Advertisement

ಡಾಬಾಗಳ ಮೇಲೆ ನಿಗಾ ಇರಲಿ

04:47 PM Apr 11, 2020 | Naveen |

ಹೊನ್ನಾಳಿ: ಡಾಬಾ ತೆರೆಯಲು ಅವಕಾಶ ನೀಡಿರುವುದರಿಂದ ತಾಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆಗಳು ಸಂಪೂರ್ಣ ನಿಗಾವಹಿಸಿ ನಿತ್ಯ ಪರಿಶೀಲಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್‌ ಸೂಚಿಸಿದರು.

Advertisement

ತಾ.ಪಂ ಸಾಮಾರ್ಥ್ಯಸೌಧದಲ್ಲಿ ಶುಕ್ರವಾರ ಕೊರೊನಾ ಮುನ್ನೆಚ್ಚರಿಕೆ ಜಾಗೃತಿ ಪರಿಶೀಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕು ಆಡಳಿತದಿಂದ ಡಾಬಾಗಳ ಸ್ಯಾನಿಟೈಸ್‌ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಹಾಗೂ ಡಾಬಾಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ಸ್ಕ್ರೀನಿಂಗ್‌ ಮಾಡಬೇಕು ಎಂದರು. ಅನೇಕ ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಲಾರಿ, ಸೇರಿದಂತೆ ಸಮಾಗ್ರಿ ಸಾಗಿಸುವ ಇತರ ವಾಹನಗಳ ಚಾಲಕರು ಹಾಗೂ ಇತರರು ಡಾಬಾಗಳಲ್ಲಿ ಊಟ ಮಾಡಿ ತೆರಳುತ್ತಾರೆ. ಇದರಿಂದ ಅವಘಡಗಳು ಜರುಗುವ ಸಂಭವವುಂಟು ಮುನ್ನೆಚ್ಚರಿಕೆ ಕ್ರಮ ವಹಿಸುವುದು ಉತ್ತಮ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಮಾತನಾಡಿ, ಅನಾವಶ್ಯಕವಾಗಿ ತಿರುಗಾಡುವ ಪೆಡ್ಡೆ ಹುಡುಗರ ವಾಹನಗಳನ್ನು ವಶಪಡಿಸಿಕೊಂಡು ದೂರು ದಾಖಲು ಮಾಡಬೇಕು ಎಂದು ಪೊಲೀಸ್‌ ಇಲಾಖೆಗೆ ಸೂಚಿಸಿದರು. ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ತಾಲೂಕಿನಲ್ಲಿ ಕೊರೊನಾ ಬಗ್ಗೆ ತೆಗೆದುಕೊಂಡು ಕ್ರಮಗಳ ಬಗ್ಗೆ ವಿವರಿಸಿದರು. ಜಿ.ಪಂ ಸಿಇಒ ಪದ್ಮಾಬಸಂತಪ್ಪ, ತಾ.ಪಂ ಇಒ ಎಸ್‌.ಎಲ್‌.ಗಂಗಾಧರಮೂರ್ತಿ, ನ್ಯಾಮತಿ ತಹಶೀಲ್ದಾರ್‌ ತನುಜಾ, ಡಿವೈಎಸ್‌ಪಿ ಪ್ರಶಾಂತಮನೊಳ್ಳಿ, ಸಿಪಿಐ ದೇವರಾಜ್‌, ತಾಲೂಕು ವೈದ್ಯಾಧಿ ಕಾರಿ ಡಾ| ಕೆಂಚಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next