Advertisement
ಪ್ರಿಯಾಂಕಾ ತನೇಜಾ ಅಲಿಯಾಸ್ ಹನಿಪ್ರೀತ್, ಪಂಜಾಬ್‌ನ ಜಿರಕ್‌ಪುರ- ಪಟಿ ಯಾಲ ಮಾರ್ಗದಲ್ಲಿ ಹಿಂಸಾಕೃತ್ಯ ನಡೆಸಿದವರ ಜತೆ ಸಂಪರ್ಕದಲ್ಲಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾ ಗಿದೆ ಎಂದು ಹರಿಯಾಣ ಡಿಜಿಪಿ ಬಿ.ಎಸ್. ಸಂಧು ತಿಳಿಸಿದ್ದಾರೆ. ಗುರ್ಮೀತ್ ವಿರುದ್ಧದ ಆರೋಪ ಸಾಬೀ ತಾದ ಅನಂತರ ನಡೆದ ಹಿಂಸಾಚಾರದಲ್ಲಿ 41 ಮಂದಿ ಮೃತಪಟ್ಟಿದ್ದರು. ಹಿಂಸೆಗೆ ಪ್ರಚೋ ದನೆ ನೀಡಿದ ಹಾಗೂ ದೇಶ ದ್ರೋಹದ ಆರೋಪ ಹನಿಪ್ರೀತ್ ಮೇಲಿದೆ.
“”ತಂದೆ ಮುಗ್ಧ. ಅವರ ಮೇಲೆ ಅತ್ಯಾಚಾರ ಆರೋಪ ಹೊರಿಸಿ ಬಂಧಿಸಲಾಯಿತು. ಇದರಿಂದ ಖನ್ನಳಾಗಿದ್ದೆ. ತಂದೆಯೊಬ್ಬ ಮಗಳನ್ನು ಪ್ರೀತಿಯಿಂದ ಮುಟ್ಟಲೇ ಬಾರದೇನು? ವಿನಾಕಾರಣ, ನನ್ನ ಮತ್ತು ಅವರ ವಿರುದ್ಧ ಅಕ್ರಮ ಸಂಬಂಧ ಕಲ್ಪಿಸಲಾಗಿದೆ. ಅಂಥ ಯಾವುದೇ ಅಕ್ರಮ ಸಂಬಂಧ ನನ್ನ ಮತ್ತು ಅವರ ಮಧ್ಯೆ ಇಲ್ಲ.” ಹೀಗೆಂದು ಕಿಡಿಕಾರಿದ್ದು ಹನಿಪ್ರೀತ್. ಪೊಲೀಸರಿಂದ ತಲೆಮರೆಸಿಕೊಂಡು ಇದ್ದ ಹನಿಪ್ರೀತ್, ಬಂಧನಕ್ಕೂ ಮುನ್ನ ಸ್ಥಳೀಯ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದರು. ಈ ವೇಳೆ ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, “”ಹೇಗೆ ನನ್ನ ಮೇಲೆ ಆರೋಪ ಹೊರಿಸುತ್ತಾರೆ? ನನ್ನ ತಂದೆಯ ಜತೆ ವಾಸಿಸುವುದು ತಪ್ಪಾ? ಮಗಳನ್ನು ಪ್ರೀತಿಯಿಂದ ಕಾಣುವುದು ತಂದೆಯ ಕರ್ತವ್ಯವಲ್ಲವೇ? ಅಷ್ಟಕ್ಕೂ ತಂದೆ ನಿರಪರಾಧಿಯಾಗಿ ಬರುತ್ತಾರೆ ಎಂಬ ನಂಬಿಕೆ ನನಗಿದೆ” ಎಂದಿದ್ದಾಳೆ.