Advertisement

ಹನಿ ನೀರಾವರಿ ಯೋಜನೆ ಅಪೂರ್ಣ: ದೊಡ್ಡನಗೌಡ

05:31 PM Apr 21, 2018 | |

ಇಳಕಲ್ಲ: ಹನಿ ನೀರಾವರಿ ಯೋಜನೆ ಸಂಪೂರ್ಣಗೊಳಿಸದೆ ಉದ್ಘಾಟಿಸಿ ಶಾಸಕ ವಿಜಯಾನಂದ ಕಾಶಪ್ಪನವರ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ ಆರೋಪಿಸಿದರು.

Advertisement

ಇಲ್ಲಿಯ ಎಸ್‌.ಆರ್‌. ಕಂಠಿ ವೃತ್ತದಲ್ಲಿ ಹಮ್ಮಿಕೊಳ್ಳಲಾದ ಬಹಿರಂಗ ಸಮಾರಂಭ ಹಾಗೂ ತಾಲೂಕು ದಲಿತ ಸಮಾಜ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಳಕಲ್ಲ ನಗರಕ್ಕೆ ಆಲಮಟ್ಟಿ ಡ್ಯಾಮಿನ ಹಿನ್ನೀರಿನಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ, 64 ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ, ಇಡೀ ತಾಲೂಕು ಹಸಿರಾಗಿಸುವ ಮಹತ್ತರ ಉದ್ದೇಶದಿಂದ ಆಧುನಿಕ ತಂತ್ರಜ್ಞಾನದ ಇಸ್ರೇಲ್‌ ಮಾದರಿಯ ಹನಿ ನೀರಾವರಿ ಯೋಜನೆ ಈ ಎಲ್ಲ ಯೋಜನೆಗಳು ನಮ್ಮ ಅವ ಧಿಯಲ್ಲಿ ಜಾರಿಯಾಗಿದ್ದು, ಐದು ವರ್ಷಗಳಾದರೂ ಈ ಯೋಜನೆಗಳನ್ನು ಪೂರ್ಣಗೊಳಿಸಲಾಗದೇ ಹೋದರು ನಾನೇ ಈ ಯೋಜನೆ ಜಾರಿಗೆ ತಂದದ್ದು, ಇದು ನಮ್ಮ ತಂದೆಯವರ ಕನಸು ಎಂದು ಬರೀ ಸುಳ್ಳು ಹೇಳುವ ಶಾಸಕರಿಗೆ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಸಾವಿತ್ರಿಬಾಯಿ ನಾಮದೇವ ಕೋಟೆಗಾರ ಹಾಗೂ ನಗರಸಭೆ ಸದಸ್ಯೆ ಶೋಭಾ ಸಿದ್ದಣ್ಣ ಆಮದಿಹಾಳ, ಮಂಜುನಾಥ ಹೊಸಮನಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಕಾಂಗ್ರೆಸ್‌ ಪಕ್ಷ ತೊರೆದುದಲ್ಲದೆ ತಮ್ಮ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿ, ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ ಎಂದರು.

ನಗರದ ಬಿಜೆಪಿ ಹಿರಿಯ ಮುಖಂಡ ಜಿ.ಪಿ. ಪಾಟೀಲ ಮಾತನಾಡಿ, ಇದೊಂದು ಅಭೂತಪೂರ್ವ ಐತಿಹಾಸಿಕ ಕಾರ್ಯಕ್ರಮ. ತಾಲೂಕಿನ ದಲಿತ ಸಮುದಾಯ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ನಮಗೆಲ್ಲ ಆನೆ ಬಲ ಬಂದಂತಾಗಿದೆ. ಪಕ್ಷದ ಕಾರ್ಯಕರ್ತರಲ್ಲಿ ಈಗಿರುವ ಹುಮ್ಮಸ್ಸು ಮೇ 12ರಂದು ನಡೆಯುವ ಮತದಾನ ಮುಗಿಯುವವರೆಗೂ ಇರಬೇಕು. ನಮಗೆ ಗೆಲುವು ಒಂದೇ ಗುರಿಯಾಗಿರಬೇಕು ಎಂದರು.

ದಲಿತ ಯುವ ಮುಖಂಡ ರಾಹುಲ ಸಿದ್ದಣ್ಣ ಆಮದಿಹಾಳ ಮಾತನಾಡಿ, ಇಂದಿನ ಶಾಸಕರ ಆಡಳಿತದಲ್ಲಿ ಉಸಿರುಗಟ್ಟುವ ವಾತಾವರಣ, ದುಂಡಾವರ್ತನೆ, ದೌರ್ಜನ್ಯ, ದುರಹಂಕಾರಕ್ಕೆ ಬೇಸತ್ತು ನಾವು ಕಾಂಗ್ರೆಸ್‌ ತೊರೆಯುವಂತಾಯಿತು. ಕಾಂಗ್ರೆಸ್ಸಿನಲ್ಲಿ ಹೇಗೆ ನಿಷ್ಠೆಗೆ ಹೆಸರಾಗಿದ್ದೇವೋ ಅದೇ ನಿಷ್ಠೆಯನ್ನು ಭಾರತೀಯ ಜನತಾ ಪಕ್ಷದಲ್ಲಿ ತೋರಿಸಿ ದೊಡ್ಡನಗೌಡ ಜಿ. ಪಾಟೀಲನ್ನು ಈ ಬಾರಿ ಗೆಲ್ಲಿಸಿ ನಮ್ಮನ್ನು ನಿರ್ಲಕ್ಷಿಸಿದ ವಿಜಯಾನಂದ ಕಾಶಪ್ಪನವರಿಗೆ ಕನಸಿನಲ್ಲೂ ಬಡಬಡಿಸುವಂತೆ ಮಾಡುತ್ತೇವೆ ಎಂದು ಹೇಳಿದರು.

Advertisement

ಬಿಜೆಪಿ ಮುಖಂಡರಾದ ವೀರೇಶ ಉಂಡೋಡಿ, ಮಲ್ಲಯ್ಯ ಮೂಗನೂರಮಠ, ಲಕ್ಷ್ಮಣ ಗುರಂ, ಮಹಾಂತಗೌಡ ಪಾಟೀಲ, ವೆಂಕಟೇಶ ಪೋತಾ, ಶಿವನಗೌಡ ಪಾಟೀಲ, ಮುಕ್ಕಣ್ಣ ಮುಕ್ಕಣ್ಣವರ, ದುರ್ಗೆಶ ಸುರಪುರ, ಮಂಜು ಶೆಟ್ಟರ, ಲಕ್ಷ್ಮಣ ಚಂದರಗಿ, ಮಂಜುನಾಥ ಚಲವಾದಿ, ಆನಂದ ಚಲವಾದಿ, ಪಂಪಣ್ಣ ಸಜ್ಜನ, ಅಜ್ಜಪ್ಪ ನಾಡಗೌಡ, ಅರವಿಂದ ಮಂಗಳೂರ, ಶ್ಯಾಮ ಕರವಾ, ಚಂದ್ರಶೇಖರ ಜಾಪಗಾಲ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next