Advertisement

ಹನಿಟ್ರ್ಯಾಪ್‌ ಪ್ರಕರಣ: ಭಾರೀ ಜಾಲ ಸಕ್ರಿಯ ಶಂಕೆ

02:10 AM Jan 19, 2021 | Team Udayavani |

ಮಂಗಳೂರು: ಸುರತ್ಕಲ್‌ ಕೃಷ್ಣಾಪುರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಜ.14ರಂದು ನಡೆದಿರುವ ಹನಿಟ್ರ್ಯಾಪ್‌(ಮಹಿಳೆಯರಿಂದ ಬ್ಲ್ಯಾಕ್‌ವೆುàಲ್‌) ಪ್ರಕರಣದ ಆರೋಪಿಗಳಾದ ರೇಶ್ಮಾ ಅಲಿಯಾಸ್‌ ನೀಮಾ (32), ಇಕ್ಬಾಲ್‌ ಮಹಮ್ಮದ್‌ ಅಲಿಯಾಸ್‌ ಇಕ್ಬಾಲ್‌(35), ಜೀನತ್‌ ಅಲಿಯಾಸ್‌ ಜೀನತ್‌ ಮುಬೀನ್‌ (28) ಹಾಗೂ ನಾಸಿಫ್ ಅಲಿಯಾಸ್‌ ಅಬ್ದುಲ್‌ ಖಾದರ್‌ ನಾಜೀಪ್‌ನನ್ನು ಬಂಧಿಸಲಾಗಿದ್ದು ಈ ಜಾಲದಲ್ಲಿ ಇನ್ನೂ 4-5 ಮಂದಿ ಸಕ್ರಿಯರಾಗಿರುವ ಅನುಮಾನವಿದೆ. ಅಲ್ಲದೆ ಇದೇ ತಂಡ 6 ಮಂದಿಯನ್ನು ಇದೇ ರೀತಿ ಹನಿಟ್ರ್ಯಾಪ್‌ ಬಲೆಗೆ ಸಿಲುಕಿಸಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

Advertisement

ಇವರು ಮೂಲತಃ ಕೇರಳದವರಾಗಿದ್ದು ಸ್ಥಳೀಯ ಭಾಷೆಯಲ್ಲಿಯೇ ಹೆಚ್ಚಾಗಿ ವ್ಯವಹಾರ ನಡೆಸುತ್ತಿದ್ದರು. ಜ.14ರಂದು ಹನಿಟ್ರ್ಯಾಪ್‌ಗೆ ಒಳಗಾಗಿ ದೂರು ನೀಡಿದವರು ಕಾಸರಗೋಡು ನಿವಾಸಿಯಾಗಿದ್ದಾರೆ. ಇವರು ಮಾತ್ರವಲ್ಲದೆ ಇತರ ಸುಮಾರು 6 ಮಂದಿ ಇದೇ ರೀತಿ ಹನಿಟ್ರ್ಯಾಪ್‌ಗೆ ಒಳಗಾಗಿರುವುದು ಗೊತ್ತಾಗಿದ್ದು ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹಲವಾರು ತಂಡಗಳು :

ಮಂಗಳೂರು ಭಾಗದಲ್ಲಿ ಹಲವು ಹನಿಟ್ರ್ಯಾಪ್‌ ತಂಡಗಳು ಸಕ್ರಿಯರಾಗಿರುವ ಶಂಕೆ ಇದೆ. ಈಗ ಪತ್ತೆಯಾಗಿರುವ ಒಂದು ತಂಡವೇ 6 ಮಂದಿಯನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿರುವುದು ಗೊತ್ತಾಗಿದ್ದು ಹಲವಾರು ಮಂದಿ ಹನಿಟ್ರ್ಯಾಪ್‌ಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಆಯುಕ್ತರು ತಿಳಿಸಿದರು.

ಐಶಾರಾಮಿ ಜೀವನ  :

Advertisement

ರೇಶ್ಮಾ ಬೀಡಿ ಕಟ್ಟುವ ಕೆಲಸ ಮಾಡುತ್ತಾಳೆ. ಜೀನತ್‌ ಇನ್ಸೂರೆನ್ಸ್‌ ಏಜೆಂಟ್‌. ಉಳಿದವರಿಬ್ಬರು ಚಾಲಕ ವೃತ್ತಿ ಮಾಡುವವರು. ಆದರೆ ಐಷಾರಾಮಿ ಜೀವನ ನಡೆಸುತ್ತಿದ್ದರು. ಇವರಿಂದ ಒಂದು ಎಕ್ಸ್‌ಯುವಿ 500 ಕಾರು, 5 ಕ್ರೆಡಿಟ್‌ ಕಾರ್ಡ್‌, ನಾಲ್ಕು ಮೊಬೈಲ್‌ಗ‌ಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ದೂರು ನೀಡಲು ಭಯ ಬೇಡ :

ಹನಿಟ್ರ್ಯಾಪ್‌ಗೆ ಒಳಗಾದವರು ಅಂಜಿಕೆಯಿಲ್ಲದೇ ದೂರು ನೀಡಿದರೆ ಅವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಆಯುಕ್ತರು ಹೇಳಿದರು.

ದನ ಸಾಗಾಟಕ್ಕೂ ವಾಹನ ಬಳಕೆ :

ಎಕ್ಸ್‌ಯುವಿ ವಾಹನವನ್ನು ದನ ಸಾಗಾಟಕ್ಕೂ ಬಳಕೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ. ವಾಹನದ ಸೀಟುಗಳನ್ನು ತೆಗೆದು ಅದರಲ್ಲಿ ದನಗಳನ್ನು ಸಾಗಾಟ ಮಾಡಲು ಅನುಕೂಲವಾಗುವಂತೆ ಮಾರ್ಪಡಿಸಲಾಗಿತ್ತು ಎಂದು ಆಯುಕ್ತರು ತಿಳಿಸಿದ್ದಾರೆ.

ಉಪ ಪೊಲೀಸ್‌ ಆಯುಕ್ತರಾದ ಹರಿರಾಮ್‌ ಶಂಕರ್‌ ಮತ್ತು ವಿನಯ್‌ ಗಾಂವ್ಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next