Advertisement

ಪ್ರಾಮಾಣಿಕತೆಗೆ ಸಿಕ್ಕಿದೆ ಮನ್ನಣೆ, ಒಳಒಪ್ಪಂದದ ಪ್ರಶ್ನೆ ಇಲ್ಲ

06:25 AM Apr 23, 2018 | |

ಬೆಳಗಾವಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹಾಗೂ ಚಿಕ್ಕೋಡಿ ಸದಲಗಾ ವಿಧಾನಸಭಾ ಕ್ಷೇತ್ರ ಈಗ ಎಲ್ಲರ ಕುತೂಹಲದ ಕೇಂದ್ರಬಿಂದು. ಇಲ್ಲಿ ಕಾಂಗ್ರೆಸ್‌ನ ಅಪ್ಪ ಮತ್ತು ಮಗನ ರಾಜಕೀಯ ವಾದರೆ, ಬಿಜೆಪಿಯಿಂದ ಪತಿ ಪತ್ನಿಯ ರಾಜಕೀಯವಿದೆ.

Advertisement

ಪ್ರಕಾಶ ಹುಕ್ಕೇರಿ ಮತ್ತು ಮಗ ಗಣೇಶ ಹುಕ್ಕೇರಿ ತಂದೆ ಮಗ ಜೋಡಿ ಒಂದೆಡೆ ಯಾದರೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಶಿಕಲಾ ಜೊಲ್ಲೆ ಇನ್ನೊಂದೆಡೆ. 

ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ನಿಪ್ಪಾಣಿ ಕ್ಷೇತ್ರದಿಂದ ಪುನರಾಯ್ಕೆ ಬಯಸಿದ್ದರೆ ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ  ಸದಲಗಾ ಕ್ಷೇತ್ರದಿಂದ ಮತ್ತೂಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 2004ರಲ್ಲಿ ಚಿಕ್ಕೋಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಆಣ್ಣಾಸಾಹೇಬ ಜೊಲ್ಲೆ ಆಗ ಪ್ರಕಾಶ ಹುಕ್ಕೇರಿ ವಿರುದ್ಧ ಸೋತಿದ್ದರು. ಈಗ ಮಗನ ವಿರುದ್ಧ ಸ್ಪರ್ಧೆ ಮಾಡಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯ 3 ಪ್ರಶ್ನೆಗೆ ಜೊಲ್ಲೆ ದಂಪತಿಯ ಮೂರುತ್ತರ ಇಲ್ಲಿದೆ.

ಇಬ್ಬರಿಗೂ ಬಿಜೆಪಿ ಟಿಕೆಟ್‌ ಅಚ್ಚರಿ ಆಯ್ತಾ?
      ಒಂದೇ ಮನೆಯಲ್ಲಿ ಇಬ್ಬರಿಗೆ ಅದರಲ್ಲೂ ಪತಿ ಪತ್ನಿಗೆ ಟಿಕೆಟ್‌ ಕೊಡುವ ಸಂಪ್ರದಾಯ ಇರಲಿಲ್ಲ. ಅದೂ ಬಿಜೆಪಿಯಲ್ಲಿ ನಾವು ನೋಡಿಲ್ಲ. ಅಂತಹ ದೊಡ್ಡ ಅವಕಾಶ ನಮಗೆ ಸಿಕ್ಕಿದೆ. ನಾವು ಟಿಕೆಟ್‌ ಕೇಳಿರಲಿಲ್ಲ. ಆದರೆ ಬಿಜೆಪಿ ವರಿಷ್ಠರು ನಮ್ಮಲ್ಲಿ ಏನೋ ವಿಶೇಷ ನೋಡಿದ್ದಾರೆ. ನಮ್ಮ ಪ್ರಾಮಾಣಿಕ ಕೆಲಸ ಹಾಗೂ ಸಮಾಜ ಸೇವೆ ಅವರಿಗೆ ಮೆಚ್ಚುಗೆಯಾಗಿದೆ. ನಾನು ಶಾಸಕಿಯಾಗುವ ಮೊದಲು 2013ರಿಂದ 2017ರವರೆಗೆ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಯಾಗಿ ಕೆಲಸ ಮಾಡಿದ್ದೇನೆ. ನನ್ನ ಪತಿ ಅಣ್ಣಾ ಸಾಹೇಬ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿ ದ್ದಾರೆ. ಇದೆಲ್ಲವನ್ನು ಗಮನಿಸಿ ಅಮಿತ್‌ ಶಾ ನಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ.

ಪತಿ ಮತ್ತು ಪತ್ನಿಯರ ನಿರೀಕ್ಷೆ ಏನು?
       30 ವರ್ಷಗಳಲ್ಲಿ ಚಿಕ್ಕೋಡಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಪೈಪೋಟಿ ಎಂದರೆ ಅದು ಜೊಲ್ಲೆ ಹಾಗೂ ಹುಕ್ಕೇರಿ ಕುಟುಂಬದ ಸೆಣಸಾಟ ಎಂಬ ಮಾತಿದೆ. ಈ ಬಾರಿ ನಾವು ಸೆಣಸಾಟ ದಲ್ಲಿ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಲಿದ್ದೇವೆ. ಚಿಕ್ಕೋಡಿ ಸದಲಗಾದಲ್ಲಿ ತೀವ್ರ ಪೈಪೋಟಿ ನೀಡಲಿ ದ್ದೇವೆ. ಸಹಕಾರ ಕ್ಷೇತ್ರದಲ್ಲಿ ನಾವು ಕಂಡಿರುವ ಯಶಸ್ಸನ್ನು ರಾಜಕಾರಣದಲ್ಲೂ ಕಾಣಲು ಬಯಸಿ ದ್ದೇವೆ. ಇದೇ ನಮ್ಮ ಮುಖ್ಯ ನಿರೀಕ್ಷೆ.

Advertisement

5 ವರ್ಷದಲ್ಲಿ  ಏನು ಮಾಡಿದ್ದೀರಿ ನೀವು?
        ನಾವು ರಾಜಕಾರಣದ ಜೊತೆಗೆ ಸಮಾಜ ಸೇವೆ ಮಾಡುತ್ತಿದ್ದೇವೆ. ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಗಮನ ಹರಿಸಿದ್ದೇವೆ. ಐದು ವರ್ಷಗಳಲ್ಲಿ ಮಹಿಳಾ ಶಾಸಕಿ ಏನು ಮಾಡ ಬಹುದು ಎಂದು ನಾನು ತೋರಿಸಿ ಕೊಟ್ಟಿ ದ್ದೇನೆ. ನಿಪ್ಪಾಣಿ ಕ್ಷೇತ್ರಕ್ಕೆ 750 ಕೋಟಿ ರೂ. ಅನುದಾನ ತಂದು ರಸ್ತೆ, ನೀರು ಮೊದ ಲಾದ ಮೂಲಭೂತ ಸೌಲಭ್ಯ ಕಲ್ಪಿಸಿದ್ದೇನೆ.
   – ಶಶಿಕಲಾ ಜೊಲ್ಲೆ ನಿಪ್ಪಾಣಿ

ಚಿಕ್ಕೋಡಿ ಕ್ಷೇತ್ರದಲ್ಲಿ ರಾಜಕೀಯ ಒಳಒಪ್ಪಂದ ನಡೆಯಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ನಿಜವೇ ?
        ಇದು ಸುಳ್ಳು. ರಾಜಕೀಯ ಒಳ ಒಪ್ಪಂದದ ಮಾತೇ ಇಲ್ಲ. ನಾನು ಬಿಜೆಪಿ ಅಭ್ಯರ್ಥಿ. ಜಯ ನನ್ನ ಗುರಿ. ಈ ಹಿಂದೆ ಜನರು ಈ ರೀತಿ ಮಾತನಾಡುತ್ತಿದ್ದರು. ನಾನು ಎಂದಿಗೂ ಒಳಒಪ್ಪಂದ ಮಾಡಿಕೊಂಡಿಲ್ಲ. ಮುಂದೆಯೂ ಮಾಡಿಕೊಳ್ಳುವುದಿಲ್ಲ.

ಒಂದೇ ಮನೆಯ ಇಬ್ಬರಿಗೂ ಟಿಕೆಟ್‌ ನಿರೀಕ್ಷೆ ಇತ್ತೇ?
        ನಿರೀಕ್ಷೆ ಮಾಡಿದ್ದೆ. ಅಧಿಕಾರದಲ್ಲಿ ಇರದೇ ಇದ್ದರೂ ಸಮಾಜ ಸೇವೆ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದ್ದೆ. ರಾಜಕಾರಣದ ಜೊತೆಗೆ ಸಮಾಜಸೇವೆಯೂ ನಮ್ಮ ಮುಖ್ಯ ಕಾಯಕ. ರಾಜಕಾರಣ ಮಾಡದೆ ಏನು ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಈ ಎಲ್ಲ ಶ್ರಮದ ಫಲವಾಗಿ ಟಿಕೆಟ್‌ ಸಿಕ್ಕಿದೆ.

ಕಳೆದ ಬಾರಿಗೂ ಈ ಬಾರಿಗೂ ವ್ಯತ್ಯಾಸ?
         ಏನೂ ವ್ಯತ್ಯಾಸ ಕಾಣುತ್ತಿಲ್ಲ. 2004ರಲ್ಲಿ ಪ್ರಕಾಶ ಹುಕ್ಕೇರಿ ವಿರುದ್ಧ ಬಿಜೆಪಿ ಯಿಂದ ಸ್ಪರ್ಧೆ ಮಾಡಿ ಸೋತಿದ್ದೆ. ಆದರೆ ಇದರಿಂದ ಹಿಂದೆ ಸರಿಯಲಿಲ್ಲ. ಬದಲಾಗಿ ಸಮಾಜ ಸೇವೆ ಮೂಲಕ ಜನರಿಗೆ ಹತ್ತಿರವಾದೆ. ಜನರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿದೆ. ಸಮಾಜಸೇವೆಯ ಜತೆಗೆ ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷನಾಗಿ ರಾಜಕೀಯ ಕಾರ್ಯ ಮಾಡಿದೆ. ಹೀಗಾಗಿ ನನಗೆ ಏನೂ ವ್ಯತ್ಯಾಸ ಕಾಣುವುದಿಲ್ಲ. ಆಗ ಅಪ್ಪನ ವಿರುದ್ಧ ಸ್ಪರ್ಧೆ ಮಾಡಿದ್ದೆ. ಈಗ ಅವರ ಮಗನ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ. ಇದೊಂದೇ ವ್ಯತ್ಯಾಸ. ನಮಗೆ ನೂರಕ್ಕೆ ನೂರರಷ್ಟು ಗೆಲುವಿನ ವಿಶ್ವಾಸ ಇದೆ. ನಾವು ಮಾಡಿದ ಕಾರ್ಯ, ಪ್ರಧಾನಿ ಮೋದಿ ಅಲೆ. ಬಿಜೆಪಿ ಜನರ ಒಲವು ನಮ್ಮ ನೆರವಿಗೆ ಬರಲಿದೆ. 
– ಅಣ್ಣಾಸಾಹೇಬ ಜೊಲ್ಲೆ

ಸಂದರ್ಶನ: ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next