಕೆ ಸಿದ್ಧರಿದ್ದೇವೆಎಂದರು.ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಸಿದ್ದಪ್ಪ, ಡಾ| ಈಶ್ವರನಾಯ್ಕ, ಜಿಪಂಸದಸ್ಯ ಡಿ.ಜಿ. ವಿಶ್ವನಾಥ್‌, ಜಿಪಂ ಮಾಜಿಅಧ್ಯಕ್ಷ ಆರ್‌. ನಾಗಪ್ಪ, ಸಾಸ್ವೇಹಳ್ಳಿಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎ.ಗದ್ದಿಗೇಶ್‌, ತಾಲೂಕು ಅಲ್ಪಸಂಖ್ಯಾತರಘಟಕದ ಅಧ್ಯಕ್ಷ ಚೀಲೂರು ವಾಜೀದ್‌,ದಿಡಗೂರು ತಮ್ಮಣ್ಣ ಇತರರುಮಾತನಾಡಿದರು. ಈ ಸಂದರ್ಭದಲ್ಲಿಮುಖಂಡರಾದ ಎಚ್‌.ಡಿ. ವಿಜೇಂದ್ರಪ್ಪ,ಎಚ್‌.ಬಿ. ಅಣ್ಣಪ್ಪ, ಪಿಎಲ್‌ಡಿ ಬ್ಯಾಂಕ್‌ಅಧ್ಯಕ್ಷ ನಾಗೇಂದ್ರಪ್ಪ, ಪುರಸಭೆಕಾಂಗ್ರೆಸ್‌ ಸದಸ್ಯರು, ಎನ್‌ಎಸ್‌ಯುಐ,ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷರು,ಪದಾ ಕಾರಿಗಳು, ದಲಿತ ಸಂಘಟನೆಗಳಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next