ಹಾಂಕಾಂಗ್: ದೇಶಾದ್ಯಂತ ಸೋಂಕು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹಾಂಕಾಂಗ್ ಸ್ಥಳೀಯ ಆಡಳಿತಗಳು ಸಾಮೂಹಿಕ ಕೋವಿಡ್ ಪರೀಕ್ಷೆ ನಡೆಸಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿಯೇ ಸೆಪ್ಟಂಬರ್ 1ರಿಂದ ಹಾಂಕಾಂಗ್‌ನ ಎಲ್ಲ ನಿವಾಸಿಗಳಿಗೆ ಉಚಿತ ಕೊರೊನಾ ಸೋಂಕು ತಪಾಸಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಣ ಮಾಡುವ ಉದ್ದೇಶದೊಂದಿಗೆ ಈ ನಿಯಮ ಜಾರಿ ಮಾಡುತ್ತಿದೆ.
ಆದರೆ ಸೋಂಕು ಪರೀಕ್ಷೆ ಕಡ್ಡಾಯ ಅಲ್ಲ, ಜತೆಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒತ್ತಾಯ ಇಲ್ಲ ಸ್ವಯಂ ಪ್ರೇರಿತರಾಗಿ ಮುಂದೆ ಬರುವ ಎಲ್ಲರಿಗೂ ಉಚಿತ ತಪಾಸಣೆಯ ಸೌಲಭ್ಯ ಲಭ್ಯ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
75 ಲಕ್ಷ ಜನಸಂಖ್ಯೆಯ ಹಾಂಕಾಂಗ್ ನಗರದಲ್ಲಿ ಈವರೆಗೆ 12 ಲಕ್ಷ ಮಂದಿಯ ತಪಾಸಣೆ ನಡೆಸಲಾಗಿದೆ.
ಹಾಂಕಾಂಗ್‌ನಲ್ಲಿ ಈವರೆಗೆ ಒಟ್ಟು 4,632 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇಬ್ಬರು 75 ಮಂದಿ ಮೃತಪಟ್ಟಿದ್ದಾರೆ.
ಜಗತ್ತಿನಾದ್ಯಂತ ಕೊರೊನಾ ಪ್ರಕರಣಗಳು ದಿನೇ ದಿನೇ ದಾಖಲಾಗುತ್ತಿವೆೆ. ಜನರಿಗೆ ಆರಂಭದಲ್ಲಿ ಇದ್ದ ಭಯ ಮತ್ತು ಆರೋಗ್ಯದ ಕುರಿತಾದ ಕಾಳಜಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿರುವುದು ಕೊರೊನಾ ವೈರಸ್‌ಗಳಿಗೆ ಸುಲಭವಾದಂತಿದೆ. ಪರಿಣಾಮವಾಗಿ ವಯಸ್ಸಿನ ಅಂತರವಿಲ್ಲದೇ ಸೋಂಕು ಎಲ್ಲೆಡೆ ಪ್ರಸರಣವಾಗುತ್ತಿದೆ. ಕೆಲವು ದೇಶಗಳು ಲಾಕ್‌ಡೌನ್‌ನಿಂದ ಹೊರಬಂದಿದ್ದು, ಬಹುತೇಕ ದೇಶಗಳು ತುಸು ನಿರಾಳತೆಯನ್ನು ಪ್ರಜೆಗಳಿಗೆ ನೀಡಿ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿಕೊಂಡಿವೆೆ.