Advertisement

ಸಹಕಾರಿ ಕ್ಷೇತ್ರ ಬಲವರ್ಧನೆಗೆ ಪ್ರಾಮಾಣಿಕತೆಯೇ ಆಧಾರ

01:52 PM Sep 06, 2022 | Team Udayavani |

ಕಲಬುರಗಿ: ಸಹಕಾರಿ ಕ್ಷೇತ್ರದ ಬಲವರ್ಧನೆ ಹಾಗೂ ಅಭಿವೃದ್ಧಿಯಲ್ಲಿ ಪ್ರಮಾಣಿಕತೆಯೇ ಆಧಾರವಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಜಿಲ್ಲಾ ಸಂಯೋಜಕ ಓಂಕಾರ ಧರಣೇಂದ್ರ ಹೇಳಿದರು.

Advertisement

ನಗರದ ಬ್ರಹ್ಮಪುರದ ಕೊಂಡೆದಗಲ್ಲಿಯ ಆದಿಶಕ್ತಿ ಸೌಹಾರ್ದ ಸಹಕಾರಿಯ ಐದನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ವಿಶ್ವಾಸದ ಪ್ರತೀಕವೇ ಸಹಕಾರಿಯಾಗಿದೆ. ಜೀವನದಲ್ಲಿ ಕಷ್ಟಗಳು ಇದ್ದೇ ಇರುತ್ತವೆ. ಹೀಗಾಗಿ ಕಷ್ಟಗಳನ್ನು ಎದುರಿಸುವ ನಿಟ್ಟಿನಲ್ಲಿ ಆರ್ಥಿಕ ಸದೃಢತೆ ಹೊಂದುವುದು ಅತಿ ಅಗತ್ಯವಾಗಿದೆ ಎಂದು ವಿವರಣೆ ನೀಡಿದರು.

ಹಿರಿಯ ಪತ್ರಕರ್ತ ಹಾಗೂ ಭೈರಾಮಡಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಣಮಂತರಾವ ಭೈರಾಮಡಗಿ ಮುಖ್ಯ ಅತಿಥಿಯಾಗಿ, ಸಾಲ ಪಡೆಯುವುದು ಎಷ್ಟು ಮುಖ್ಯವೋ ಸಾಲ ಮರು ಪಾವತಿ ಮಾಡುವುದೇ ಅಷ್ಟು ಮಹತ್ವವಾಗಿದೆ ಎಂದು ಹೇಳಿದರು.

ಮುಖಂಡ ರಾಮು ಗುಮ್ಮಟ ಮಾತನಾಡಿ, ಕೊಂಡೆದಗಲ್ಲಿಯ ಜನರ ಸಂಘಟನೆ ಹಾಗೂ ಒಗ್ಗಟ್ಟು ಇಡೀ ಮಹಾನಗರಕ್ಕೆ ಮಾದರಿಯಾಗಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿಗೆ ಸದಸ್ಯರಾಗಿ ನೇಮಕಗೊಂಡ ಹಣಮಂತರಾವ ಭೈರಾಮಡಗಿ ಅವರನ್ನು ಸನ್ಮಾನಿಸಲಾಯಿತು. ಆದಿಶಕ್ತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಜು ನವಲದಿ ಅಧ್ಯಕ್ಷತೆ ವಹಿಸಿದ್ದರು. ನವದುರ್ಗಾ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ಮೀನಾಕ್ಷಿ ರಮೇಶ ಹೊಸಪೇಟೆ, ಪ್ರಾರ್ಥನಾ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷ ರಮಾದೇವಿ ಜಗದೀಶ ಮೂಕಿ ಸೇರಿದಂತೆ ಮುಂತಾದವರಿದ್ದರು. ಅದಿಶಕ್ತಿ ಸೌಹಾರ್ದ ಸಹಕಾರಿ ನಿಯಮಿತದ ಕಾರ್ಯದರ್ಶಿ ಬಸವರಾಜ ಅಷ್ಟಗಿ ವರದಿ ಓದಿದರು. ಪ್ರತೀಮಾ ಕೊಂಡೆದ್‌ ಪ್ರಾರ್ಥಿಸಿದರು. ರಮೇಶ ಹೊಸಪೇಟೆ ಸ್ವಾಗತಿಸಿದರು. ನಿರ್ದೇಶಕ ಬಾಲಚಂದ್ರ ನೆಲ್ಲೂರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next