Advertisement

ಪ್ರಾಮಾಣಿಕತೆ, ಶ್ರದ್ಧೆಯಿಂದ ಯಶಸ್ಸು :ಡಾ|ದೇವೇಶ್‌

08:40 AM Jun 30, 2018 | Harsha Rao |

ಮಂಗಳೂರು: ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ಪದವೀಧರ ವಿದ್ಯಾರ್ಥಿಗಳಿಗೆ ಒಂಬತ್ತನೇ ವರ್ಷದ ಪದವಿ ಪ್ರದಾನ ಶುಕ್ರವಾರ ನಡೆಯಿತು. 160 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನಿಸಲಾಯಿತು.

Advertisement

ಈವೈ ಇಂಡಿಯಾ ಫೈನಾನ್ಶಿಯಲ್‌ ಅಕೌಂಟಿಂಗ್‌ ಅಡ್ವೆಸರಿ ಸರ್ವಿಸಸ್‌ನ ಅಸೋಸಿಯೇಟ್‌ ಪಾಟ್ನìರ್‌ ಡಾ| ದೇವೇಶ್‌ ಪ್ರಕಾಶ್‌ ಮುಖ್ಯ ಅತಿಥಿಯಾಗಿದ್ದರು.  ಪ್ರಾಮಾಣಿಕತೆ, ಶ್ರದ್ಧೆ ಮತ್ತು ಯಾವುದೇ ಭಯವಿಲ್ಲದೆ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂದರು.

ಲಿಂಕ್ಡ್ಇನ್‌ ಪರಿಹಾರ ಮತ್ತು ಲಾಭಾಂಶಗಳ ಹಿರಿಯ ವ್ಯವಸ್ಥಾಪಕ ಚೇತಕ್‌ ಲೋಡಾಯ ಗೌರವ ಅತಿಥಿಯಾಗಿದ್ದರು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸ‌ಬೇಕು. 

ಎಲ್ಲ ವೃತ್ತಿಪರರು ಇತರರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಬೇಕು ಎಂದರು.
ಎಂಬಿಎ ವಿದ್ಯಾರ್ಥಿಗಳಿಗೆ ಅರ್ಹತಾ ಶಿಕ್ಷಣಕ್ಕಾಗಿ “ಎರ್ನ್Õ   r ಮತ್ತು ಯಂಗ್‌’ ಜತೆಗೆ ಎಂಒಯು ಸಹಿ ಹಾಕಲಾಯಿತು. 

ಸಹ್ಯಾದ್ರಿ ಕಾಲೇಜಿನ ಡಿಪಾಟೆ¾ìಂಟ್‌ ಆಫ್‌ ಬಿಸಿನೆಸ್‌ ಅಡ್ಮಿನಿಸ್ಟ್ರೇಶನ್‌ ನಿರ್ದೇಶಕ ಡಾ| ವಿಶಾಲ್‌ ಸಮರ್ಥ ಸ್ವಾಗತಿಸಿದರು. 

Advertisement

ಸಹ್ಯಾದ್ರಿ ವಿದ್ಯಾರ್ಥಿಗಳು ಅವರ ಅಧ್ಯಯನದ ಸಮಯದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯತಂತ್ರ ಯೋಜನೆಯ ನಿರ್ದೇಶಕ ಡಾ| ಉಮೇಶ್‌ ಎಂ. ಭೂಶಿ, ಉಪಪ್ರಾಂಶುಪಾಲರಾದ ಪ್ರೊ| ಬಾಲಕೃಷ್ಣ ಎಸ್‌ ಎಸ್‌., ಪ್ರಮುಖರಾದ ಡಾ| ಜೆ.ವಿ. ಗೋರ್ಬಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next