Advertisement

ಕೊಲ್ಲೂರು ಪ್ರಾ. ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ ಕೊರತೆ

11:39 PM Jun 22, 2019 | Team Udayavani |

ಕೊಲ್ಲೂರು: ವೈದ್ಯರ ಅಭಾವದಿಂದಾಗಿ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿರುವ ಗ್ರಾಮೀಣ ಜನರು ಈಗ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಪೂರ್ಣಕಾಲಿಕ ವೈದ್ಯರಿಲ್ಲ

ಈ ವರೆಗೆ ಸೇವೆ ಸಲ್ಲಿಸುತ್ತಿದ್ದ ವೈದ್ಯಾಧಿಕಾರಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದರಿಂದ ಹುದ್ದೆ ಖಾಲಿಯಾಗಿದೆ. ಇದುವರೆಗೆ ಆ ಹುದ್ದೆ ಭರ್ತಿಯಾಗಿಲ್ಲ. ಎಳಜಿತ, ಗೋಳಿಹೊಳೆ, ಅರೆಶಿರೂರು, ಮುದೂರು, ಜಡ್ಕಲ್ ಹಾಗೂ ಕೊಲ್ಲೂರಿನ ರೋಗಿಗಳಿಗೆ ತುರ್ತು ಸೇವೆಗೆ ಕೇಂದ್ರದಲ್ಲಿ ವೈದ್ಯರಿಲ್ಲದ್ದರಿಂದ ಕುಂದಾಪುರ ಅಥವಾ ಬೈಂದೂರಿಗೆ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಎರವಲು ವೈದ್ಯರ ಸೇವೆ

ವಂಡ್ಸೆ ಹಾಗೂ ಹಟ್ಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪೂರ್ಣಕಾಲಿಕ ಇಬ್ಬರು ವೈದ್ಯರನ್ನು ವಾರದ 3 ದಿನ ಇಲ್ಲಿ ಸೇವೆಗೆ ನಿಯೋಜಿಸಲಾಗುತ್ತಿದೆ. ಆದರೆ ಉಳಿದ ದಿನಗಳಂದು ಸೇವೆಗೆ ಲಭ್ಯವಿಲ್ಲದ್ದರಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಬಹುದೂರದ ಮುದೂರು, ಯಳಜಿತ ಮುಂತಾದ ಕಡೆಯಿಂದ ತುರ್ತು ಚಿಕಿತ್ಸೆಗೆ ಆಗಮಿಸುವ ರೋಗಿಗಳ ಗತಿ ಹೇಳತೀರದು.

Advertisement

24X7 ಸೇವೆ ರದ್ದು!

ರೋಗಿಗಳು ಸಹಿತ ಮೂಕಾಂಬಿಕಾ ದೇಗುಲಕ್ಕೆ ಆಗಮಿಸುವ ಭಕ್ತರ ತುರ್ತು ಸೇವೆಗೆ ಆಯೋಜಿಸಲಾಗಿದ್ದ 24X7 ಸೇವೆ ಈಗ ರದ್ದುಗೊಂಡಿದೆ. ಬದಲಿಗೆ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಸೇವೆ ನೀಡಲಾಗುತ್ತಿದೆ.

ಕೊಲ್ಲೂರು ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಕೊರತೆ, ವಸತಿ ಗೃಹ ಸಹಿತ ಇಲ್ಲಿನ ಸಮಸ್ಯೆ ಬಗ್ಗೆ ಸರಕಾರದ ಗಮನ ಸೆಳೆಯ ಲಾಗಿದೆ. ರೋಗಿಗಳಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಲು ಮನವಿ ಮಾಡಲಾಗಿದೆ.
– ಶಂಕರ ಪೂಜಾರಿ, ಜಿ.ಪಂ. ಸದಸ್ಯ
ಕೊಲ್ಲೂರು ಕ್ಷೇತ್ರದಲ್ಲಿ 24×7 ಸೇವೆಯೊಡನೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕಾಗಿದೆ. ಈ ಬಗ್ಗೆ ಸರಕಾರವು ಹೆಚ್ಚಿನ ಆಸಕ್ತಿ ವಹಿಸಿ ಬೇಡಿಕೆ ಈಡೇರಿಸಬೇಕು.
– ಸಂದೀಪ್‌ ಕೊಲ್ಲೂರು, ಗ್ರಾಮಸ್ಥರು
Advertisement

Udayavani is now on Telegram. Click here to join our channel and stay updated with the latest news.

Next