Advertisement

ಅಚ್ಚರಿಯ ಫ‌ಲಿತಾಂಶಕ್ಕೆ ಹಾಂಕಾಂಗ್‌ ಯೋಜನೆ

12:35 PM Sep 16, 2018 | |

ಹೊಸದಿಲ್ಲಿ: ಏಶ್ಯಕಪ್‌ ಕ್ರಿಕೆಟ್‌ ಕೂಟದಲ್ಲಿ ರೋಹಿತ್‌ ಶರ್ಮ ನೇತೃತ್ವದ ಭಾರತೀಯ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರಬಹುದು. ಆದರೆ ಲೀಗ್‌ ಹಂತದಲ್ಲಿ ಹಾಂಕಾಂಗ್‌ ತಂಡವು ಭಾರತ ಮತ್ತು ಪಾಕಿಸ್ಥಾನ ವಿರುದ್ಧ ಅಚjರಿಯ ಫ‌ಲಿತಾಂಶ ದಾಖಲಿಸುವ ಉತ್ಸಾಹದಲ್ಲಿದೆ ಎಂದು ಭಾರತ ತಂಡದ ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್‌ ಹೇಳಿದ್ದಾರೆ.

Advertisement

“ಎ’ ಬಣದಲ್ಲಿ ಹಾಂಕಾಂಗ್‌
ಬಲಿಷ್ಠ ತಂಡಗಳಾದ ಭಾರತ ಮತ್ತು ಪಾಕಿಸ್ಥಾನ ಜತೆ ಹಾಂಕಾಂಗ್‌ “ಎ’ ಬಣದಲ್ಲಿದೆ. ಭಾರತೀಯ ಮೂಲದ ಅಂಶುಮಾನ್‌ ರಥ್‌ ನೇತೃತ್ವದಲ್ಲಿ ಹಾಂಕಾಂಗ್‌ ಈ ಕೂಟದಲ್ಲಿ ಆಡುತ್ತಿದೆ. ಭಾರತ ಅಥವಾ ಪಾಕಿಸ್ಥಾನವನ್ನು ಉರುಳಿಸುವ ಯೋಜನೆಯನ್ನು ಹಾಂಕಾಂಗ್‌ ಹಾಕಿಕೊಂಡಿದೆ. ಆಟ ಗಾರರು ಅಷ್ಟೊಂದು ವೃತ್ತಿಪರತೆ ಹೊಂದಿಲ್ಲ. ಈ ಕೂಟಕ್ಕೆ ಏಕದಿನ ಮಾನ್ಯತೆ ಸಿಕ್ಕಿರುವ ಕಾರಣ ಸ್ಪರ್ಧಾತ್ಮಕವಾಗಿ ಆಡುವ ಗುರಿಯನ್ನು ಹಾಂಕಾಂಗ್‌ ಇಟ್ಟುಕೊಂಡಿದೆ.

2004 ಮತ್ತು 2008ರ ಬಳಿಕ ಇದೇ ಮೊದಲ ಬಾರಿ ಏಶ್ಯಕಪ್‌ನಲ್ಲಿ ಆಡುತ್ತಿರುವ ಹಾಂಕಾಂಗ್‌ ಅಚ್ಚರಿಯ ಫ‌ಲಿತಾಂಶಕ್ಕಾಗಿ ಹಾತೊರೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next