ಹಾಂಕಾಂಗ್: ಸಮೀರ್ ವರ್ಮ ಅವರ ಕ್ವಾರ್ಟರ್ ಫೈನಲ್ ಸೋಲಿನ ಬಳಿಕ “ಹಾಂಕಾಂಗ್ ಓಪನ್’ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಆಟ ಕೊನೆಗೊಂಡಿದೆ.
ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸಮೀರ್ ವರ್ಮ ಅತಿಥೇಯ ನಾಡಿನ ಲೀ ಚೆಕ್ ಯುಯಿ ವಿರುದ್ಧ 15-21, 21-19, 11-21 ಗೇಮ್‌ಗಳಿಂದ ಎಡವಿದರು.
2016ರ ಹಾಂಕಾಂಗ್ ಓಪನ್ ಫೈನಲ್ ಪ್ರವೇಶಿಸಿದ್ದ ಸಮೀರ್ ವರ್ಮ ಈ ಬಾರಿ ಬೇಗನೇ ನಿರ್ಗಮಿಸಿದರು. ಋತುವಿನ ಆರಂಭದಲ್ಲಿ ನ್ಯೂಜಿಲ್ಯಾಂಡ್ ಓಪನ್ ಟೂರ್ನಿಯಲ್ಲಿ ಲೀ ಚೆಕ್ ವಿರುದ್ಧ ಜಯಿಸಿದ್ದ ಸಮೀರ್ ಆರಂಭಿಕ ಗೇಮ್‌ನಲ್ಲಿಯೇ ಮುಗ್ಗರಿಸಿದರು. 2ನೇ ಗೇಮ್‌ನಲ್ಲಿ ಎಚ್ಚೆತ್ತುಕೊಂಡ ಸಮೀರ್ ಸತತ ಅಂಕಗಳನ್ನು ಗಳಿಸುತ್ತ21-19 ಅಂಕಗಳಿಂದ ಜಯಿಸಿದರು. ನಿರ್ಣಾಯಕ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಲೀ ಚೆಕ್ 10 ಅಂಕಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಹಾಂಕಾಂಗ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಆಟ ಮುಗಿಸಿದ ಮೊಮೊಟ
ವಿಶ್ವದ ಅಗ್ರ ಶ್ರೇಯಾಂಕಿತ ಜಪಾನ್‌ನ ಕೆಂಟೊ ಮೊಮೊಟ ಸೆಮಿಫೈನಲ್‌ನಲ್ಲಿ ಅಘಾತ ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಮೊಮೊಟ ದಕ್ಷಿಣ ಕೊರಿಯದ ಸನ್ ವಾನ್-ಹೊ ವಿರುದ್ಧ 21-18, 16-21, 19-21 ಗೇಮ್‌ಗಳಿಂದ ಸೋಲನುಭವಿಸಿದರು.