Advertisement

ಮಹಿಳೆಗೆ ಕೋವಿಡ್ : 2 ಕಾಂಪ್ಲೆಕ್ಸ್‌ ಸೀಲ್‌ಡೌನ್‌

11:32 AM Jun 19, 2020 | Naveen |

ಹೊನ್ನಾಳಿ: ಮಹಿಳೆಯೊಬ್ಬರಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಕೋರಿ ಕಾಂಪ್ಲೆಕ್ಸ್‌ ಹಾಗೂ ಗಾಯತ್ರಿ ಮೆಡಿಕಲ್‌ ಸ್ಟೋರ್‌ ಕಾಂಪ್ಲೆಕ್ಸ್‌ ಅನ್ನು ಗುರುವಾರ ತಾಲೂಕು ವೈದ್ಯಾಧಿಕಾರಿ ಡಾ| ಕೆಂಚಪ್ಪ ಹಾಗೂ ಪಪಂ ಮುಖ್ಯಾಧಿಕಾರಿ ಎಸ್‌.ಆರ್‌. ವೀರಭದ್ರಯ್ಯ ನೇತೃತ್ವದಲ್ಲಿ ಸೀಲ್‌ ಡೌನ್‌ ಮಾಡಲಾಯಿತು.

Advertisement

ಬಸವನಹಳ್ಳಿ ಗ್ರಾಮದ ಮಹಿಳೆಯೊಬ್ಬರು ತೀವ್ರ ಜ್ವರದ ಕಾರಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದರು. ಎರಡನೇ ದಿನವೂ ಜ್ವರ ವಾಸಿಯಾಗದ ಕಾರಣ ಮತ್ತೆ ಹೊನ್ನಾಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರ ಗಂಟಲಿನ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ತೀವ್ರ ಜ್ವರ ಇದ್ದಿದ್ದರಿಂದ ಪಟ್ಟಣದ ಖಾಸಗಿ ಕ್ಲಿನಿಕ್‌ ನಲ್ಲಿ ತೋರಿಸಿದಾಗ ಅವರಿಗೆ ಟೈಪಾಯ್ಡ ಇರಬಹುದೆಂದು ಭಾವಿಸಿದ ವೈದ್ಯರು, ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಕಳುಹಿಸಿದ್ದರು. ಬುಧವಾರ ಆ ಮಹಿಳೆಗೆ ಕೋವಿಡ್ ಪಾಸಿಟಿವ್‌ ಇರುವುದು ದೃಢಪಟ್ಟ ಕಾರಣ ಗುರುವಾರ ಬೆಳಿಗ್ಗೆ ಕೋರಿ ಕಾಂಪ್ಲೆಕ್ಸ್‌ ಹಾಗೂ ಗಾಯತ್ರಿ ಮೆಡಿಕಲ್‌ ಸ್ಟೋರ್‌ ಕಾಂಪ್ಲೆಕ್ಸ್‌ ಸೀಲ್‌ಡೌನ್‌ ಮಾಡಲಾಗಿದೆ.

29 ಜನರಿಗೆ ಕ್ವಾರಂಟೈನ್‌: ಮಹಿಳೆಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಬಸವನಹಳ್ಳಿ ಹಾಗೂ ಮಾದನಬಾವಿ ಗ್ರಾಮದವರು, ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಸೇರಿದಂತೆ 29 ಜನರನ್ನು ಮೊರಾರ್ಜಿ ವಸತಿ ಶಾಲೆ ಹಾಗೂ ಲಾಡ್ಜ್ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಬಸವನಹಳ್ಳಿ ಹಾಗೂ ತವರುಮನೆ ಮಾದನಬಾವಿಯ ಎರಡು ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಕೆಂಚಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next