Advertisement

ಪ್ರತಿಭಟನೆ, ಹಿಂಸಾಚಾರ:ಹಾಂಗ್ ಕಾಂಗ್ ಪ್ರಜಾಪ್ರಭುತ್ವ ಪರ ಪ್ರತಿಭಟನೆ, 9 ಮಂದಿಗೆ ಜೈಲುಶಿಕ್ಷೆ

03:04 PM Apr 16, 2021 | Team Udayavani |

ಹಾಂಗ್ ಕಾಂಗ್: ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಗಾಗಿ ಒತ್ತಾಯಿಸಿ 2019ರ ಮಾರ್ಚ್ ನಲ್ಲಿ ಸರ್ಕಾರದ ನೀತಿಯನ್ನು ವಿರೋಧಿಸಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿ ಹಿಂಸಾಚಾರಕ್ಕೆ ಕಾರಣರಾದ ಒಂಬತ್ತು ಮಂದಿಗೆ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಮದುವೆ ಸಮಾರಂಭಗಳಲ್ಲಿ ನೂರು ಜನ ಮೀರಬಾರದು: ಸಚಿವ ಸುಧಾಕರ್

ಕೆಲವು ಅಪರಾಧಗಳ ಆರೋಪಿಗಳನ್ನು ಚೀನಾದ ವಶಕ್ಕೆ ಒಪ್ಪಿಸುವ ವಿಧೇಯಕವನ್ನು ಹಾಂಗ್ ಕಾಂಗ್ ಜಾರಿಗೊಳಿಸಿರುವುದನ್ನು ವಿರೋಧಿಸಿ 2019ರ ಆಗಸ್ಟ್ ನಲ್ಲಿ ಅಂದಾಜು 17 ಲಕ್ಷ ಮಂದಿ ಬೀದಿಗಿಳಿದಿದ್ದರು. ಈ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿ, ಇದರಲ್ಲಿ ಶಾಮೀಲಾಗಿದ್ದ ಒಂಬತ್ತು ಮಂದಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು.

ಒಂಬತ್ತು ಮಂದಿ ದೋಷಿತರು ಎಂದು ಪರಿಗಣಿಸಿ ಶಿಕ್ಷೆ ವಿಧಿಸಿರುವುದು ಹಾಂಗ್ ಕಾಂಗ್ ನಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ಚಳವಳಿ ಮತ್ತಷ್ಟು ಬಿರುಸುಗೊಳ್ಳಬಹುದು ಎಂದು ವರದಿ ತಿಳಿಸಿದ್ದು, ಏತನ್ಮಧ್ಯೆ ಒಂದು ದೇಶ, ಎರಡು ವ್ಯವಸ್ಥೆ ಎಂಬ ತತ್ವದಡಿ ಅರೆ ಸ್ವಾಯತ್ತೆ ನೀಡುವ ವಿಚಾರದಲ್ಲಿ ಚೀನಾ ಮತ್ತು ಹಾಂಗ್ ಕಾಂಗ್ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ.

ಕೊಲೆ, ಲೈಂಗಿಕ ಅತ್ಯಾಚಾರದಂತಹ ಅಪರಾಧಗಳ ಶಂಕಿತರನ್ನು ವಿಚಾರಣೆಗಾಗಿ ಚೀನಾಕ್ಕೆ ಕಳುಹಿಸುವ ಕಾನೂನಿಗೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತವಾಗಿ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. 2017ರಲ್ಲಿ ಚೀನಾದ ಬೆಂಬಲದೊಂದಿಗೆ ಹಾಂಗ್ ಕಾಂಗ್ ನ ಮುಖ್ಯ ಕಾರ್ಯನಿರ್ವಾಹಕರಾಗಿ ಅಧಿಕಾರ ವಹಿಸಿಕೊಂಡ ಕ್ಯಾರಿ ಲ್ಯಾಮ್ ಈ ತಿದ್ದುಪಡಿ ವಿಧೇಯಕಕ್ಕೆ ಚಾಲನೆ ನೀಡಿದ್ದರು ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next